Gurugram Hit-And-Run Accused Was Returning From Pub, Chased Biker Sia For 2 km 
ದೇಶ

ಗುರುಗ್ರಾಮ್ Hit-And-Run ಕೇಸ್​; ಪಬ್‌ನಿಂದ ಮರಳುತ್ತಿದ್ದ ಕಲ್ಯಾಣ್, ಬೈಕರ್ ಸಿಯಾಗೆ ಡಿಕ್ಕಿ ಹೊಡೆಯಲು 2 ಕಿ.ಮೀ ಬೆನ್ನಟ್ಟಿದ್ದ!

ಪ್ರಮುಖ ಮುಖ್ಯಾಂಶಗಳು

  • ಬೈಕರ್​ ಸಿಯಾರ ಗಾಡಿಗೆ ಗುದ್ದಲು 2 ಕಿ.ಮೀ ಚೇಸ್​ ಮಾಡಿದ್ದ ಕಲ್ಯಾಣ್​​.
  • ರಾಜಸ್ಥಾನದ ದೌಸಾದಿಂದ ಬಂಧನಕ್ಕೊಳಗಾಗಿದ್ದ ಕಲ್ಯಾಣ್ ಬೈನ್ಸ್ಲಾ
  • ಉದ್ದೇಶಪೂರ್ವಕವಾಗಿ ಗುದ್ದಿಲ್ಲ ಎಂದಿದ್ದ ಕಲ್ಯಾಣ್​, ಆತನ ಕಾರಿನಲ್ಲಿದ್ದ ಇಬ್ಬರಿಗೆ ನೋಟಿಸ್ ಜಾರಿ
ರಾಂಚಿ: ಹರಿಯಾಣದ ಗುರುಗ್ರಾಮ್​ನಲ್ಲಿ ನಡೆದ ಹಿಟ್​ ಅಂಡ್​ ರನ್​ ಕೇಸ್​ ದಿನದಿಂದ ದಿನಕ್ಕೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಇದು ಆಕಸ್ಮಿಕವಾಗಿ  ನಡೆದಿದ್ದು. ಉದ್ದೇಶ ಪೂರ್ವಕವಾಗಿ ಗುದ್ದಿಲ್ಲ. ಬೈಕ್​ನಲ್ಲಿದ್ದದ್ದು ಮಹಿಳೆ ಎಂದು ನನಗೆ ತಿಳಿದಿರಲಿಲ್ಲ ಎಂದು ಬಂಧನಕ್ಕೊಳಗಾದ ಕಲ್ಯಾಣ್ ಬೈನ್ಸ್ಲಾ ಹೇಳಿದ ಬೆನ್ನಲ್ಲೇ ನಡೆಸಿದ ತನಿಖೆಯಿಂದ ಸ್ಫೋಟಕ ಮಾಹಿತಿಯೊಂದು ಹೊರ ಬಿದ್ದಿದೆ.
ಹೌದು, ಕ್ಲಬ್‌ನಲ್ಲಿ ಪಾರ್ಟಿ ಮುಗಿಸಿ ತನ್ನ ಮೂವರು ಸ್ನೇಹಿತರೊಂದಿಗೆ ಕಾರಿನಲ್ಲಿ ಹಿಂದಿರುಗುತ್ತಿದ್ದಾಗ ಕಲ್ಯಾಣ್ ಬೈನ್ಸ್ಲಾ, ಬೈಕರ್​ ಸಿಯಾರ ಗಾಡಿಗೆ ಗುದ್ದಲು 2 ಕಿ.ಮೀ ಚೇಸ್​ ಮಾಡಿದ್ದಾರೆ. ಆಕೆಯೊಂದಿಗೆ ಮೊದಲು ವಾಗ್ವಾದ ನಡೆದಿದ್ದು, ಆನಂತರ ಆಕೆಯ ಬೈಕ್​ ಹಿಂಬಾಲಿಸಿ ಉದ್ದೇಶ ಪೂರ್ವಕವಾಗಿ ಗುದ್ದಿದ್ದಾನೆ ಎಂದು  ವಿಶೇಷ ತನಿಖಾ ತಂಡ ಮಾಧ್ಯಮಗಳಿಗೆ ತಿಳಿಸಿವೆ.

