ತಮಿಳುನಾಡಿನ ನೂತನ ಸಿಎಂ ದಳಪತಿ ವಿಜಯ್ ಅವರನ್ನು ಭೇಟಿಯಾದ ನಟಿ ಸಮಂತಾ ರುತ್ ಪ್ರಭು 
ದೇಶ

ಅವರು ಕೇವಲ ಪರದೆ ಮೇಲಿನ ಹೀರೋ ಅಲ್ಲ.. ಸಿಎಂ ವಿಜಯ್​ ಬೇಟಿಯಾದ ಸಮಂತಾ; ದಳಪತಿ ಧೈರ್ಯಕ್ಕೆ ಸ್ಯಾಮ್​ ಸಲಾಂ! Samantha on Thalapathy Vijay

ಪ್ರಮುಖ ಮುಖ್ಯಾಂಶಗಳು

  • ತಮಿಳುನಾಡಿನ ನೂತನ ಸಿಎಂ ದಳಪತಿ ವಿಜಯ್ ಅವರನ್ನು ಭೇಟಿಯಾದ ನಟಿ ಸಮಂತಾ ರುತ್ ಪ್ರಭು
  • ಅವರು ಕೇವಲ ಪರದೆ ಮೇಲಿನ ಹೀರೋ ಅಲ್ಲ: ಸಮಂತಾ
  • ವಿಜಯ್ ರಾಜಕೀಯ ಧೈರ್ಯಕ್ಕೆ ನಟಿ ಸಮಂತಾ ಸಲಾಂ
  • ಸೋಷಿಯಲ್​ ಮೀಡಿಯಾನಲ್ಲಿ ಭಾವುಕ ಫೋಸ್ಟ್
ತಮಿಳುನಾಡು: ಕೇವಲ ಟಾಲಿವುಡ್ ಮಾತ್ರವಲ್ಲದೆ ಇಡೀ ಸೌತ್ ಸಿನಿಪ್ರೇಕ್ಷಕರ ಹಾಟ್ ಫೇವರಿಟ್ ಜೋಡಿ ಎಂದರೆ, ಅದು ಸಮಂತಾ ರುತ್ ಪ್ರಭು ಮತ್ತು ದಳಪತಿ ವಿಜಯ್. ಬೆಳ್ಳಿ ಪರದೆಯ ಮೇಲೆ ಬ್ಯಾಕ್ಟು-ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಜನರ ಮನಸ್ಸು ಗೆದ್ದಿದ್ದ ಈ ಜೋಡಿ, ಈಗ ಮತ್ತೆ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 
ಹೌದು, ನಟಿ ಸಮಂತಾ (Samantha on Thalapathy Vijay) ಇತ್ತೀಚೆಗಷ್ಟೇ ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ತನ್ನ ವಿಜಯ್ ದಳಪತಿ ವಿಜಯ್ ರನ್ನು ಭೇಟಿಯಾಗಿ ಶುಭ ಕೋರಿದ್ದಾರೆ. 
ಸಿಎಂ ಕಚೇರಿಯಲ್ಲಿ ನಡೆದ  ಭೇಟಿಯ ಸುಂದರ ಫೋಟೋಗಳನ್ನು ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರ ಫೋಟೋಗಳು ಸಾಕಷ್ಟು ಸದ್ದು ಮಾಡುತ್ತಿವೆ.

ಮಿಂಚಿದ ಸಮಂತಾ ಭಾವುಕ ಪೋಸ್ಟ್!

ವಿಜಯ್ ಅವರನ್ನು ಭೇಟಿಯಾಗಲು ಸಮಂತಾ ಸಾಂಪ್ರದಾಯಿಕ ಕೆಂಪು ಸೀರೆ ಮತ್ತು ಹಳದಿ ಬ್ಲೌಸ್ ಧರಿಸಿ ತುಂಬಾ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದರು. ಫೋಟೋಗಳ ಜೊತೆಗೆ ಸಮಂತಾ ಹಂಚಿಕೊಂಡಿರುವ ಸುದೀರ್ಘವಾದ ಸಂದೇಶ ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಇಂದು ನಾನು ಚೆನ್ನೈಗೆ ಬಂದಾಗ ಮನಸ್ಸಿಗೆ ಒಂಥರಾ ಅಪಾರ ಸಂತೋಷವಾಯಿತು. ಯಾಕಂದ್ರೆ ನಾನು ನಮ್ಮ ಸಿಎಂ ಅವರನ್ನು ಭೇಟಿಯಾಗಬೇಕಿತ್ತು. ವಿಜಯ್ ಸರ್ ಅವರನ್ನು ನಾನು ಯಾವತ್ತೂ ಕೇವಲ ಪರದೆಯ ಮೇಲಿನ ಹೀರೊ ಅಂತ ಭಾವಿಸಿಲ್ಲ. 
ಅವರಲ್ಲಿರುವ ಶಕ್ತಿ, ವ್ಯಕ್ತಿತ್ವ ಮತ್ತು ಜನ ಅವರನ್ನ ನೋಡೋ ರೀತಿ ಇದೆಯಲ್ಲಾ, ಅದನ್ನ ನೋಡಿದಾಗಲೇ ಇವರು ಜೀವನದಲ್ಲಿ ಏನೋ ದೊಡ್ಡದನ್ನ ಸಾಧಿಸೋಕೆ ಹುಟ್ಟಿದ್ದಾರೆ ಅಂತ ಅನ್ಸುತ್ತಿತ್ತು ಎಂದು ಸಮಂತಾ ಬರೆದುಕೊಂಡಿದ್ದಾರೆ.

