ಕೇಕ್ ಕತ್ತರಿಸಿ ಖುಷಿಪಟ್ಟಿದ್ದ ಸ್ನೇಹಿತರಿಗೆ ಶಾಕ್: 8 ಮಂದಿ ಲಿಫ್ಟ್‌ನಲ್ಲಿ ಲಾಕ್; ಒಂದು ಗಂಟೆ ನಡೆದ ಹೈಡ್ರಾಮಾ, ವಿಡಿಯೋ ವೈರಲ್​! Lift Trapped

ಹುಟ್ಟುಹಬ್ಬದ ಕೇಕ್ ಕತ್ತರಿಸಿ ಸಂಭ್ರಮಿಸಿದ ಸ್ನೇಹಿತರಿಗೆ ಬಿಗ್ ಶಾಕ್! ಲಿಫ್ಟ್‌ನಲ್ಲಿ 8 ಮಂದಿ ಸಿಲುಕಿ ಒದ್ದಾಡಿ ಒಂದು ಗಂಟೆ ಲಿಫ್ಟ್​ನಲ್ಲಿ ಸಿಲುಕಿಕೊಂಡ ರೋಚಕ ವೈರಲ್ ವಿಡಿಯೋ ವಿವರ ಇಲ್ಲಿದೆ.
Eight friends got stuck in a lift right after birthday celebrations; a high-drama situation unfolded for an hour.
ಹುಟ್ಟುಹಬ್ಬದ ಸಂಭ್ರಮದ ಬೆನ್ನಲ್ಲೇ ಲಿಫ್ಟ್‌ನಲ್ಲಿ ಲಾಕ್ ಆದ 8 ಸ್ನೇಹಿತರು; ಒಂದು ಗಂಟೆ ನಡೆದ ಹೈಡ್ರಾಮಾ.
Published on: 

ನೋಯ್ಡಾ: ಭಾರತದಲ್ಲಿ ಇಂಟರ್ನೆಟ್​ ಕ್ರಾಂತಿ ನಡೆದು ಎಲ್ಲರ ಕೈಗೆ ಮೊಬೈಲ್​ ತಲುಪಿದ ದಿನದಿಂದ ಸೋಷಿಯಲ್​ ಮೀಡಿಯಾನಲ್ಲಿ ಒಂದಿಲ್ಲೊಂದು ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತದೆ. ಕೆಲ ವಿಡಿಯೋಗಳು ಮುಖದಲ್ಲಿ ನಗುವನ್ನು ತಂದರೆ, ಇನ್ನು ಕೆಲವು ಎದೆಯಲ್ಲಿ ನಡುಕವನ್ನು ಹುಟ್ಟಿಸುತ್ತವೆ.

ಈಗ, ಇಂತಹದೊಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದು, ಹುಟ್ಟು ಹಬ್ಬದ ಪಾರ್ಟಿ ಮುಗಿಸಿ, ಮನೆಗೆ ತೆರಳಲು ಮುಂದಾಗಿದ್ದ ಸ್ನೇಹಿತರು ಲಿಫ್ಟ್​ನಲ್ಲಿ ಲಾಕ್​ ಆಗಿರುವ ವಿಡಿಯೋವೊಂದು ಎಲ್ಲೆಡೆ ಸಕ್ಕತ್​ ವೈರಲ್​ ಆಗುತ್ತಿದೆ.

ವಿಡಿಯೋನಲ್ಲೇನಿದೆ?

ಈ ಘಟನೆಯು ನೋಯ್ಡಾದ ಎಚ್​&ಎಸ್​ ಮಾಲ್​ನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ ಮಾಲ್​ನ 31 ನೇ ಮಹಡಿಯಲ್ಲಿರುವ ರೋಮಿಯೊ ಲೇನ್​ನಲ್ಲಿ ಇವರು ಹುಟ್ಟು ಹಬ್ಬದ ಆಚರಣೆಗಾಗಿ ಬಂದಿದ್ದಾರೆ. ಕೇಕ್​ ಕತ್ತರಿಸಿ, ತಮ್ಮ ಮೋಜು- ಮಸ್ತಿ ಮುಗಿಸಿ ಮನೆಗೆ ತೆರಳಲು ಇವರು ಮುಂದಾಗಿದ್ದಾರೆ.

31 ನೇ ಫ್ಲೋರ್​ನಿಂದ ಕೆಳಗೆ ಬರಲು ಈ ಎಂಟು ಜನ ಒಂದೇ ಲಿಫ್ಟ್​ ಅನ್ನು ಏರಿದ್ದಾರೆ. ಆದರೆ ಇಂದೆರಡು ಮಹಡಿ ಕೆಳಗೆ ಹೋದ ನಂತರ ಲಿಫ್ಟ್ ದಿಢೀರನೇ ಸ್ತಬ್ದವಾಗಿ ಬಿಟ್ಟಿದೆ. ಇದೇ ಸಮಯಕ್ಕೆ ಮೊಬೈಲ್​ಗೆ ಸರಿಯಾಗಿ ನೆಟ್​ವರ್ಕ್​ ದೊರೆಯದ ಹಿನ್ನಲೆ, ಆಚೆ ಇರುವ ಜನಕ್ಕೆ ಲಿಫ್ಟ್​ನಲ್ಲಿ ಜನ ಸಿಲುಕಿದ್ದಾರೆ ಎಂಬ ಮಾಹಿತಿ ಕೂಡ ರವಾನೆ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಿರುಚಿಕೊಂಡ ಸ್ನೇಹಿತರು!

