ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮುಖಕ್ಕೆ ಮಸಿ ಬಳಿದಿ ಮಹಿಳೆ
- ದೆಹಲಿಯ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್‌ಚುಕ್ ಪ್ರತಿಭಟನೆ
- ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ ಮುಖಕ್ಕೆ ಮಸಿ ಬಳಿದಿ ಮಹಿಳೆ
- ‘ಶ್ರೀರಾಮನ ಅಪಹಾಸ್ಯ ಸಹಿಸಲ್ಲ’ ಎಂದ ಬರ್ಖಾ ತೆಹ್ರಾನ್
ನವದೆಹಲಿ: ನೀಟ್ ಪರೀಕ್ಷೆ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮವನ್ನು ವಿರೋಧಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಪರಿಸರವಾದಿ ಸೋನಮ್ ವಾಂಗ್‌ಚುಕ್ ಕಾಕ್ರೋಜ್ ಜನತಾ ಪಾರ್ಟಿಯ ಬೆಂಬಲದೊಂದಿದೆ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದರು.
ಶನಿವಾರ (ಜು.18) ಸೋನಮ್ ವಾಂಗ್‌ಚುಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ, ಹಾಗೂ ನ್ಯಾಯಾಲಯದ ಆದೇಶವನ್ನು ಪಾಲಿಸುತ್ತಾ ದೆಹಲಿ ಪೊಲೀಸರು ವಾಂಗ್‌ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪೊಲೀಸರು ಹಠಾತ್ತನೆ ಪ್ರತಿಭಟನಾ ಸ್ಥಳಕ್ಕೆ ಬಂದು, ಸೋನಮ್ ವಾಂಗ್‌ಚುಕ್ ಅವರನ್ನು ಕರೆದೊಯ್ದಿದನ್ನು ಸಿಜೆಪಿ ಸ್ಥಾಪಕ ಅಭಿಜಿತ್ ದೀಪ್ಕೆ (Abhijit Dipke) ವಿರೋಧಿಸುತ್ತಾ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬಳು ದೀಪ್ಕೆ ಮುಖಕ್ಕೆ ಮಸಿ (ಶಾಯಿ) ಬಳಿದಿದ್ದಾರೆ.
ನಾನೊಬ್ಬ ಖಟ್ಟರ್ ಹಿಂದೂ!
ಅಭಿಜಿತ್ ದೀಪ್ಕೆ ಮುಖಕ್ಕೆ ಮಸಿ ಬಳಿದ ಮಹಿಳೆ, ಸಾಮಾಜಿಕ ಜಾಲತಾಣದಲ್ಲಿ ತಾನು ಏಕೆ ಈ ರೀತಿ ಮಾಡಿದೆ ಎನ್ನುವುದಕ್ಕೆ ಸ್ಪಷ್ಟಿಕರಣ ನೀಡಿದ್ದಾಳೆ.
ಬರ್ಖಾ ತೆಹ್ರಾನ್ ಎಂಬ ಟ್ವಿಟರ್ ಖಾತೆಯಿಂದ ಈ ಪೋಸ್ಟ್ ಹಂಚಿಕೆಯಾಗಿದ್ದು, ನಾನು ಬರ್ಖಾ ಟ್ರೆಹಾನ್, ಆ ನಗರ ನಕ್ಸಲ್ ಅಭಿಜಿತ್ ದೀಪ್ಕೆ ಪ್ರಭು ಶ್ರೀರಾಮನನ್ನು ಅಪಹಾಸ್ಯ ಮಾಡುತ್ತಾ ನಗುತ್ತಿದ್ದ. ನಾನೊಬ್ಬಳು ಖಟ್ಟರ್ ಹಿಂದೂ ಆಗಿರುವ ಕಾರಣಕ್ಕೆ ಅವನ ಮುಖಕ್ಕೆ ಮಸಿ ಬಳಿದಿದ್ದೆನೆ ಎಂದು ಅವರು ಬರೆದುಕೊಂಡಿದ್ದಾರೆ.
ನಾನೊಬ್ಬ ಹಿಂದೂ ಯುವತಿಯಾಗಿ ನನಗೆ ಅಭಿಜಿತ್ ದೀಪ್ಕೆ ನನ್ನ ದೇವರ ಮೇಲೆ ಮಾಡಿರುವ ಹಾಸ್ಯವನ್ನು ಸಹಿಸಿಕೊಳ್ಳಲು ಆಗಲಿಲ್ಲ. ಆದ್ದರಿಂದ ನಾನು ಈ ಕೆಲಸವನ್ನು ಮಾಡಿದ್ದೆನೆ, ಜೈ ಹಿಂದ್, ಜೈ ಶ್ರೀರಾಮ್ ಎಂದು ಅವರು ಹೇಳಿದ್ದಾರೆ.
ನಾನು ಉಪವಾಸ ಮಾಡುತ್ತೇನೆ!
ಸೋನಮ್ ವಾಂಗ್ಚುಕ್ರನ್ನು ಪೊಲೀಸರು ಕರೆದುಕೊಂಡು ಹೋಗುತ್ತಿದ್ದಂತೆ ಪ್ರತಿಭಟನಾ ಸ್ಥಳದಲ್ಲಿ ಕೆಲಕಾಲ ಉದ್ವಗ್ನ ಪರಿಸ್ಥಿತಿ ಕಂಡುಬಂದಿತು. ನಂತರ ನೆರೆದಿದ್ದ ಪ್ರತಿಭಟನಾಕಾರರ ಎದುರಿಕೆ ಬಂದ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜಿತ್ ದೀಪ್ಕೆ, ನಾನು ಇಂದಿನಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿತ್ತು, ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಸಹ ಮಾಡಿದ್ದಾರೆ, (ಏಜನ್ಸೀಸ್).