ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆ
- ರಾಜಕೀಯದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆ
- ಮೊದಲು ಮಹಿಳೆಯರಿಗೆ ರಕ್ಷಣೆ ನೀಡಿ ಆಮೇಲೆ ಮೀಸಲಾತಿ ಕೊಡಿ ಎಂದ ಲಾಲೂ ಪುತ್ರಿ
- ಕೃತಕ ಬುದ್ದಿಮತ್ತೆ ಉಪಯೋಗಿಸಿಕೊಂಡು ಮಹಿಳೆಯರ ತೇಜೋವಧೆ ನಡೆಯುತ್ತಿದೆ ಎಂದ ರೋಹಿಣಿ ಆಚಾರ್ಯ
ಬಿಹಾರ್: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಹಿಳೆಯರಿಗೆ ರಾಜಕೀಯ ಮೀಸಲಾತಿ ಹಾಗೂ ಲೋಕಸಭಾ ಚುನಾವಣೆಯ ಕ್ಷೇತ್ರ ವಿಂಗಡಣೆಯ ಕುರಿತು ಇಂದು (ಏ.17) ಮೂರು ಮಸೂದೆಗಳನ್ನು ಅಂಗೀಕಾರ ಮಾಡಲು ಮುಂದಾಗಿದೆ. ಈಗ ಈ ಮಸೂದೆ ಬಗ್ಗೆ ಬಿಹಾರದ ಆರ್ಜೆಡಿ ಪಕ್ಷದ ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ (Rohini Acharya on Women Reservation Bill), ಆಕ್ರೋಶ ಹೊರಹಾಕಿದ್ದಾರೆ.
ಮೊದಲು ಮಹಿಳೆಯರಿಗೆ ರಕ್ಷಣೆ ನೀಡಿ; ಆಮೇಲೆ ಮೀಸಲಾತಿ!
ಮಹಿಳೆಯರಿಗೆ ರಾಜಕೀಯದಲ್ಲಿ ಶೇ. 33 ರಷ್ಟು ಮೀಸಲಾತಿ ನೀಡುವ ಮಸೂದೆ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿರುವ ರೋಹಿಣಿ, ಮೊದಲು ದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡಿ, ಕೆಲಸದ ಸ್ಥಳದಲ್ಲಿ ಗೌರವ ನೀಡುವಂತೆ ನೋಡಿಕೊಳ್ಳಿ, ತವರು ಮತ್ತು ಗಂಡನ ಮನೆಯಲ್ಲಿ ಪ್ರೀತಿ ದೊರೆಯುವಂತೆ ಮಾಡಿ ನಂತರ ಮೀಸಲಾಗಿ ನೀಡುವಿರಂತೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬೆರದಿ ಕೊಂಡಿದ್ದಾರೆ.
ಟ್ರೋಲರ್ಗಳಿಗೆ ಮಹಿಳೆಯರೇ ಟಾರ್ಗೆಟ್
ತಮ್ಮ ಎಕ್ಸ್ ಪೋಸ್ಟ್ನಲ್ಲಿ, ಟ್ರೋಲರ್ಗಳ ಬಗ್ಗೆ ಸಹ ಹೇಳಿರುವ ರೋಹಿಣಿ, ಈ ಸೋಶಿಯಲ್ ಮೀಡಿಯಾನಲ್ಲಿ ಮಹಿಳೆಯರನ್ನು ತುಂಬಾ ಕೆಟ್ಟದಾಗಿ, ಅಸಹ್ಯಕರವಾಗಿ ಟ್ರೋಲ್ ಅಥವಾ ಅವಮಾನಿಸುವ ಕೆಲಸ ನಡೆಯುತ್ತಿದೆ. ಅದರಲ್ಲೂ ಈಗ ಕೃತಕ ಬುದ್ದಿಮತ್ತೆ (AI) ಯನ್ನು ಬಳಸಿಕೊಂಡು ತೀರಾ ವಿಕೃತವಾದ ಫೋಟೊ ಮತ್ತು ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ಇವಕ್ಕೆಲ್ಲಾ ನಮ್ಮ ಸರ್ಕಾರ ಯಾವಾಗ ಕಡಿವಾಣ ಹಾಕಲಿದೆ? ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಿರಿ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಹೆಚ್ಚು ಕಡಿಮೆ ಎಂಭತ್ತು ವರ್ಷ ಕಳೆದಿದೆ. ಆದರೆ ಇಲ್ಲಿಯವರೆಗೆ ಎಷ್ಟು ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಪಾಲ/ಭಾಗವನ್ನು ನೀಡಲಾಗುತ್ತಿದೆ. ವರದಕ್ಷಿಗೆ ಈಗ ಗಿಫ್ಟ್ ರೂಪವನ್ನು ಪಡೆದುಕೊಂಡಿದೆ. ಮಹಿಳೆ ಕೆಲಸ ಮಾಡುವ ಸ್ಥಳದಲ್ಲಿ ಸಹ ಸುರಕ್ಷವಾಗಿಲ್ಲದ ಸ್ಥಿತಿಯಲ್ಲಿ ನಾವಿದ್ದೇವೆ.
ಈ ಮೀಸಲಾಗಿ ಜಾರಿಗೆ ಬಂದ ನಂತರ ಸಹ ರಾಜಕಾರಣಿಗಳು ತಮ್ಮ ಪತ್ನಿ, ಮಕ್ಕಳಿಗೆ ಆ ಸ್ಥಾನವನ್ನು ಕೊಡಿಸುತ್ತಾರೆ ಹೊರತು ಸಮಾಜದ ಕೊನೆಯಲ್ಲಿರುವ ಸ್ತ್ರೀ ಈ ಲಾಭವನ್ನು ಪಡೆದುಕೊಳ್ಳುತ್ತಾಳೆ ಎನ್ನುವುದನ್ನು ನಾನು ನಂಬುವುದಿಲ್ಲ ಎಂದು ರೋಹಿಣಿ ಬೇಸರ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್).