ಬೆಂಗಳೂರು: ಮದುವೆ ಸೀಸನ್ ಸಂಭ್ರಮದ ನಡುವೆಯೇ ಆಭರಣ ಪ್ರಿಯರಿಗೆ ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಶಾಕ್ ನೀಡಿದೆ. ಇಂದು (ನವೆಂಬರ್ 23, 2026) ಬೆಂಗಳೂರು ಹಾಗೂ ಚೆನ್ನೈ ಮಾರುಕಟ್ಟೆಗಳಲ್ಲಿ ಬಂಗಾರದ ಬೆಲೆಯಲ್ಲಿ ( Gold Rate Today ) ಭಾರಿ ಏರಿಕೆ ಕಂಡುಬಂದಿದೆ. ಕಳೆದ ಕೆಲವು ದಿನಗಳಿಂದ ಕುಸಿತದ ಹಾದಿಯಲ್ಲಿದ್ದ ಹಳದಿ ಲೋಹ ಇಂದು ಒಂದೇ ಸಮನೆ ಜಿಗಿತ ಕಂಡಿದ್ದು, 18, 22 ಮತ್ತು 24 ಕ್ಯಾರೆಟ್ ಚಿನ್ನದ ದರಗಳ ಸಂಪೂರ್ಣ ವಿವರ ಇಲ್ಲಿದೆ.
ಇಂದು (ನವೆಂಬರ್ 23, 2026) ಬೆಂಗಳೂರು ಮಾರುಕಟ್ಟೆಯಲ್ಲಿ ಚಿನ್ನದ ದರ ಗಗನಮುಖಿಯಾಗಿದೆ. 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 1,350 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ 1,16,000 ರೂಪಾಯಿಗೆ ತಲುಪಿದೆ. ಅದೇ ರೀತಿ, ಶುದ್ಧ ಚಿನ್ನವಾದ 24 ಕ್ಯಾರೆಟ್‌ನ 10 ಗ್ರಾಂ ದರದಲ್ಲಿ 1,480 ರೂಪಾಯಿ ಹೆಚ್ಚಳವಾಗಿ 1,26,560 ರೂಪಾಯಿಗೆ ಮಾರಾಟವಾಗುತ್ತಿದೆ. ಇನ್ನು 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯೂ 1,100 ರೂಪಾಯಿ ಏರಿಕೆ ಕಂಡು 94,910 ರೂಪಾಯಿಗೆ ಬಂದು ನಿಂತಿದೆ.
ನೆರೆಯ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲೂ ಇಂದು ಬೆಂಗಳೂರಿನಂತೆಯೇ ಚಿನ್ನದ ದರದಲ್ಲಿ ಭಾರಿ ಏರಿಕೆ ದಾಖಲಾಗಿದೆ. ಚೆನ್ನೈ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 1,350 ರೂಪಾಯಿ ಹೆಚ್ಚಳದೊಂದಿಗೆ 1,16,000 ರೂಪಾಯಿ ಆಗಿದೆ. ಹಾಗೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,480 ರೂಪಾಯಿ ಏರಿಕೆಯಾಗಿ 1,26,560 ರೂಪಾಯಿಗೆ ತಲುಪಿದ್ದರೆ, 10 ಗ್ರಾಂ 18 ಕ್ಯಾರೆಟ್ ಚಿನ್ನದ ದರ 1,100 ರೂಪಾಯಿ ಜಿಗಿತ ಕಂಡು 94,910 ರೂಪಾಯಿಗೆ ತಲುಪಿದೆ.
ಚಿನ್ನದ ಜತೆಜತೆಗೆ ಬೆಳ್ಳಿ ದರ ಕೂಡ ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ. ಇಂದು ಬೆಂಗಳೂರು ಮತ್ತು ಚೆನ್ನೈ ಎರಡೂ ನಗರಗಳಲ್ಲಿ ಒಂದು ಕೆ.ಜಿ ಬೆಳ್ಳಿಯ ದರ 1,75,000 ರೂಪಾಯಿ ದಾಖಲಾಗಿದೆ. ಕಳೆದ ಕೆಲವು ವಾರಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ನಿರಂತರವಾಗಿ ಏರಿಳಿತ ಕಾಣುತ್ತಿದೆ. ಮದುವೆ ಸೀಸನ್ ಸಂದರ್ಭದಲ್ಲಿ ಇತ್ತೀಚಿನ ವಾರಗಳಲ್ಲಿ ಚಿನ್ನದ ಬೆಲೆ ತುಸು ಇಳಿಕೆಯ ಹಾದಿ ಹಿಡಿದಿತ್ತು, ಆ ಅವಧಿಯಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನ ಸುಮಾರು 1,30,000 ರೂಪಾಯಿ ಹಾಗೂ 22 ಕ್ಯಾರೆಟ್ ಚಿನ್ನ 1,40,000 ರೂಪಾಯಿ ಆಸುಪಾಸಿನಲ್ಲಿ ಏರಿಳಿತ ಕಂಡಿತ್ತು.
ಈಗ ಪ್ರಕಟವಾಗಿರುವ ಚಿನ್ನ ಮತ್ತು ಬೆಳ್ಳಿ ದರಗಳು ಬೆಳಗ್ಗೆ 8 ಗಂಟೆಯ ಮಾರುಕಟ್ಟೆ ಅನ್ವಯವಾಗಿದ್ದು, ಇವು ನಿನ್ನೆಯ ಮುಕ್ತಾಯದ ದರಗಳನ್ನು ಆಧರಿಸಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನವಲನಗಳಿಗೆ ಅನುಗುಣವಾಗಿ ಚಿನ್ನದ ಬೆಲೆ ಪ್ರತಿ ಕ್ಷಣವೂ ಬದಲಾಗುತ್ತಿರುತ್ತದೆ. ಇಂದಿನ ವಹಿವಾಟಿನ ಅವಧಿಯಲ್ಲಿ ದರಗಳು ಮತ್ತಷ್ಟು ಹೆಚ್ಚಾಗುವ ಅಥವಾ ಇಳಿಕೆಯಾಗುವ ಸಾಧ್ಯತೆ ಇರುವುದರಿಂದ, ಚಿನ್ನಾಭರಣ ಖರೀದಿಸಲು ಮುಂದಾಗುವ ಗ್ರಾಹಕರು ಅಂಗಡಿಗೆ ತೆರಳುವ ಮುನ್ನ ಆಯಾ ಸಮಯದ ಲೈವ್ ದರಗಳನ್ನು ಪರಿಶೀಲಿಸುವುದು ಉತ್ತಮ, (ಏಜೆನ್ಸೀಸ್).