ಉಪಚುನಾವಣೆ ಫಲಿತಾಂಶದಿಂದ ಮತ್ತಷ್ಟು ಬಲ ಬಂದಿದೆ- ಪ್ರಧಾನಿ ಮೋದಿ! 
ದೇಶ

ಜನರ ಆಶೋತ್ತರಗಳನ್ನು ಈಡೇರಿಸಲು ಈ ತೀರ್ಪಿನಿಂದ ದೊಡ್ಡ ಬಲ: ಉಪಚುನಾವಣೆ ಗೆಲುವಿನ ಬಳಿಕ ಪ್ರಧಾನಿ ಮೋದಿ ಮಾತು! | Narendra Modi

ನವದೆಹಲಿ: ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಮತದಾರರಿಗೆ ಧನ್ಯವಾದ ತಿಳಿಸಿದ್ದು, ಅಸ್ಸಾಂನ ನಾಗಾಂವ್ ಲೋಕಸಭಾ ಫಲಿತಾಂಶ ಮತ್ತು ಪಶ್ಚಿಮ ಬಂಗಾಳದ ನಂದಿಗ್ರಾಮ ಹಾಗೂ ರೇಜಿನಗರ ವಿಧಾನಸಭಾ ಫಲಿತಾಂಶಗಳು, ಬಿಜೆಪಿ-ಎನ್‌ಡಿಎಯ ಉತ್ತಮ ಆಡಳಿತದ ಅಜೆಂಡಾದೊಂದಿಗೆ ಜನರಿಗೆ ಆಳವಾದ ನಂಟಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ ಎಂದಿದ್ದಾರೆ

ನವದೆಹಲಿ: ಲೋಕಸಭೆ ಮತ್ತು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದ್ದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ಮತದಾರರಿಗೆ ಧನ್ಯವಾದ ತಿಳಿಸಿದ್ದು, ಅಸ್ಸಾಂನ ನಾಗಾಂವ್ ಲೋಕಸಭಾ ಫಲಿತಾಂಶ ಮತ್ತು ಪಶ್ಚಿಮ ಬಂಗಾಳದ ನಂದಿಗ್ರಾಮ ಹಾಗೂ ರೇಜಿನಗರ ವಿಧಾನಸಭಾ ಫಲಿತಾಂಶಗಳು, ಬಿಜೆಪಿ-ಎನ್‌ಡಿಎಯ ಉತ್ತಮ ಆಡಳಿತದ ಅಜೆಂಡಾದೊಂದಿಗೆ ಜನರಿಗೆ ಆಳವಾದ ನಂಟಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ ಎಂದಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್!

ಉಪಚುನಾವಣೆ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಜನರ ನಿರಂತರ ಆಶೀರ್ವಾದಕ್ಕೆ ಧನ್ಯವಾದಗಳು!, ಅಸ್ಸಾಂನ ನಾಗಾಂವ್ ಲೋಕಸಭಾ ಫಲಿತಾಂಶ ಹಾಗೂ ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೇಜಿನಗರ ವಿಧಾನಸಭಾ ಫಲಿತಾಂಶಗಳು, ಬಿಜೆಪಿ-ಎನ್‌ಡಿಎಯ ಉತ್ತಮ ಆಡಳಿತದ ಅಜೆಂಡಾದೊಂದಿಗೆ ಜನರಿಗೆ ಆಳವಾದ ನಂಟಿದೆ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿವೆ.

ಈ ಚುನಾವಣೆಯಲ್ಲಿ ವಿಜಯಶಾಲಿಯಾದ ಬಿಜೆಪಿ ಅಭ್ಯರ್ಥಿಗಳಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಮತ್ತು ನಮ್ಮ ಪಕ್ಷದ ಕಾರ್ಯಕರ್ತರ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತೇನೆ. ಹಾಗೆಯೇ, ಪುದುಚೇರಿಯ ಥಟ್ಟಂಚವಾಡಿಯ ಉಪಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಎನ್‌ಡಿಎ ಮಿತ್ರಪಕ್ಷವಾದ ಎಐಎನ್‌ಆರ್‌ಸಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಜನರ ಕಲ್ಯಾಣಕ್ಕಾಗಿ ಮತ್ತು ಉಜ್ವಲ ಹಾಗೂ ಹೆಚ್ಚು ಸಮೃದ್ಧ ಭವಿಷ್ಯದ ಅವರ ಆಕಾಂಕ್ಷೆಗಳನ್ನು ಈಡೇರಿಸಲು ನಾವು ದಣಿವರಿಯಿಲ್ಲದೆ ಕೆಲಸ ಮಾಡುವಾಗ ಈ ಜನಾದೇಶ ನಮಗೆ ಹೆಚ್ಚಿನ ಬಲವನ್ನು ನೀಡುತ್ತದೆ ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಉಪಚುನಾವಣೆ ಫಲಿತಾಂಶ: ಗುಂಪುಗಾರಿಕೆಗೆ ಪ್ರಜಾಪ್ರಭುತ್ವದ ಸ್ಪಷ್ಟ ಉತ್ತರ ಎನ್ನುತ್ತಾ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಸ್ಮೃತಿ ಇರಾನಿ! | Smriti Irani

ನಂದಿಗ್ರಾಮದಲ್ಲಿ ಬಿಜೆಪಿ ದಿಗ್ವಿಜಯ!

ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ಮುಸ್ಲಿಂ ಬಾಹುಳ್ಯದ ರೇಜಿನಗರ ಉಪಚುನಾವಣೆಗಳಲ್ಲಿ ಬಿಜೆಪಿ ಜಯಗಳಿಸಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಆಪ್ತ ಚಂದ್ರನಾಥ್ ರಾಥ್ ಅವರ ತಾಯಿ ಹಾಗೂ ಬಿಜೆಪಿ ಅಭ್ಯರ್ಥಿಯಾದ ಹಸಿನ್ ರಾಣಿ ರಾಥ್ ಅವರು, ತಮ್ಮ ಪ್ರತಿಸ್ಪರ್ಧಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ 1,22,753 ಮತಗಳ ಅಂತರದಿಂದ ( ಶೇ. 75 ರಷ್ಟು) ಭರ್ಜರಿ ಜಯ ಸಾಧಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ, ರಾಥ್ ಅವರು 1,64,427 ಮತಗಳನ್ನು ಪಡೆದರೆ, ಮಿಲನ್ ಪ್ರಧಾನ್ ಅವರು 41,674 ಮತಗಳನ್ನು ಪಡೆದಿದ್ದಾರೆ. ಹಾಗೆಯೇ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಸಾಂತಿ ಗೋಪಾಲ್ ಗಿರಿ 5,779 ಮತಗಳನ್ನು ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (AISF) ನಾಯಕ ಅಲಿ ಮೊಹಮ್ಮದ್ ಸಬ್ಸೆ ಮಿರಾಜ್ ಖಾನ್ 1,607 ಮತಗಳನ್ನು ಪಡೆದಿದ್ದಾರೆ.

ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಕೇಸರಿ ಕಲಿ ಜಯಭೇರಿ!

ಇದಲ್ಲದೆ, ರೇಜಿನಗರ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿಯ ಶಂಖರವ್ ಸರ್ಕಾರ್ ಅವರು ತಮ್ಮ ಪ್ರತಿಸ್ಪರ್ಧಿ ಆಮ್ ಜನತಾ ಉನ್ನಯನ್ ಪಕ್ಷದ (AJUP) ಅಭ್ಯರ್ಥಿ ಗೋಲಾಂ ನಬಿ ಆಜಾದ್ ಅಲಿಯಾಸ್ ರಾಬಿನ್ ವಿರುದ್ಧ 75,816 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಸರ್ಕಾರ್ ಅವರು 1,29,914 ಮತಗಳನ್ನು ಪಡೆದಿದ್ದು, ಇದು ಚಲಾವಣೆಯಾದ ಒಟ್ಟು ಮತಗಳ ಶೇ. 63.14 ರಷ್ಟಾಗಿದೆ. ಇತ್ತ ಆಜಾದ್ ಅವರು 54,098 ಮತಗಳನ್ನು (ಶೇ. 26.29) ಪಡೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ಲಾಹಿಲ್ ಕಾಫಿ ಅವರು 6,168 ಮತ(ಶೇ. 3), ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ರಬಿಲ್ ಆಲಮ್ ಚೌಧರಿ 3,847 ಮತ (ಶೇ. 1.87), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಅಭ್ಯರ್ಥಿ ಎಂ.ಡಿ. ಸಯೀದ್ 3,797 ಮತ (ಶೇ. 1.85), ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಸೈಫುಜ್ಜಮಾನ್ ಸೈಖ್ ಅವರು 2,044 ಮತಗಳನ್ನು (ಶೇ. 0.99) ಪಡೆದಿದ್ದಾರೆ.

ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬರುವ ಈ ರೇಜಿನಗರ ಕ್ಷೇತ್ರದಲ್ಲಿ ಶೇ. 70ರಷ್ಟು ಮುಸ್ಲಿಂ ಮತದಾರರಿದ್ದಾರೆ. ಹಾಗಾಗಿ, ಇಲ್ಲಿ ಇಲ್ಲಿಯವರೆಗೆ ಕಾಂಗ್ರೆಸ್, ಟಿಎಂಸಿ ಮತ್ತು ಸ್ಥಳೀಯ ಪ್ರಾದೇಶಿಕ ಪಕ್ಷಗಳ ನಡುವಷ್ಟೇ ನೇರ ಪೈಪೋಟಿ ಇರುತ್ತಿತ್ತು. ಆದರೆ ಈ ಬಾರಿ ಬಿಜೆಪಿಯು ದೊಡ್ಡ ಗೆಲುವು ಸಾಧಿಸಿದೆ. ಇದಕ್ಕೆ ಮುಖ್ಯ ಕಾರಣವೆಂದರೆ, ವಿರೋಧ ಪಕ್ಷಗಳ ಮತಗಳು ಚದುರಿಹೋಗಿರುವುದು ಮತ್ತು ಕಣದಲ್ಲಿ ಬರೋಬ್ಬರಿ 15 ಜನ ಅಭ್ಯರ್ಥಿಗಳು ನಿಂತಿದ್ದು ರಾಜಕೀಯ ಲೆಕ್ಕಾಚಾರವನ್ನೇ ಬದಲಾಯಿಸಿದೆ. ಈ ರೀತಿಯ ತೀವ್ರ ಪೈಪೋಟಿ ಮತ್ತು ವಿರೋಧ ಪಕ್ಷಗಳ ನಡುವಿನ ಬಿರುಕು ಅಂತಿಮವಾಗಿ ಬಿಜೆಪಿಗೆ ವರವಾಗಿ ಪರಿಣಮಿಸಿದೆ ಎನ್ನಬಹುದು(ಏಜೆನ್ಸೀಸ್​).