ವೈರಲ್ ಮಿಮ್ಸ್ಗಳಿಗೆ ರವಿ ಕಿಶನ್ ಪ್ರತಿಕ್ರಿಯೆ
- ಜೆನ್-ಜೀ (Gen-Z) ಯುವಕರು ನನ್ನನ್ನು ಒಪ್ಪಿಕೊಂಡಿದ್ದಾರೆ
- ಇದೆಲ್ಲಾ ಮಹಾದೇವನ ಆಶೀರ್ವಾದ ಎಂದು ನಟ-ಸಂಸದ ರವಿ ಕಿಶನ್
- ವೈರಲ್ ಮಿಮ್ಸ್ಗಳಿಗೆ ರವಿ ಕಿಶನ್ ಪ್ರತಿಕ್ರಿಯೆ
ನವದೆಹಲಿ: ಕಳೆದ ಕೆಲ ದಿನಗಳಿಂದ ಭೋಜಪುರಿ ನಟ, ಬಿಜೆಪಿ ಸಂಸದ ರವಿ ಕಿಶನ್ ಅವರು ಎಲ್ಲರ ಮೊಬೈಲ್ಗಳಲ್ಲಿ ಮಿಂಚುತ್ತಿದ್ದು, ಸೋಷಿಯಲ್ ಮೀಡಿಯಾ ತೆರೆದರೆ ಸಾಕು ಇವರ ಕುರಿತಾದ ಮೀಮ್ಗಳ ಸುರಿಮಳೆಯೇ ಹರಿಯುತ್ತಿದೆ.
ಈಗ, ತಮ್ಮ ಮೀಮ್ಗಳ ಕುರಿತು ಮಾತನಾಡಿರುವ ರವಿ ಕಿಶನ್ (Ravi Kishan on Memes) ಈ ಪೀಳಿಗೆಯ ಜೆನ್-ಜೀ ಗಳಿಗೆ ನಾನು ಇಷ್ಟವಾಗಿದ್ದೆನೆ, ಇದು ನನಗೆ ತುಂಬಾ ಖುಷಿಯನ್ನು ತಂದುಕೊಟ್ಟಿದೆ ಎಂದಿದ್ದಾರೆ.
ನನ್ನನ್ನು ಅವರು ಒಪ್ಪಿಕೊಂಡಿದ್ದಾರೆ!
ಸದ್ಯ ಯಾರ ಸೋಷಿಯಲ್ ಮೀಡಿಯಾ ಖಾತೆಗಳನ್ನು ತೆರೆದರೂ 'ಕೋಟೆಶ್ವರ', 'ಮನಿ ಫಾಲೋಸ್ ಮೈ ಬ್ರದರ್', 'ಜಲ್ದಿ ಸೇ ಲೇಟ್' ಈ ಮೀಮ್ಗಳೇ ಕಾಣಿಸಿಕೊಳ್ಳುತ್ತಿವೆ. ಹೇಳಿ ಕೇಳಿ ಜೆನ್-ಜೀ ಗಳಿಗೆ ಈ ಮೀಮ್ಗಳು ಬಹಳ ಇಷ್ಟವಾಗುವ ಕಾರಣ, ಈ ಮೀಮ್ಗಳ ಕಥಾವಸ್ತುವಾಗಿರುವ ಸಂಸದ ರವಿ ಕಿಶನ್ ಎಲ್ಲಡೆ ವೈರಲ್ ಆಗುತ್ತಿದ್ದಾರೆ.
ತಮ್ಮ ಬಗ್ಗೆ ಮೀಮ್ ಮಾಡುತ್ತಿರುವ ಹಾಗೂ ಅವು ವೈರಲ್ ಆಗುತ್ತಿರುವುದಕ್ಕೆ ಪ್ರತಿಕ್ರಿಯಿ ನೀಡಿರುವ ರವಿ ಕಿಶನ್, ಜೆನ್-ಜೀ ಗಳಿಗೆ ನನ್ನ ಮುಕ್ತವಾದ ಮಾತು ಇಷ್ಟವಾಗಿದೆ. ನಾನು ಇದನ್ನು ನೋಡುತ್ತಿದ್ದು ನನಗೂ ಇದು ಬಹಳ ಹಿಡಿಸಿದೆ ಎಂದಿದ್ದಾರೆ. ಈಗ ಶ್ರಾವಣ ಮಾಸ ನಡೆಯುತ್ತಿದ್ದು, ಇದೆಲ್ಲಾ ಮಹಾದೇವನ ಆಶೀರ್ವಾದವಾಗಿದೆ ಎಂದಿದ್ದಾರೆ.
ದಿಢೀರ್ ಖ್ಯಾತಿಗೆ ಕುಟುಂಬ ಶಾಕ್!
ತಾವು ಇತ್ತೀಚೆಗೆ ನೀಡಿದ್ದ ಸಂದರ್ಶನ, ಸಂಸತ್ತಿನಲ್ಲಿ ಮಾಧ್ಯಮದವರಿಗೆ ನೀಡಿದ ಹೇಳಿಕೆಗಳನ್ನು ಬಳಸಿಕೊಂಡು ಈ ಮೀಮ್ಗಳನ್ನು ಮಾಡುತ್ತಿದ್ದಾರೆ. ನಾನು ನಟನಾಗಿ ಹಾಗೂ ರಾಜಕಾರಣಿಯಾಗಿ ಕನಿಷ್ಟ 30-35 ವರ್ಷ ಕಳೆದಿದ್ದೆನೆ, ಆದರೆ ಈ ಮಟ್ಟಿಗಿನ ಖ್ಯಾತಿಯನ್ನು ನಾವು ನೋಡಿರಲಿಲ್ಲ.
ಈ ಡಢೀರ್ ಖ್ಯಾತಿಗೆ ನನ್ನ ಕುಟುಂಬ ವರ್ಗ ಕೂಡ ದಂಗಾಗಿದ್ದು, ನನ್ನ ಮೀಮ್ಗಳನ್ನು ಬಿಜೆಪಿ ಮತ್ತು ದೆಹಲಿ ಪೊಲೀಸರು ಕೂಡ ಬಳಸಿಕೊಳ್ಳುತ್ತಿದ್ದಾರೆಂದ ರವಿ ಕಿಶನ್ ಸಂತಸ ವ್ಯಕ್ತ ಪಡಿಸಿದ್ದಾರೆ. ಇದಕ್ಕೆಲ್ಲಾ ಮಹಾದೇವನ ಕೃಪೆ, ಅವನ ಮೇಲೆ ನನಗಿರುವ ಭಕ್ತಿಯೇ ಕಾರಣವೆಂದು ನಾನು ನಂಬುತ್ತೆನೆಂದು ರವಿ ಕಿಶನ್ ತಿಳಿಸಿದ್ದಾರೆ, (ಏಜನ್ಸೀಸ್).