ದೇವರು ಶಿವಯ್ಯ ನನ್ನನ್ನು ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾದ ಯುವತಿ! Girl Missing 
ದೇಶ

ದೇವರು ಶಿವಯ್ಯ ನನ್ನನ್ನು ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾದ ಯುವತಿ! Girl Missing

ಪ್ರಮುಖ ಮುಖ್ಯಾಂಶಗಳು

  • ದೇವರು ಶಿವಯ್ಯ ನನ್ನನ್ನು ಕರೆಯುತ್ತಿದ್ದಾನೆ ಎಂದು ಪತ್ರ ಬರೆದಿಟ್ಟು ಯುವತಿ ನಾಪತ್ತೆ
  • ಹೈದರಾಬಾದ್​ ಉಪನಗರ ಮೇಡ್ಚಲ್​ನ ಮೆಡಿಪಲ್ಲಿ ಪಟ್ಟಣದಲ್ಲಿ ನಡೆದ ಘಟನೆ
  • ಕೆಲವು ದಿನಗಳಿಂದ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ನಾಪತ್ತೆಯಾದ ಯುವತಿ
Girl Missing ​: ದೇವರು ಶಿವಯ್ಯ ನನ್ನನ್ನು ಕರೆಯುತ್ತಿದ್ದಾನೆ... ನಾನು ಶಿವಯ್ಯನ ಬಳಿ ಹೋಗುತ್ತಿದ್ದೇನೆ ಎಂದು ಪತ್ರ ಬರೆದಿಟ್ಟು ಯುವತಿಯೊಬ್ಬಳು ಮನೆ ಬಿಟ್ಟು ಹೋಗಿರುವ ಆಘಾತಕಾರಿ ಘಟನೆ ಹೈದರಾಬಾದ್​ ಉಪನಗರ ಮೇಡ್ಚಲ್​ನ ಮೆಡಿಪಲ್ಲಿ ಪಟ್ಟಣದಲ್ಲಿ ನಡೆದಿದೆ.
ನಾಪತ್ತೆಯಾಗಿರುವ ಹುಡುಗಿಯ ಹೆಸರು ಮಧು ಹಸಿತಾ. ಆಕೆಯ ವಯಸ್ಸು 19 ವರ್ಷ. ಪೀರ್ಜಾಡಿಗುಡದ ಪರ್ವತಪುರದ ಸಾಯಿ ಐಶ್ವರ್ಯ ಕಾಲೋನಿಯಲ್ಲಿ ಹಸಿತಾ ಕುಟುಂಬ ವಾಸವಿದೆ. ಈಕೆ ಇಂಟರ್ಮೀಡಿಯೇಟ್ ಮುಗಿಸಿ ಮನೆಯಲ್ಲಿಯೇ ಇದ್ದಳು. ಶುಕ್ರವಾರ (ಮಾರ್ಚ್​ 27) ಸಂಜೆ, ಹಸಿತಾ ಅವರ ತಾಯಿ ಶೈಲಜಾ ಅವರು ಮನೆಗೆ ಬಂದಾಗ, ಅವರ ಮಗಳು ಕಾಣೆಯಾಗಿದ್ದಳು. ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಎಷ್ಟೆ ಹುಡುಕಾಡಿದರೂ ಹಸಿತಾ ಮಾತ್ರ ಪತ್ತೆಯಾಗಲಿಲ್ಲ.
ಮನೆಯಲ್ಲಿ ಏನಾದರೂ ಸಿಗಬಹುದು ಎಂದು ಹುಡುಕಾಡಿದಾಗ ಹಸಿತಾ ಅವರ ತಾಯಿಗೆ ಒಂದು ಪತ್ರ ಪತ್ತೆಯಾಗಿದೆ. ಅದರಲ್ಲಿ 'ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೇನೆ, ದೇವರು ಶಿವಯ್ಯ ನನ್ನನ್ನು ಕರೆಯುತ್ತಿದ್ದಾನೆ ಎಂದು ಬರೆದಿತ್ತು. ಇದಾದ ಕೂಡಲೇ ಕುಟುಂಬ ಸದಸ್ಯರು ಭಯದಿಂದ ಪೊಲೀಸರಿಗೆ ದೂರು ನೀಡಿದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಅಂದಹಾಗೆ, ಹಸಿತಾ ಲಾಲಾಪೇಟದಲ್ಲಿ ವಾಸಿಸುತ್ತಿದ್ದಾಗ ಯುವಕನೊಬ್ಬನನ್ನು ಭೇಟಿಯಾಗಿದ್ದಳು ಎಂದು ತಿಳಿದುಬಂದಿದೆ. ಈ ವಿಚಾರ ಗೊತ್ತಾದಾಗ ಕುಟುಂಬ ಸದಸ್ಯರು ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದರ ಪರಿಣಾಮ ಕಳೆದ ಹತ್ತು ತಿಂಗಳಿನಿಂದ ಆಕೆ, ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಆದರೆ, ಕಳೆದ ಕೆಲವು ದಿನಗಳಿಂದ ಹಸಿತಾ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸದ್ಯ ಕುಟುಂಬ ಸದಸ್ಯರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಯುವತಿ ಎಲ್ಲಿಗೆ ಹೋಗಿದ್ದಾಳೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ, (ಏಜೆನ್ಸೀಸ್​).