ಚಡ್ಡಾ ಜೊತೆ ಬಿಜೆಪಿಗೆ ಜೀಗಿದ ಹರ್ಭಜನ್​ ಸಿಂಗ್​ 
ದೇಶ

ಚಡ್ಡಾ ಜೊತೆ ಬಿಜೆಪಿ ಸೇರಿದ ಹರ್ಭಜನ್ ಸಿಂಗ್: ಮನೆ ಗೋಡೆ ಮೇಲೆ ದೇಶದ್ರೋಹಿ ಎಂದು ಬರೆದ ಆಮ್​ ಆದ್ಮಿ ಕಾರ್ಯಕರ್ತರು! Harbhajan Singh

ಪ್ರಮುಖ ಮುಖ್ಯಾಂಶಗಳು

  • ಎಎಪ ಬಿಟ್ಟು ಬಿಜೆಪಿ ಸೇರಿದ ರಾಘವ್​ ಚಡ್ಡಾ
  • ಚಡ್ಡಾ ಜೊತೆ ಬಿಜೆಪಿಗೆ ಜೀಗಿದ ಹರ್ಭಜನ್​ ಸಿಂಗ್​
  • ಭಜ್ಜಿ ಮನೆ ಗೋಡೆ ಮೇಲೆ ದೇಶದ್ರೋಹಿ ಎಂದು ಬರೆದ ಎಎಪಿ ಕಾರ್ಯಕರ್ತರು
ಪಂಜಾಬ್​: ನಿನ್ನೆ (ಏ.24) ಆಮ್​ ಆದ್ಮಿ ಪಕ್ಷದಿಂದ ರಾಘವ್​ ಚಡ್ಡಾ ಜೊತೆ ಇತರೆ ಆರು ಜನ ಸಂಸದರು ಬಿಜೆಪಿ ಸೇರಿದ್ದಾರೆ. ಅವರಲ್ಲಿ ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಹರ್ಭಜನ್ ಸಿಂಗ್ (Harbhajan Singh)​ ಒಬ್ಬರಾಗಿದ್ದು, ಇಂದು (ಏ.25) ಭಜ್ಜಿ ಮನೆ ಗೋಡೆಗಳ ಮೇಲೆ ದೇಶದ್ರೋಹಿ (ಗದ್ದಾರ್​) ಎಂದು ಬರೆಯಲಾಗಿದೆ.
ಆಮ್​ ಆದ್ಮಿ ಪಕ್ಷವನ್ನು ಬಿಟ್ಟು ಭಾರತೀಯ ಜನತಾ ಪಕ್ಷವನ್ನು ಸೇರಿದ್ದಕ್ಕಾಗಿ ಎಎಪಿ ಕಾರ್ಯಕರ್ತರು ಮಾಡಿರುವ ಕೆಲಸ ಇದಾಗಿದೆ ಎಂದು ಕೇಳಿ ಬರುತ್ತಿದೆ.
ರಾಘವ್ ಛಡ್ಡಾ ಜೊತೆಗೆ ಸ್ವಾತಿ ಮಹಿವಾಲ್​ (ದೆಹಲಿ), ಹರ್ಭಜನ್​ ಸಿಂಗ್ (ಪಂಜಾಬ್​)​, ಸಂದೀಪ್​ ಪಾಠಕ್ (ಪಂಜಾಬ್​)​, ಅಶೋಕ್​ ಮಿತ್ತಲ್ (ಪಂಜಾಬ್​)​, ರಜೀಂದರ್​ ಗುಪ್ತಾ (ಪಂಜಾಬ್​) ಮತ್ತು ವಿಕ್ರಮ್​ ಸಹಾನಿ (ಪಂಜಾಬ್​) ಇವರುಗಳು ಸ್ವಪಕ್ಷವನ್ನು ತೊರೆದು, ಬಿಜೆಪಿ ಸೇರಿದ್ದು ಪಂಜಾಬಿನ ಎಎಪಿ ಕಾರ್ಯಕರ್ತರಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಪಕ್ಷ ಸರಿಯಾದ ಸ್ಥಾನಮಾನ ನೀಡಿಲ್ಲ!

