ಪತ್ನಿ ಸಂಗೀತಾ ಜೊತೆ ದಳಪತಿ ವಿಜಯ್
- ನಟ ವಿಜಯ್ಗೆ ವಿಚ್ಛೇದನ ನೀಡಲು ಮುಂದಾದ ಪತ್ನಿ ಸಂಗೀತಾ
- ನಟ ವಿಜಯ್ ರಾಜಕೀಯ ಭವಿಷ್ಯದ ಬಗ್ಗೆ ಆ ಜ್ಯೋತಿಷಿ ಹೇಳಿದ್ದ ಮಾತೇನು?
- ನ್ಯಾಯಾಲಯದಲ್ಲಿ ವಿಚ್ಛೇದನ ದೊರೆತರೆ ಆ ಮಾತು ನಿಜವಾಗುತ್ತಾ
ತಮಿಳುನಡು: ತಮಿಳು ನಟ, ರಾಜಕಾರಣಿ ದಳಪತಿ ವಿಜಯ್ಗೆ ಅವರ ಪತ್ನಿ ಸಂಗೀತಾ ವಿಚ್ಛೇದನ (Vijay Divorce) ಕೋರಿ ಸಲ್ಲಿಸಿರುವ ವಿಚಾರ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಯಾಕೆ ವಿಜಯ್ ಬದುಕಲ್ಲಿ ಈ ರೀತಿಯ ಘಟನೆ ನಡೆಯುತ್ತಿದೆ ಎಂಬ ಪ್ರಶ್ನೆ ಅವರ ಲಕ್ಷಾಂತರ ಅಭಿಮಾನಿಗಳಲ್ಲಿ ಮೂಡಿದೆ.
ನಟ ವಿಜಯ್ ಮತ್ತು ಸಂಗೀತಾ ಅವರ ದಾಂಪತ್ಯ ಒಂದೆರಡು ವರ್ಷಗಳದ್ದೇನಲ್ಲ. ಇಬ್ಬರು ಬರೊಬ್ಬರಿ 27 ವರ್ಷಗಳ ಕಾಲ ಸುಖಿ ಸಂಸಾರವನ್ನು ನಡೆಸಿದ್ದಾರೆ. ಎದೆಯೆತ್ತರೆ ಬೆಳೆದ ಮಗ ಸಂಜಯ ಮತ್ತು ದಿವ್ಯಾ ಸಾಶಾ ಎಂಬ ಮಗಳಿದ್ದಾಳೆ. ಸಿನಿಮಾ ರಂಗದಲ್ಲಿ ಉತ್ತುಂಗವನ್ನು ಕಂಡಿರುವ ವಿಜಯ್ ಈಗ ರಾಜಕೀಯದಲ್ಲಿ ಸಹ ತನ್ನ ಛಾಪನ್ನು ಮೂಡಿಸುವ ಪ್ರಯತ್ನದಲ್ಲಿದ್ದಾರೆ.
ತಮಿಳುನಾಡಿನ ರಾಜಕೀಯದಲ್ಲಿ ತಮಿಳಿಗ ವೆಟ್ರಿ ಕಳಗಂ ಎಂಬ ಪಕ್ಷವನ್ನು ಕಟ್ಟಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತುದಿಗಾಲಿನಲ್ಲಿ ನಿಂತಿರುವಾಗ ಈ ವಿಚ್ಛೇದನದ ಸುದ್ದಿ ಭಾರಿ ಸಂಚಲನವನ್ನು ಎಬ್ಬಿಸಿದೆ.
ನಿಜವಾಗುತ್ತಾ ಆ ಜ್ಯೋತಿಷಿ ಹೇಳಿದ ಮಾತು?
