ನಂದಿಗ್ರಾಮದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು: ಶೇ.75ರಷ್ಟು ಮತಗಳೊಂದಿಗೆ ದಿಗ್ವಿಜಯ ಸಾಧಿಸಿದ ಹಸಿನ್ ರಾಣಿ ರಾಥ್! | Nandigram Bypoll

Nandigram Bypoll: ಕಳೆದ ಮಂಗಳವಾರ (ಅ.6) ನಡೆದ ನಂದಿಗ್ರಾಮದ ಉಪಚುನಾವಣೆಯಲ್ಲಿ ಬಿಜೆಪಿ ಹುರಿಯಾಳು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಆಪ್ತ ಚಂದ್ರನಾಥ್ ರಾಥ್ ಅವರ ತಾಯಿಯಾದ ಹಸಿನ್ ರಾಣಿ ರಾಥ್ ಅವರು, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್​ರನ್ನು 122,753 ಮತಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಶೇಕಡಾ 75 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದ್ದಾರೆ.
ಶಿಷ್ಯನ ತಾಯಿಗೆ ಟಿಕೆಟ್​ ಕೊಟ್ಟು ಗೆಲ್ಲಿಸಿಕೊಂಡು ಬಂದ ಸಿಎಂ ಸುವೇಂದು ಅಧಿಕಾರಿ
ಶಿಷ್ಯನ ತಾಯಿಗೆ ಟಿಕೆಟ್​ ಕೊಟ್ಟು ಗೆಲ್ಲಿಸಿಕೊಂಡು ಬಂದ ಸಿಎಂ ಸುವೇಂದು ಅಧಿಕಾರಿ
Published on: 

Nandigram Bypoll: ಕಳೆದ ಮಂಗಳವಾರ (ಅ.6) ನಡೆದ ನಂದಿಗ್ರಾಮದ ಉಪಚುನಾವಣೆಯಲ್ಲಿ ಬಿಜೆಪಿ ಹುರಿಯಾಳು, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಮಾಜಿ ಆಪ್ತ ಚಂದ್ರನಾಥ್ ರಾಥ್ ಅವರ ತಾಯಿಯಾದ ಹಸಿನ್ ರಾಣಿ ರಾಥ್ ಅವರು, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್​ರನ್ನು 122,753 ಮತಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಶೇಕಡಾ 75 ರಷ್ಟು ಮತಗಳನ್ನು ಪಡೆದು ದಾಖಲೆಯ ಗೆಲುವು ಸಾಧಿಸಿದ್ದಾರೆ.

ಭಾರತೀಯ ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ರಾಥ್ ಅವರು 164,427 ಮತಗಳನ್ನು ಪಡೆದರೆ, ಪ್ರಧಾನ್ ಅವರು 41,674 ಮತ. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ) ನಾಯಕ ಶಾಂತಿ ಗೋಪಾಲ್ ಗಿರಿ ಅವರು 5,779 ಮತ ಮತ್ತು ಆಲ್ ಇಂಡಿಯಾ ಸೆಕ್ಯುಲರ್ ಫ್ರಂಟ್ (ಎಐಎಸ್‌ಎಫ್) ನಾಯಕ ಅಲಿ ಮೊಹಮ್ಮದ್ ಸಬ್ಸೆ ಮಿರಾಜ್ ಖಾನ್ ಅವರು 1,607 ಮತಗಳನ್ನು ಪಡೆದಿದ್ದಾರೆ.

ಸುವೇಂದು ಅಧಿಕಾರಿ ಭದ್ರಕೋಟೆ ಈ ನಂದಿಗ್ರಾಮ!

ಪೂರ್ವ ಮೇದಿನಿಪುರ ಜಿಲ್ಲೆಯ ವ್ಯಾಪ್ತಿಗೆ ಬರುವ ಮತ್ತು ತಮ್ಲಿಕ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ನಂದಿಗ್ರಾಮವು ಸಿಎಂ ಅಧಿಕಾರಿ ಅವರ ಭದ್ರಕೋಟೆಯಾಗಿತ್ತು. ಅವರು ಇಲ್ಲಿ 2016, 2021 ಮತ್ತು 2026 ರಲ್ಲಿ ಮೂರು ಬಾರಿ ಗೆದ್ದಿದ್ದಾರೆ. ಆರು ತಿಂಗಳ ಹಿಂದೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಭವಾನಿಪುರ ಮತ್ತು ನಂದಿಗ್ರಾಮ ಎಂಬ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಅಧಿಕಾರಿ ಎರಡರಲ್ಲೂ ಜಯಗಳಿಸಿದ್ದರು. ನಿಯಮದಂತೆ ಒಂದೇ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಿದ್ದರಿಂದ ನಂದಿಗ್ರಾಮಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ಎದುರಾಗಿತ್ತು.