ವಿಜಯ್ ಸರ್ ಧೈರ್ಯಕ್ಕೆ ನಾನು ಫಿದಾ!

ಸಿನಿಮಾ ರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದ ವಿಜಯ್, ಅದನ್ನೆಲ್ಲ ಬಿಟ್ಟು ರಾಜಕೀಯ ಎಂಬ ಹೊಸ ಅಖಾಡಕ್ಕೆ ಧುಮುಕಿದ್ದನ್ನು ಸಮಂತಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ನಾವು ಈಗಾಗಲೇ ಸಾಧಿಸಿರುವ, ನಮಗೆ ಕರಗತವಾಗಿರುವ ಕಂಫರ್ಟ್ ಜೋನ್‌ನಿಂದ ಹೊರಬಂದು, ಇಂಥದ್ದೊಂದು ದೊಡ್ಡ ಸವಾಲನ್ನು ಸ್ವೀಕರಿಸಲು ಭಾರಿ ಧೈರ್ಯ ಬೇಕು. 
ವಿಜಯ್​ ಅವರು ರಾಜಕೀಯ ಸುಲಭ ಎಂದು ಇಲ್ಲಿಗೆ ಬಂದಿಲ್ಲ, ಬದಲಿಗೆ ಸಮಾಜದಲ್ಲಿ ಒಂದು ದೊಡ್ಡ ಬದಲಾವಣೆ ತರಬಲ್ಲೆ ಎನ್ನುವ ನಂಬಿಕೆಯಿಂದ ಬಂದಿದ್ದಾರೆ. ಅವರ ಈ ಧೈರ್ಯ ನನಗೆ ತುಂಬಾ ಸ್ಫೂರ್ತಿ ನೀಡಿದೆ ಎಂದು ಸ್ಯಾಮ್ ಕೊಂಡಾಡಿದ್ದಾರೆ. ಕೊನೆಯಲ್ಲಿ, ನಮ್ಮ ಸಿಎಂ ಅವರಿಗೆ ಈ ಹೊಸ ಹಾದಿಯಲ್ಲಿ ಮುನ್ನಡೆಯಲು ಬೇಕಾದ ಶಕ್ತಿ, ಬುದ್ಧಿವಂತಿಕೆ ಮತ್ತು ಧೈರ್ಯ ಸಿಗಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ. 

ಹಳೇ ನೆನಪುಗಳಿಗೆ ಜಾರಿದ ಫ್ಯಾನ್ಸ್!

ಸಮಂತಾ ಮತ್ತು ವಿಜಯ್ ಒಟ್ಟಿಗೆ ಇರುವ ಫೋಟೋಗಳನ್ನು ನೋಡಿದ ತಕ್ಷಣ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಿ ಕಣ್ಣು ತುಂಬಿ ಬಂತು, ಬೆಸ್ಟ್ ಆನ್-ಸ್ಕ್ರೀನ್ ಜೋಡಿ ಈಗ ಸಿಎಂ ಆಫೀಸ್‌ನಲ್ಲಿ, ನಿಜಕ್ಕೂ ನನ್ನ ದಿನ ಇವತ್ತು ಸೂಪರ್ ಆಯ್ತು ಎಂದೆಲ್ಲಾ ಕಮೆಂಟ್ಸ್ ಹರಿಬಿಡುತ್ತಿದ್ದಾರೆ.
ಎ.ಆರ್. ಮುರುಗದಾಸ್ ನಿರ್ದೇಶನದ ಕತ್ತಿ (2014) ಸಿನಿಮಾದಲ್ಲಿ ಮೊದಲ ಬಾರಿಗೆ ವಿಜಯ್​ ಮತ್ತು ಸಮಂತಾ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆಮೇಲೆ ಅಟ್ಲೀ ನಿರ್ದೇಶನದ ಥೇರಿ (2016) ಮತ್ತು ಮೆರ್ಸಲ್ (2017) ನಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಈ ಜೋಡಿ ನೀಡಿತ್ತು, (ಏಜನ್ಸೀಸ್​).