ನವದೆಹಲಿ: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲ ಬದಲಾವಣೆಗಳನ್ನು ಬಯಸಿ ಬ್ಯಾಂಕ್ ಉದ್ಯೋಗಿಗಳು ದೇಶಾದ್ಯಂತ ಹೋರಾಟಕ್ಕೆ ಮುಂದಾಗಿದ್ದು, ಕೊನೆ ಕ್ಷಣದಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದಿದ್ದರು.
ಆದರೆ, ಬ್ಯಾಂಕ್ ಉದ್ಯೋಗಿಗಳ ಬೇಡಿಕೆಗಳಲ್ಲಿ ಒಂದಾಗಿದ್ದ ಶನಿವಾರದ ರಜೆಯನ್ನು ಸರ್ಕಾರ ಮನ್ನಿಸಿದ್ದು, ಕೇಂದ್ರ ಆರ್ಥಿಕ ಇಲಾಖೆಯು ತಕ್ಷಣದಿಂದ ಜಾರಿಯಾಗುವಂತೆ ವಾರದ ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆಯನ್ನು ಘೋಷಿಸಿ ಗೆಜೆಟ್ ಆದೇಶವನ್ನು ಹೊರಡಿಸಿದೆ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾನಲ್ಲಿ ಸಕಾಷ್ಟು ಹಂಚಿಕೆಯಾಗುತ್ತಿತ್ತು.
ಆದರೆ, ಪ್ರೆಸ್ ಇನ್ಫಾರ್ಮೇಷನ್ ಬ್ಯೂರೊ ನಡೆಸಿರುವ ಫ್ಯಾಕ್ಟ್ಚೆಕ್ ಪ್ರಕಾರ, ಇದೊಂದು ಸುಳ್ಳು ಸುದ್ದಿಯಾಗಿದ್ದು, ಯಾರು ಇದನ್ನು ನಂಬಬಾರೆಂದು ವಿನಂತಿ ಮಾಡಿದೆ. ಕೇಂದ್ರ ಆರ್ಥಿಕ ಇಲಾಖೆ ಹೊರಡಿಸಿರುವ ಗೆಜೆಟ್ ಆದೇಶ ಎಂದು ಹೇಳಿರುವ ಈ ಪ್ರತಿ ಅಮಾನ್ಯವೆಂದು, ಈ ರೀತಿಯ ಯಾವುದೇ ಆದೇಶ ಪ್ರಕಟಗೊಂಡಿಲ್ಲವೆಂದು PIB ತಿಳಿಸಿದೆ.
ಹೀಗಾಗಿ ಅಧಿಕೃತ ಆದೇಶ ಹೊರಬರದ ಹಿನ್ನಲೆ, ಈ ಮೊದಲಿದ್ದಂತೆ ಎರಡನೇ ಹಾಗೂ ನಾಲ್ಕನೇ ಶನಿವಾರ ಮಾತ್ರ ಬ್ಯಾಂಕ್‌ಗಳಿಗೆ ರಜೆ ಮುಂದುವರಿಯಲಿದ್ದು, ಮೊದಲ ಹಾಗೂ ಮೂರನೇ ಶನಿವಾರ ಯಥಾ ಪ್ರಕಾರ ಬ್ಯಾಂಕ್ ಸೇವೆ ಚಾಲ್ತಿಯಲ್ಲಿರಲಿದೆ.
ಭಾರತದಾದ್ಯಂತ ಬ್ಯಾಂಕ್ ನೌಕಕರು ಮುಷ್ಕರಕ್ಕೆ ಕರೆ ಕೊಟ್ಟಿದ್ದು ಅಕ್ಟೋಬರ್ 26 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್ಗಳ ಸಂಘ (IBA) ಘೋಷಿಸಿತ್ತು. ಆದರೆ ಕೊನೆ ಕ್ಷಣದಲ್ಲಿ, ಕೇಂದ್ರ ಸರ್ಕಾರದ ಉನ್ನತ ಮಟ್ಟದಲ್ಲಿ ಸಭೆ ನಡೆಸಿದ ಹಿನ್ನಲೆ ಈ ಮುಷ್ಕರವನ್ನು ಹಿಂಪಡೆದುಕೊಂಡಿತ್ತು.
ಮುಷ್ಕರ ಹಿಂಪಡೆದ ನಂತರ, ಭಾರತೀಯ ಬ್ಯಾಂಕ್ಗಳ ಸಂಘ (IBA) ಹಾಗೂ ಬ್ಯಾಂಕ್ ಯೂನಿಯನ್ ಒಕ್ಕೂಟ, ಆಂತರಿಕ ಸಭೆ ಕರೆದು, ಪ್ರತಿ ಶನಿವಾರ ಬ್ಯಾಂಕ್‌ಗಳಿಗೆ ರಜೆ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿತ್ತು.
ಬ್ಯಾಂಕ್ ನೌಕರರ ಒತ್ತಾಯಕ್ಕೆ ಮಣಿದ ಕೇಂದ್ರ ಸರ್ಕಾರ ಇನ್ಮುಂದೆ ವಾರದಲ್ಲಿ ಕೇವಲ 5 ದಿನ ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸುತ್ತದೆ ಹಾಗೂ ವಾರದ ಪ್ರತಿ ಶನಿವಾರ ಹಾಗೂ ಭಾನುವಾರ ಕಡ್ಡಾಯವಾಗಿ ರಜೆ ಇರಲಿದೆ ಎಂದು ಘೋಷಿಸಿದೆ ಎಂದು ಈ ಸುಳ್ಳು ಆದೇಶ ಪ್ರತಿಯಲ್ಲಿ ನಮೂದಿಸಲಾಗಿದೆ.
ವಾರದಲ್ಲಿ ಎರಡು ದಿನ ರಜೆ ಘೋಷಣೆ ಆಗಿರುವ ಹಿನ್ನಲೆ, ಇತರ ದಿನಗಳಲ್ಲಿ ಗ್ರಾಹಕರಿಗೆ ಸಮರ್ಪಕ ಹಾಗೂ ಸರಿಯಾದ ರೀತಿಯಲ್ಲಿ ವೇಗವಾಗಿ ಸೇವೆಯನ್ನು ನೀಡುವ ಜವಾಬ್ದಾರಿ ಬ್ಯಾಂಕ್ಗಳ ಹೆಗಲೇರಿದೆ. ಪ್ರತಿ ಶನಿವಾರ ಮತ್ತು ಭಾನುವಾರ ರಜೆ ಇದ್ದರೂ ಕೂಡ, ಆನ್ಲೈನ್ ಸೇವೆಗಳು, ಡೆಬಿಟ್ ಕಾರ್ಡ್, ಆನ್ಲೈನ್ ಬ್ಯಾಂಕಿಂಗ್, ಇ-ಪೇ ರೀತಿಯ ತಾಂತ್ರಿಕ ಸೇವೆಗಳಲ್ಲಿ ಯಾವುದೇ ಕೊರತೆ ಉಂಟಾಗುವುದಿಲ್ಲ ತಿಳಿಸಲಾಗಿದೆ, (ಏಜೆನ್ಸೀಸ್).