ಕೆಲ ತಿಂಗಳುಗಳ ಹಿಂದೆ ತಮಿಳು ನಾಡಿನ ಖ್ಯಾತ ಜ್ಯೋತಿಷಿಯೊಬ್ಬರು ವಿಜಯ್ ಅವರ ರಾಜಕೀಯ ಮತ್ತು ದಾಂಪತ್ಯ ಜೀವನದ ಕುರಿತು ನುಡಿದಿದ್ದ ಭವಿಷ್ಯ ಭಾರಿ ಚರ್ಚೆಗೆ ಕಾರಣವಾಗಿತ್ತು.
ಆ ಜ್ಯೋತಿಷಿ ಹೇಳಿದ ಪ್ರಕಾರ ನಟ ವಿಜಯ್ ತಮ್ಮ ಹೆಂಡತಿ ಸಂಗೀತಾರಿಂದ ಅಂತರ ಕಾಪಾಡಿ ಕೊಂಡರೆ ರಾಜಕೀಯವಾಗಿ ಭಾರಿ ಯಶಸ್ಸನ್ನು ಕಾಣುವರೆಂದು, ಮುಂದೊಂದು ದಿನ ತಮಿಳುನಾಡಿನ ಮುಖ್ಯಮಂತ್ರಿಯಾದರೂ ಯಾವುದೇ ಅಚ್ಚರಿಯಿಲ್ಲ ಎಂದು ಕಡಲೂರಿನ ಜ್ಯೋತಿಷಿ ಹೇಳಿದ್ದರು. ಮತ್ತು ನಟ ವಿಜಯ್ ಈ ಜ್ಯೋತಿಷಿ ಹೇಳಿದ ಎಲ್ಲಾ ಮಾತನ್ನು ಪಾಲಿಸುತ್ತಾತರೆ ಎಂದು ತಮಿಳುನಾಡಿನ ಖ್ಯಾತ ಪತ್ರಕರ್ತ ಶಂಕರ್ ನೀಡಿದ್ದ ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು.
ಈಗ ವಿಧಾನ ಸಭಾ ಚುನಾವಣೆಯ ಹೊಸ್ತಿಲಲ್ಲಿಯೇ ವಿಜಯ್ಗೆ ಪತ್ನಿ ಸಂಗೀತಾ ವಿಚ್ಛೇದನ ನೀಡಲು ಮುಂದಾಗಿದ್ದು, ಒಂದು ವೇಳೆ ನ್ಯಾಯಾಲಯ ವಿಚ್ಛೇದನಕ್ಕೆ ಒಪ್ಪಿದರೆ ಆ ಜ್ಯೋತಿಷಿ ಹೇಳಿರುವ ಮಾತು ನಿಜವಾಗಲಿದೆಯೇ ಎಂದು ಕಾದು ನೋಡಬೇಕಾಗಿದೆ.
ತನ್ನ ಅಭಿಮಾನಿಯನ್ನೇ ಮದುವೆಯಾಗಿದ್ದ ವಿಜಯ್
ದಳಪತಿ ವಿಜಯ್ ಪತ್ನಿ ಸಂಗೀತಾ ಇವರು ಮೂಲತಃ ಶ್ರೀಲಂಕಾದ ತಮಿಳು ಪರಿಪಾರಕ್ಕೆ ಸೇರಿದವರಾಗಿದ್ದಾರೆ. ಇವರು ಮೊದಲಿಂದಲೂ ವಿಜಯ್ ಅವರ ದೊಡ್ಡ ಅಭಿಮಾನಿಯಾಗಿದ್ದು, 1996 ರಲ್ಲಿ ಚೆನ್ನೈಗೆ ಬಂದಿದ್ದಾಗ ಸಂಗೀತಾ ವಿಜಯ್ ಅವರನ್ನು ಬೇಟಿಯಾಗಿದ್ದರು. ಈ ಬೇಟಿ ಮುಂದೆ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯ ರೂಪವನ್ನು ಪಡೆದು ಎರಡೂ ಮನೆಯವರ ಒಪ್ಪಿಗೆಯೊಂದಿಗೆ ಈ ಜೋಡಿ 1995 ಅಗಸ್ಟ್ 25 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ನಡುವಿನ ಪ್ರೀತಿಯ ಸಂಕೇತವಾಗಿ ಸಂಜಯ್ ಎಂಬ ಮಗ ಮತ್ತು ದಿವ್ಯಾ ಸಾಶಾ ಎಂಬ ಮಗಳು ಜನಿಸಿದರು.
