ನೆರೆಮನೆ ಜಗಳದ ವಿಡಿಯೋ ರೆಕಾರ್ಡ್ ಮಾಡುತ್ತಿರುವ ವೃದ್ಧ
- ನೆರೆಮನೆ ಜಗಳದ ವಿಡಿಯೋ ರೆಕಾರ್ಡ್ ಮಾಡುತ್ತಿರುವ ವೃದ್ಧ
- ಜಗಳ ನೋಡಲು ಪ್ರಾಣವನ್ನೇ ಪಣಕ್ಕಿಟ್ಟ ತಾತ
- ತಾತನ ಅಸಹ್ಯಕರ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಫುಲ್ ವೈರಲ್
ವೈರಲ್: ನಮ್ಮ ಜನರಿಗೆ ನೆರೆ ಮನೆಯವರ ಜಗಳ ಎಂದರೆ ಬಹಳ ಕುತೂಹಲವೇ ಸರಿ. ಇದರಿಂದ ಆ ಮನೆಯವರ ಗೌಪ್ಯತೆ ಅಂದರೆ ಪ್ರೈವಸಿ ಹಾಳಾಗುತ್ತದೆ ಎಂಬ ಕನಿಷ್ಟ ಪರಿಜ್ಞಾನ ಇಲ್ಲದಿದ್ದರೂ ಜಗಳ ನೋಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.
ಈ ಮೇಲೆ ಹೇಳಿದ ಮಾತಿಗೆ ನಿದರ್ಶನ ಎಂಬಂತೆ ಇತ್ತೀಚೆಗೆ ಒಬ್ಬ ಮುದುಕ ತನ್ನ ಪ್ರಾಣದ ಹಂಗನ್ನು ತೊರೆದು ಪಕ್ಕದ ಮನೆಯವರ ಜಗಳವನ್ನು ವಿಡಿಯೋ ರೆಕಾರ್ಡಿಂಗ್ ಮಾಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ (Viral Video) ಆಗುತ್ತಿದೆ.
ಆಗಂತುಕ ಅಜ್ಜ!
ಕಳೆದ ಕೆಲವು ದಿನಗಳಿಂದ ಅಪಾರ್ಟ್‌ಮೆಂಟ್ ಸುತ್ತಮುತ್ತ ಏನೋ ಒಂಥರಾ ಅಸಹಜ ವಾತಾವರಣ ಇತ್ತಂತೆ. ಈ ವೃದ್ಧ ಓಡಾಡುವ ಸ್ಟೈಲ್, ಜನರನ್ನು ನೋಡುವ ರೀತಿ ನಿವಾಸಿಗಳಿಗೆ ಸ್ವಲ್ಪ ವಿಚಿತ್ರ ಎನಿಸುತ್ತಿತ್ತು. ಆರಂಭದಲ್ಲಿ ವಯಸ್ಸಾದವರು ಪಾಪ ಎಂದು ನಿವಾಸಿಗಳು ಲೈಟ್ ಆಗಿ ತಗೆದುಕೊಂಡಿದ್ದರು.
ಆದರೆ, ದಿನ ಕಳೆದಂತೆ ಕೆಲವು ನಿವಾಸಿಗಳಿಗೆ ಈ ತಾತ ಆದರೂ ಬಹಳ ವಿಚಿತ್ರವಾಗಿದ್ದಾನೆ. ನಮ್ಮನ್ನು ನಿರಂತರವಾಗಿ ನೋಡುತ್ತಿದಂತೆ, ನಮ್ಮ ಮೇಲೆ ಒಂದು ನಿಗಾ ಇಟ್ಟಿರುವಂತೆ ಭಾಸವಾಗುತ್ತದೆ ಎಂದು ಮಾತನಾಡಿಕೊಂಡಿರು.
ಇದರ ಅಸಲಿಯತ್ತನ್ನು ಕಂಡುಹಿಡಿಯಬೇಕೆಂದು ಪ್ಲಾನ್ ಮಾಡಿದ ನಿವಾಸಿಗಳು, ಕ್ಯಾಮೆರಾವೊಂದನ್ನು ಫಿಟ್ ಮಾಡಿ ಆ ವೃದ್ಧನ ಚಲನವಲನಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲು ನಿರ್ಧರಿಸಿದರು. ಈಗ ಈ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಪ್ರಾಣವನ್ನೇ ಪಣಕ್ಕಿಟ್ಟು ತಾತ ಮಾಡ್ತಿದ ಆ ಕೆಲಸವೇನು?
