ಸಾಂದರ್ಭಿಕ ಚಿತ್ರ 
ದೇಶ

ಜಮ್ಮು-ಕಾಶ್ಮೀರದ ಗಂಡರ್ಬಾಲ್​ನಲ್ಲಿ ಗುಂಡಿನ ಚಕಮಕಿ; ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು | Gunfight

ಶ್ರೀನಗರ: ಜಮ್ಮು-ಕಾಶ್ಮೀರದ ಮಧ್ಯಭಾಗವಾದ ಗಂಡೇರ್​ಬಾಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬುಧವಾರ(ಏ. 01) ವರದಿಯಾಗಿದೆ.
ಮಂಗಳವಾರ ಸಂಜೆ ಗಂಡೇರ್‌ಬಾಲ್‌ನ ಅಹ್ರಾಮಾ ಗ್ರಾಮದಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಸೇನೆಯ ಜಂಟಿ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಗ್ರಾಮದಲ್ಲಿ ಅಡಗಿಕೊಂಡಿದ್ದ ಉಗ್ರಗಾಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಭದ್ರತಾ ಪಡೆಗಳು ಪ್ರತಿ ದಾಳಿ ನಡೆದಿದೆ.
ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಸೇನೆಯ ಚೀನಾರ್ ಕಾರ್ಪ್ಸ್, 2026 ಮಾರ್ಚ್ 31ರ ರಾತ್ರಿ ಮಧ್ಯಂತರ ಗುಂಡಿನ ದಾಳಿಯ ನಡುವೆಯೂ ಸುತ್ತುವರಿದ ಪ್ರದೇಶವನ್ನು ಯುದ್ಧತಂತ್ರದಿಂದ ಪುನರ್ ಸಂಘಟಿಸಲಾಗಿದೆ. ನಮ್ಮ ಪಡೆಗಳು ನಿರ್ಣಯಿಸಿದ ಪ್ರತಿಕ್ರಿಯೆಯೊಂದಿಗೆ ಪರಿಣಾಮಕಾರಿಯಾಗಿ ಪ್ರತಿದಾಳಿ ನಡೆಸಿದವು. ಇದರ ಪರಿಣಾಮವಾಗಿ ಒಬ್ಬ ಭಯೋತ್ಪಾದಕನನ್ನು ಕೊಲ್ಲಲಾಯಿತು ಎಂದು ತಿಳಿಸಿದೆ.
ಇನ್ನೂ ಎರಡರಿಂದ ಮೂರು ಉಗ್ರರ ಗುಂಪು ಸುತ್ತುವರಿದ ಪ್ರದೇಶದಲ್ಲಿ ಸಿಲುಕಿಕೊಂಡಿದೆ ಎಂದು ಭದ್ರತಾ ಪಡೆಗಳಿಗೆ ಮಾಹಿತಿ ಬಂದ ಹಿನ್ನೆಲೆ, ಕಾರ್ಯಚರಣೆಯನ್ನು ಬಿಗಿಗೊಳಿಸಲು ಹೆಚ್ಚುವರಿ ಪಡೆಗಳನ್ನು ಗ್ರಾಮದಲ್ಲಿ ನಿಯೋಜಿಸಲಾಗಿದ್ದು, ಭದ್ರತಾ ಸಿಬ್ಬಂದಿ ವೈಮಾನಿಕ ಕಣ್ಗಾವಲುಗಾಗಿ ಡ್ರೋನ್‌ಗಳನ್ನು ಬಳಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ (ಏಜೆನ್ಸೀಸ್).