ಮತ್ತೆ ಮುನ್ನಲೆಗೆ ಬಂದ ತ್ರಿಷಾ ಹೆಸರು
ವಿಜಯ್ ವಿಚ್ಚೇದನದ ಸದ್ದಿ ಹೊರಬೀಳುತ್ತಿದ್ದಂತೆ ಮೊದಲು ಕೇಳಿ ಬಂದ ಹೆಸರೇ ತಮಿಳು ನಟಿ ತ್ರಿಷಾ ಅವರದ್ದು. ಹಲವು ವರ್ಷಗಳಿಂದ ವಿಜಯ್ ಮತ್ತು ತ್ರಿಷಾ ನಡುವೆ ಸಂಬಂಧವಿದೆ ಎಂಬ ವದಂತಿಗಳು ಹರಿದಾಡುತ್ತಿದ್ದು, ಇಂದು ಆ ವದಂತಿಗೆಲ್ಲಾ ರೆಕ್ಕೆ-ಪುಕ್ಕ ಬಂದಂತಾಗಿದೆ.
ಕೆಲ ದಿನಗಳ ಹಿಂದೆ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ವಿಜಯ್ಗೆ ರಾಜಕೀಯ ಏನೆಂದು ತಿಳಿಯ ಬೇಕೆಂದರೆ ಮೊದಲು ಆ ತ್ರಿಷಾ ಮನೆಯಿಂದ ಆಚೆ ಬಾ ಎಂದು ನೀಡಿದ್ದ ಹೇಳಿಕೆ ರಾಜಕೀಯ ರಂಗದಲ್ಲಿ ಭಾರಿ ಸಂಚಲನವನ್ನು ಉಂಟುಮಾಡಿತ್ತು. ನಂತರ ರಾಜಕೀಯದಲ್ಲಿ ತ್ರಿಷಾ ಹೆಸರನ್ನು ಬಳಸಬೇಡಿ ಎಂದು ತ್ರಿಷಾ ವಕೀಲರು ಕೇಳಿದ ನಂತರ ನಾಗೇಂದ್ರನ್ ಕ್ಷಮೆ ಕೇಳಿದ್ದರು.
ಸದ್ಯಕ್ಕಂತೂ ವಿಜಯ್ ಅವರ ವಿಚ್ಛೇದನದ ಸುದ್ದಿ ಎಲ್ಲೆಡೆ ಚರ್ಚೆಯಾಗುತ್ತಿದ್ದು, ಕೆಲವರು ಇದಕ್ಕೆ ತ್ರಿಷಾ ಜೊತೆಗಿನ ಸಂಬಂಧವೇ ಕಾರಣ ಎಂದು ಹೇಳಿದರೆ ಇನ್ನೂ ಕೆಲವರು ವಿಜಯ್ ಆ ಜ್ಯೋತಿಷಿ ಹೇಳಿದ್ದ ಮಾತನ್ನು ಕೇಳಿದರೆ, ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಬಹುದೆಂದು ಹೀಗೆ ಮಾಡುತ್ತಿರಬೇಕೆಂದು ಹೇಳುತ್ತಿದ್ದಾರೆ. ಏಪ್ರಿಲ್ 20 ರಂದು ಚೆಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ಈ ವಿಚ್ಛೇದನದ ಅರ್ಜಿ ವಿಚಾರಣೆ ನಡೆಯಲಿದ್ದು ಅಂದೇ ಈ ಎಲ್ಲಾ ವದಂತಿಗಳಿಗೆ ತೆರೆ ಬೀಳಲಿದೆ ಎನ್ನಲಾಗುತ್ತಿದೆ,(ಏಜನ್ಸೀಸ್).