ನಿವಾಸಿಗಳು ಶೂಟ್ ಮಾಡಿದ ವಿಡಿಯೋದಲ್ಲಿ ಆ ವೃದ್ಧನ ವಿಕೃತ ನಡವಳಿಕೆ ಸಂಪೂರ್ಣ ಬಯಲಾಗಿದೆ. ಆ ತಾತ ತನ್ನ ಅರ್ಧ ದೇಹವನ್ನು ಕಿಟಕಿಯಿಂದ ಹೊರಗೆ ತಳ್ಳಿ, ಪಕ್ಕದ ಮನೆಯ ಕೋಣೆಯೊಳಗೆ ಏನು ನಡೆಯುತ್ತಿದೆ ಎಂಬುದನ್ನು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಲು ಮೈ ಚಾಚಿ ನಿಂತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡಿದೆ.
ಸ್ವಲ್ಪ ಆಯತಪ್ಪಿದರೂ ಜೀವವೇ ಹೋಗುವಂತಹ ಅಪಾಯಕಾರಿ ಜಾಗದಲ್ಲಿ ನಿಂತು, ನೆರೆಹೊರೆಯವರ ಒಪ್ಪಿಗೆಯಿಲ್ಲದೆ ಅವರ ಪ್ರೈವೇಟ್ ಮೂಮೆಂಟ್‌ಗಳನ್ನು ಈತ ಸೆರೆ ಹಿಡಿಯುತ್ತಿದ್ದಾನೆ. ಈ ಅಸಭ್ಯ ಮತ್ತು ಅಸಹ್ಯ ವರ್ತನೆ ಇಡೀ ಕಾಲೋನಿಯಲ್ಲಿ ಈಗ ಆಕ್ರೋಶದ ಜ್ವಾಲೆ ಎಬ್ಬಿಸಿದೆ.
ಅಪಾರ್ಟ್‌ಮೆಂಟ್‌ಗಳಲ್ಲಿ ಪ್ರೈವೆಸಿ ಇದೆಯಾ?
ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ, ಅಪಾರ್ಟ್‌ಮೆಂಟ್ ಕಲ್ಚರ್‌ನಲ್ಲಿ ಜನರ ಗೌಪ್ಯತೆ ಮತ್ತು ಭದ್ರತೆಯ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ನಾವು ಲಕ್ಷ ಲಕ್ಷ ದುಡ್ಡು ಕೊಟ್ಟು ಫ್ಲಾಟ್ ತೆಗೆದುಕೊಳ್ಳುತ್ತೆವೆ, ಅಲ್ಲಿ ಈ ತಾತನಂತ ವಿಕೃತ ಮನಸ್ಸಿನವರಿದ್ದರೆ ಹೇಗೆ? ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.
ಇಂತಹ ನಡವಳಿಕೆಗಳನ್ನು ಸುಮ್ಮನೆ ಬಿಟ್ಟರೆ ನೆರೆಹೊರೆಯವರ ನಡುವೆ ಅಪನಂಬಿಕೆ ಮತ್ತು ಭಯದ ವಾತಾವರಣ ಸೃಷ್ಟಿಯಾಗುವುದರಲ್ಲಿ ಸಂಶಯವಿಲ್ಲ ಎನ್ನುವುದು ಅಪಾರ್ಟಮೆಂಟ್ ನಿವಾಸಿಗಳ ಮಾತಾಗಿದೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್ ಮಾಡಲು ಫೀಲ್ಡ್ಗೆ ಇಳಿದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಜನ ವೈರಲ್ ಆಗೋಕೆ ಅಥವಾ ವಿಕೃತ ಸಂತೋಷಕ್ಕಾಗಿ ಏನು ಬೇಕಾದರೂ ಮಾಡ್ತಾರೆ ಎಂದು ಒಬ್ಬ ಬಳಕೆದಾರ ಬರೆದುಕೊಂಡಿದ್ದಾರೆ.
ಒಂದು ಚೂರು ಹೆಚ್ಚು-ಕಮ್ಮಿ ಆಗಿದ್ದರೆ ತಾತನ, ತಿಥಿ ಮಾಡಬೇಕಿತ್ತು ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಈ ರೀತಿಯ ವಿಕೃತ ಮನಸ್ಸಿನ ಜನರನ್ನು ಅರ್ಪಾಟ್ಮೆಂಟ್ನಲ್ಲಿ ಇರಲು ಬಿಡಬಾರದೆಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ, (ಏಜನ್ಸೀಸ್).