ಲಿಫ್ಟ್​ ಒಂದೇ ಸಲ ಸ್ತಬ್ದವಾಗಿದ್ದು, ಹಾಗೂ ಮೊಬೈಲ್​ಗೆ ನೆಟ್​ವರ್ಕ್​ ದೊರಕದ ಹಿನ್ನಲೆ ಲಿಫ್ಟ್​ ಒಳಗಿದ್ದ ಜನರು ಕಿರುಚಲು, ಜೋರಾಗಿ ಕೂಗಲು ಶುರುವಿಟ್ಟಿದ್ದಾರೆ. ಆದರೆ ಇದರಿಂದಲೂ ಏನು ಪ್ರಯೋಜನವಾಗಿಲ್ಲ. ಹಾಗೆಯೇ, ಚಿಕ್ಕ ಲಿಫ್ಟ್​ನಲ್ಲಿ ಎಂಟು ಜನರಿದ್ದ ಹಿನ್ನಲೆ ಉಸಿರಾಡಲು ಕೂಡ ಸಮಸ್ಯೆಯಾಗಿದೆ. ಲಿಫ್ಟ್​ ಬಾಗಿಲನ್ನು ತೆಗೆಯಲು ಒಳಗಿದ್ದ ಜನರು ಶತ ಪ್ರಯತ್ನ ಮಾಡಿದ್ದಾರೆ. ಆದರೂ ಯಾವುದೇ ಸಫಲತೆ ದೊರೆತಿಲ್ಲ.

Also Read
ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್​ಗೆ ಕಸ್ಟಮ್​​​ ಇಲಾಖೆ ಶಾಕ್​; 89 ಕೋಟಿ ದಂಡ ವಿಧಿಸಿ ಆದೇಶ! Ranya Rao
Eight friends got stuck in a lift right after birthday celebrations; a high-drama situation unfolded for an hour.

ಒಂದು ಗಂಟೆ ನಡೆದ ರಕ್ಷಣಾ ಕಾರ್ಯಚರಣೆ!

ನಂತರ, ಲಿಫ್ಟ್​ನ ಆಚೆ ಇದ್ದವರಿಗೆ ಒಳಗೆ ಜನ ಸಿಲುಕಿಕೊಂಡಿರುವುದು ಗಮನಕ್ಕೆ ಬಂದಿದೆ. ಆದರೆ ಆಚೆ ಇದ್ದವರು ಎಷ್ಟೆ ಪ್ರಯತ್ನ ಪಟ್ಟರೂ ಲಿಫ್ಟ್​ಅನ್ನು ತೆಗೆಯಲು ಸಾಧ್ಯವಾಗಿಲ್ಲ. ಹೆಚ್ಚು ಕಡಿಮೆ ಈ ಹೋರಾಟ ಒಂದು ಗಂಟೆಗೂ ಹೆಚ್ಚಿನ ಸಮಯ ನಡೆದಿದೆ.

ನಂತರ ಮಾಲ್​ನ ಭದ್ರತಾ ಸಿಬ್ಬಂದಿ ಹಾಗೂ ಲಿಫ್ಟ್​ ಆಪರೇಟರ್​​ಗಳು ಸ್ಥಳಕ್ಕೆ ಆಗಮಿಸಿದ್ದು, ಆಧುನಿಕ ಪರಿಕರಗಳ ಮೂಲಕ ಲಿಫ್ಟ್​ ಬಾಗಿಲನ್ನು ತೆಗೆದು ಸಿಲುಕಿದ್ದ ಎಂಟು ಜನರನ್ನು ರಕ್ಷಣೆ ಮಾಡಿರುವುದಾಗಿ ತಿಳಿದು ಬಂದಿದೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಕಮೆಂಟ್​ಗಳ ಮಹಾಪೂರವೇ ಹರಿದು ಬಂದಿದೆ. ಈ ಹುಟ್ಟು ಹಬ್ಬವನ್ನು ಇವರು ಸಾಯುವವರೆಗೆ ಮರೆಯುವುದಿಲ್ಲ ಎಂದು ಒಬ್ಬರು ಕಮೆಂಟ್​ ಮಾಡಿದ್ದಾರೆ. ದಿನೇ-ದಿನೇ ಈ ಲಿಫ್ಟ್​​ಗಳು ತೊಂದರೆ ಕೊಡುತ್ತಿರುವ ಸುದ್ದಿಗಳು ವರದಿಯಾಗುತ್ತಿದೆ. ಲಿಫ್ಟ್​ ತಂತ್ರಜ್ಞಾನದಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ.

ಹೀಗೆ ಲಿಫ್ಟ್​ನಲ್ಲಿ ಸಿಲುಕಿಕೊಂಡಾಗ ಭಯವಾಗುವುದು ಸಹಜ. ಆದರೆ ಕೂಗುವುದು, ಬಲವಂತವಾಗಿ ಲಿಫ್ಟ್​ ಬಾಗಿಲನ್ನು ತೆರೆಯಲು ಮುಂದಾಗಬಾರದು. ಅಲರಾಂ ಅಥವಾ ತುರ್ತು ಕರೆ ಮಾಡಬೇಕೆಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net