30 ಸಾವಿರಕ್ಕೆ ನೀಟ್ ಪ್ರಶ್ನೆ ಪತ್ರಿಕೆ ನೀಡುವುದಾಗಿ ಆಮಿಷ
- ನೀಟ್ ಮರು ಪರೀಕ್ಷೆ ದಿನವೇ ವಿದ್ಯಾರ್ಥಿಗಳಿಗೆ ಬಿಗ್ ಶಾಕ್!
- 30 ಸಾವಿರಕ್ಕೆ ಪ್ರಶ್ನೆ ಪತ್ರಿಕೆ ನೀಡುವುದಾಗಿ ಕ್ಯೂಆರ್ ಕೋಡ್ ಕಳುಹಿಸಿದ ಕಿಲಾಡಿಗಳು
- ವಾಟ್ಸಾಪ್ ಕರೆಗಳ ಬೆನ್ನತ್ತಿದ ಅಜ್ಮೀರ್ ಪೊಲೀಸ್
ಅಜ್ಮೀರ್: ಮೇ. 3 ರಂದು ನಡೆದ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನಲೆ ಇಂದು (ಜೂನ್. 21) ದೇಶದಾದ್ಯಂತ ನೀಟ್ ಮರು ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ಆದರೆ ಈ ಮರು ಪರೀಕ್ಷೆಯಲ್ಲಿ ಸಹ ಪ್ರಶ್ನೆ ಪತ್ರಿಕೆ ಸೋರಿಕೆ (NEET Paper Leak) ಯ ಅನುಮಾನ ವ್ಯಕ್ತವಾಗುತ್ತಿದ್ದು, ರಾಜಸ್ಥಾನದ ಅಜ್ಮೀರದ ವಿದ್ಯಾರ್ಥಿಯೊರ್ವರಿಗೆ 30 ಸಾವಿರಕ್ಕೆ ನೀಟ್ ಪೇಪರ್ ನೀಡುವುದಾಗಿ ಪೋನ್ ಕರೆ ಮೂಲಕ ಹೇಳಿರುವ ಘಟನೆ ವರದಿಯಾಗಿದೆ.
ಮತ್ತೆ ಪೇಪರ್ ಲೀಕ್?
ಅಜ್ಮೀರದ ಡಿಎವಿ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಕೃಷ್ಣಾ ಸಿಂಗ್ ಠಾಕೂರ್ ಈ ಕುರಿತು ಪೊಲೀಸರಲ್ಲಿ ದೂರನ್ನು ನೀಡಿದ್ದಾರೆ. ಶನಿವಾರ (ಜೂ.20) ದ ರಾತ್ರಿ ಹಲವು ವಿದ್ಯಾರ್ಥಿಗಳಿಗೆ ನೀಟ್ ಪೇಪರ್ನ್ನು ನೀಡುತ್ತೆವೆ 30 ಸಾವಿರ ಕೊಟ್ಟು ಪ್ರಶ್ನೆ ಪತ್ರಿಕೆ ನಿಮ್ಮದಾಗಿಸಿಕೊಳ್ಳಿ ಎಂದು ಹೇಳಲಾಗಿದೆ.
ಜೊತೆಗೆ ಕ್ಯೂಆರ್ (QR) ಕೋಡ್ನ್ನು ವಾಟ್ಯಾಸ್ಪ್ಗೆ ಕಳುಹಿಸಿದ್ದಾರೆ. ಇದೊಂದು ಮೋಸದ ಕರೆ, ನಮ್ಮಿಂದ ಹಣ ಪೀಕುವ ಜಾಲವೆಂದು ವಿದ್ಯಾರ್ಥಿಗಳ್ಯಾರು ಈ ಜಾಲಕ್ಕೆ ಬಿದ್ದಿಲ್ಲ. ಆದರೆ ಈ ಕರೆ ನಿಜವಾಗಿದ್ದರೆ ಮತ್ತೊಮ್ಮೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದಲ್ಲವೇ ಎಂದು ದೂರಿನಲ್ಲಿ ಠಾಕೂರ್ ಪ್ರಶ್ನಿಸಿದ್ದಾರೆ.
ಮೋಸ ಹೋಗಬೇಡಿ: ಪೊಲೀಸ್ ವರಿಷ್ಟಾಧಿಕಾರಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ದಾಖಲಿಸಿಕೊಂಡಿರುವ ಪೊಲೀಸ್ ವರಿಷ್ಟಾಧಿಕಾರಿ ಹಿಮಾಂಶು ಜಂಗೀದ್, ನಾವು ಈ ದೂರನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೆವೆ.
ಕರೆ ಬಂದ ಮೊಬೈಲ್ ಸಂಖ್ಯೆ, ಕ್ಯೂಆರ್ (QR) ಕೋಡ್, ಹಾಗೂ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಕಲೆಹಾಕುತ್ತಿದ್ದೆವೆ. ನಂತರ ಈ ಪೇಪರ್ ಸೋರಿಕೆ ಸಂಗತಿ ಎಷ್ಟು ಸತ್ಯ? ಎಷ್ಟು ಮಿತ್ಯ? ಎಂದು ತಿಳಿಯಲಿದೆ ಎಂದಿದ್ದಾರೆ. ಹಾಗೆಯೇ ಪರೀಕ್ಷೆ ಸಮಯದಲ್ಲಿ ಪ್ರಶ್ನೆ ಪತ್ರಿಕೆ ನೀಡುವುದಾಗಿ ನಕಲಿ ಕರೆಗಳು ಬರುತ್ತವೆ. ಆದರೆ ಈ ಜಾಲಕ್ಕೆ ವಿದ್ಯಾರ್ಥಿಗಳು ಸಿಲುಕಬಾರದು, ಅಪರಿಚಿತರನ್ನು ನಂಬಬೇಡಿ ಎಂದು ಎಸ್ಪಿ ಮನವಿ ಮಾಡಿದ್ದಾರೆ, (ಏಜನ್ಸೀಸ್).