ಅಯೋಧ್ಯಾ ರಾಮ ಮಂದಿರದ ಬೆನ್ನಲ್ಲೇ ಕೇದಾರನಾಥ ಮತ್ತು ಬದರಿನಾಥ ದೇವಸ್ಥಾನಗಳಲ್ಲಿ ಅಕ್ರಮ ಆರೋಪ
- ಅಯೋಧ್ಯಾ ರಾಮ ಮಂದಿರದ ಬೆನ್ನಲ್ಲೇ ಕೇದಾರನಾಥ ಮತ್ತು ಬದರಿನಾಥ ದೇವಸ್ಥಾನಗಳಲ್ಲಿ ಅಕ್ರಮ ಆರೋಪ
- ಈ ಕುರಿತು ತನಿಖೆಗೆ ವಿಶೇಷ ಸಮಿತಿ ರಚಿನೆ
- ಪ್ಪಿತಸ್ಥರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಆಡಳಿತ ಮಂಡಳಿ
ಉತ್ತರಾಖಂಡ: ಸದ್ಯ ದೇಶದಲ್ಲಿ ಅಯೋಧ್ಯಾ ರಾಮ ಮಂದಿರದ ದೇಣಿಗೆ ಅಕ್ರಮ ವಿಚಾರ ಸಾಕಷ್ಟು ವಿವಾದಕ್ಕೆ ಕಾರಣವಾದ ಬೆನ್ನಲ್ಲೆ, ಕೇದಾರನಾಥ ಹಾಗೂ ಬದರಿನಾಥ ದೇವಸ್ಥಾನ (Temple Controversy) ದಲ್ಲಿ ಸಹ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬರುತ್ತಿದೆ.
ದೇವಸ್ಥಾನದ ಮೇಲೆ ಕೇಳಿ ಬಂದಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಆಡಳಿತ ಮಂಡಳಿ ಈ ಬಗ್ಗೆ ವಿಚಾರಣೆ ನಡೆಸಲು ತನಿಖಾ ಸಮಿತಿಯನ್ನು ರಚಿಸಲಾಗಿದೆ ಎಂದು ಕೇದಾರನಾಥ-ಬದರಿನಾಥ ದೇವಸ್ಥಾನ ಮಂಡಳಿ ಅಧ್ಯಕ್ಷ ಹೇಮಂತ್ ದ್ವಿವೇದಿ ತಿಳಿಸಿದ್ದಾರೆ.
ಕಠಿಣ ಕ್ರಮ ತೆಗೆದುಕೊಳ್ಳುತ್ತೆವೆ!
ಕಮಿಟಿ ನಡೆಸಲಿರುವ ತನಿಖೆಯಲ್ಲಿ ಅಕ್ರಮ ಸಾಭೀತಾದರೆ ಅಂತಹ ವ್ಯಕ್ತಿಗಳ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಲಾಗುವುದು. ಸಿಸಿಟಿವಿ ಕ್ಯಾಮರಾ, ಸಂಬಂಧಪಟ್ಟವರ ಹೇಳಿಕೆ ಹಾಗೂ ಲಭ್ಯವಿರುವ ಸಾಕ್ಷಿಗಳ ಆಧಾರದಲ್ಲಿ ತನಿಖಾ ಮಂಡಳಿ ವರದಿಯನ್ನು ಸಲ್ಲಿಸಲಿದೆ ಎಂದು ಹೇಳಿದ್ದಾರೆ.
1939 ರ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ನೌಕರರ ನಡವಳಿಕೆ ನಿಯಮಗಳ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಾನೂನು ಮತ್ತು ಇಲಾಖಾ ಕ್ರಮ ಕೈಗೊಳ್ಳುವ ಅಧಿಕಾರ ಆಡಳಿತ ಸಮಿತಿಗಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ.
ಹೀಗಾಗಿ ತನಿಖೆ ನಡೆದು, ವರದಿ ಸಲ್ಲಿಕೆಯಾಗುವವರೆಗೆ ದೇವಸ್ಥಾನದ ಬಗ್ಗೆ ಸೋಷಿಯಲ್ ಮೀಡಿಯಾನಲ್ಲಿ ಇಲ್ಲ ಸಲ್ಲದ ಅವಹೇಳನಾಕಾರಿ ಪೋಸ್ಟ್ಗಳನ್ನು ಹಂಚಿಕೊಳ್ಳಬೇಡಿ. ತಪ್ಪು ಮಾಡಿದವರಿಗೆ ಖಂಡಿತ ಶಿಕ್ಷೆ ಆಗಲಿದೆ ಎಂದು ಮನವಿ ಮಾಡಿದ್ದಾರೆ, (ಏಜನ್ಸೀಸ್).