ಟಿಎಂಸಿ ಅಭ್ಯರ್ಥಿ ಸಂಚಿತಾ ಪ್ರಧಾನ್ ದೇ ಅವರು ಸಿಎಂ ಅಧಿಕಾರಿ ಅವರೊಂದಿಗಿನ ಸಭೆಯ ನಂತರ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದರು. ಇದಾದ ಬಳಿಕ, ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿಸಿತು. ಆದ್ದರಿಂದ ನಂದಿಗ್ರಾಮ ಉಪಚುನಾವಣೆಯು ಬಿಜೆಪಿ ಮತ್ತು ಇಂಡಿಯಾ ಒಕ್ಕೂಟದ ನಡುವಿನ ಸ್ಪರ್ಧೆಯಾಗಿ ಬದಲಾಯಿತು.

ನಂದಿಗ್ರಾಮದಲ್ಲಿನ ನಾಟಕೀಯ ಬೆಳವಣಿಗೆಗಳು

ಮಮತಾ ಬ್ಯಾನರ್ಜಿ ಕಾಂಗ್ರೆಸ್​ಗೆ ಬೆಂಬಲ ಘೋಷಿಸಿದ ಕೆಲವೇ ಘಂಟೆಗಳಲ್ಲಿ 2007 ರ ನಂದಿಗ್ರಾಮ ಭೂ ಸ್ವಾಧೀನ ವಿರೋಧಿ ಚಳುವಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್​ ಅಭ್ಯರ್ಥಿ ಪ್ರಧಾನ್ ಅವರನ್ನು ಪೊಲೀಸರು ಬಂಧಿಸಿದರು. ಇದಾದ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಕೋಲ್ಕತ್ತಾ ಹೈಕೋರ್ಟ್ ಜಾಮೀನು ಸಹ ನೀಡಿತು.

ಸುಪ್ರೀಂ ಕೋರ್ಟ್ ಪ್ರಧಾನ್​ರ ಮಧ್ಯಂತರ ಜಾಮೀನು ನೀಡಿದ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಆದಾಗ್ಯೂ, ಕಾಂಗ್ರೆಸ್ ನಾಯಕರು ಮಧ್ಯಂತರ ಜಾಮೀನು ವಿಸ್ತರಣೆಯನ್ನು ಕೋರಿದರೆ ಪಶ್ಚಿಮ ಬಂಗಾಳ ಸರ್ಕಾರವು ಹೈಕೋರ್ಟ್ ಮುಂದೆ ತಮ್ಮ ವಾದಗಳನ್ನು ಮಂಡಿಸಬಹುದು ಎಂದು ಅದು ಹೇಳಿತ್ತು. ಬಿಗಿ ಭದ್ರತೆಯ ನಡುವೆ ಅಕ್ಟೋಬರ್ 6 ರಂದು ನಂದಿಗ್ರಾಮ ಮತ್ತು ರೇಜಿನಗರದಲ್ಲಿ ಉಪಚುನಾವಣೆಗಾಗಿ ಮತದಾನವು ನಡೆಯಿತು ಮತ್ತು ಶೇಕಡಾ 79.39 ರಷ್ಟು ಮತದಾನವು ದಾಖಲಾಯಿತು. ಚುನಾವಣಾ ಆಯೋಗದ ಪ್ರಕಾರ, ಕೆಲವು ಅತ್ಯಂತ ಸಣ್ಣ ಘಟನೆಗಳನ್ನು ಹೊರತುಪಡಿಸಿ ಮತದಾನವು ಹೆಚ್ಚಾಗಿ ಶಾಂತಿಯುತವಾಗಿತ್ತು(ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net