ಈ ಕುರಿತು ಮಾತನಾಡಿರುವ ರಾಘವ್​ ಚಡ್ಡಾ ನನ್ನ ಜೊತೆ ಈಗ ಪಕ್ಷ ಬಿಡಲು ಮುಂದಾಗುತ್ತಿರುವವರು, ಪಕ್ಷದಲ್ಲಿ ಸುಮಾರು 10-15 ವರ್ಷಗಳಿಂದ ಪಕ್ಷದ ಏಳಿಗೆಗಾಗಿ ದುಡಿದಿದ್ದಾರೆ. ಆದರೆ ಅವರ ಸಾಮರ್ಥ್ಯಕ್ಕೆ ತಕ್ಕ ಸ್ಥಾನಮಾನ ನೀಡದ ಕಾರಣ ಎಎಪಿಯನ್ನು ತೊರೆದು ಬಿಜೆಪಿಯನ್ನು ಸೇರಲಿದ್ದಾರೆ ಎಂದು ಚಡ್ಡಾ ಹೇಳಿದ್ದಾರೆ.
ಪಂಜಾಬಿಗಳಿಗೆ ಬಿಜೆಪಿ ಮಾಡಿದ ಮೋಸ
ತಮ್ಮ ನೆಚ್ಚಿನ ಸಂಸದ ರಾಘವ್​ ಚಡ್ಡಾ, ಬಿಜೆಪಿ ಸೇರಿದ ಕುರಿತು ಎಕ್ಸ್​ ಖಾತೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿರುವ ಪಕ್ಷದ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​, ಇದು ಬಿಜೆಪಿ ಪಂಜಾಬಿನ ಜನರಿಗೆ ಮಾಡಿರುವ ಮೋಸವಾಗಿದೆ ಎಂದು ಬರೆದುಕೊಂಡಿದ್ದಾರೆ.

ಪಕ್ಷದಿಂದ ಹೊರ ಬೀಳಲು ಕಾರಣವೇನು?

ಕೆಲ ದಿನಗಳ ಹಿಂದೆ ರಾಘವ್​ ಚಡ್ಡಾ ಅವರನ್ನ ಎಎಪಿ ಪಕ್ಷ ರಾಜ್ಯಸಭೆಯ ಉಪನಾಯಕ ಸ್ಥಾನದಿಂದ ಕೆಳಗಿಳಿಸಿತ್ತು. ರಾಘವ್​ ತೀರಾ ಕ್ಷುಲ್ಲಕ ವಿಷಯಗಳ ಬಗ್ಗೆ ಪ್ರಶ್ನೆ ಎತ್ತುತ್ತಾರೆ ಹಾಗೂ ಅದರ ಕುರಿತು ಸಮಯ ವ್ಯರ್ಥ ಮಾಡುತ್ತಾರೆ ಎನ್ನುವುದು ಪಕ್ಷ ನೀಡಿದ ಸ್ಪಷ್ಟನೆಯಾಗಿತ್ತು.
ಆದರೆ ಈ ಕುರಿತು ಬೇಸರ ವ್ಯಕ್ತ ಪಡಿಸಿದ್ದ ರಾಘವ್​ ಚಡ್ಡಾ ತಾವು ಪಕ್ಷಕ್ಕಾಗಿ ಏನೇನು ಮಾಡಿದ್ದೆವೆ ಎನ್ನುವುದನ್ನು ವಿಡಿಯೋಗಳ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಿದ್ದರು. ಆ ಸಮಯದಲ್ಲಿಯೇ ಚಡ್ಡಾ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಈಗ ಅದನ್ನು ಖುದ್ದು ರಾಘವ್​ ಅವರೇ ಸಾಭಿತು ಪಡಿಸಿದ್ದಾರೆ,(ಏಜನ್ಸೀಸ್​).