ಇಬ್ಬರಿಗೆ ನೋಟಿಸ್

ಕಲ್ಯಾಣ್ ಬೈನ್ಸ್ಲಾ ಕಾರು ಚಲಾಯಿಸುವ ಸಮಯದಲ್ಲಿ  ಆತನ ಸ್ನೇಹಿತರಿಬ್ಬರು ಇದ್ದರು. ಅವರಿಗೂ ಸಹ ನೋಟೀಸ್ ನೀಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ಜೊತೆಗೆ ಲವ್ನಿಶ್ ಬೈನ್ಸ್ಲಾ ಎಂಬಾತನೇ  ಮಹಿಳಾ ಬೈಕ್ ಸವಾರರನ್ನು ಬೆನ್ನಟ್ಟಲು ಪ್ರಚೋದಿಸಿದ ಎನ್ನುವ ಮಾಹಿತಿ ಸಿಕ್ಕಿದೆ. 
ಮೊದಲು ಬೈಕರ್ ಶಿವಾನಿ ಚೌಹಾಣ್ ಅಲಿಯಾಸ್ ಸಿಯಾ ಹಾಗೂ ಕಲ್ಯಾಣ್​ಗೆ ಗುರುಗ್ರಾಮದ ಸೆಕ್ಟರ್ 53 ಮೆಟ್ರೋ ನಿಲ್ದಾಣದ ಬಳಿ  ವಾಗ್ವಾದ ನಡೆದಿತ್ತು. ಅದಾದ ನಂತರ ಅವರನ್ನು ಎರಡು ಕಿಲೋಮೀಟರ್‌ಗಳವರೆಗೆ  ಚೇಸ್ ಮಾಡಿದ್ದಾರೆ. ಆನಂತರ ಆಕೆಗೆ ಗುದ್ದಿದ್ದಾರೆ. ಇದು ದೃಶ್ಯಗಳಲ್ಲಿ ಕ್ಲಿಯರ್​ ಆಗಿ ಕಾಣುತ್ತದೆ ಎಂದು ಎಸ್​ಐಟಿ ನಡೆಸಿದ ತನಿಖೆಯಿಂದ ತಿಳಿದುಬಂದಿದೆ.

ಏನಾಗಿತ್ತು?

 ಹರಿಯಾಣದ ಗುರುಗ್ರಾಮ್​ನಲ್ಲಿನ ಪ್ರಸಿದ್ಧ ರೇಸ್​ಕೋರ್ಸ್​ ರಸ್ತೆಯಲ್ಲಿ  ರೈಡ್​ ಮಾಡುತ್ತಿದ್ದ ಯುವತಿ ಬೈಕ್​ಗೆ  ಕಲ್ಯಾಣ್  ಬೈನ್ಸ್ಲಾ ಉದ್ದೇಶ ಪೂರ್ವಕವಾಗಿ ಗುದ್ದಿದ ದೃಶ್ಯಾವಳಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡಿತ್ತು. ಆ ಬೆನ್ನಲ್ಲೇ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ಕಲ್ಯಾಣ್​ನನ್ನು ರಾಜಸ್ಥಾನದ ದೌಸಾದಿಂದ ಬಂಧಿಸಿದ್ದರು. ಸದ್ಯ ಆತ ಕಾರಿನಲ್ಲಿದ್ದಾಗ ಕುಡಿದಿದ್ದ ಎನ್ನುವ ಆರೋಪದ ಮೇರೆಗೆ ರಕ್ತ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ, (ಏಜೆನ್ಸೀಸ್).