ಕೋಟಿ ಆಸೆಗೆ ಅಪ್ರಾಪ್ತ ಯುವಕನನ್ನು ಕೊಂದು, ವೃಷಣ ಕದ್ದ ಪಾಪಿಗಳು 
ದೇಶ

ಮೊದಲು ಕೊ*ಲೆ... ಬಳಿಕ ವೃಷಣ ನಾಪತ್ತೆ! ತನಿಖೆಯಲ್ಲಿ ಬಯಲಾಯ್ತು ಕೋಟಿ ಆಸೆಯ ಬೆಚ್ಚಿಬೀಳಿಸುವ ರಹಸ್ಯ! Murder for Testicles

ಪ್ರಮುಖ ಮುಖ್ಯಾಂಶಗಳು

  • ಯುವಕರ ವೃಷಣಕ್ಕೆ ಕೋಟಿ ಬೆಲೆ ಎಂಬ ರೀಲ್​
  • ಇನ್​ಸ್ಟಾಗ್ರಾಮ್​ ರೀಲ್​ ನೋಡಿ ಗೆಳೆಯನನ್ನು ಕೊಂದ ಪಾಪಿಗಳು
  • ವೃಷಣ ಕಳ್ಳರನ್ನು ಪೊಲೀಸರು ಪತ್ತೆ ಹಚ್ಚಿದ್ದೇಗೆ?
ಭೋಪಾಲ್​: ಅಪ್ರಾಪ್ತ ಯುವಕರ ವೃಷಣಗಳು ಕೋಟಿ ಬೆಲೆಗೆ ಮಾರಾಟವಾಗುತ್ತದೆ ಎಂಬ ಇನ್​ಸ್ಟಾಗ್ರಾಮ್​ ರೀಲ್​ ನೋಡಿ, ಕೊಲೆ (Murder for Testicles) ಮಾಡಿರುವ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ವರದಿಯಾಗಿದೆ.
ಹುಡುಗರ ವೃಷಣಗಳಿಗೆ ಸುಮಾರು 1 ರಿಂದ 1.50 ಕೋಟಿಗೆ ಬೆಲೆಯಿದೆ ಎಂದು ಭಾವಿಸಿರುವ ಯುವಕರ ಗುಂಪೊಂದು ರಸ್ತೆಯಲ್ಲಿ ಪೆನ್ನು, ಕೀ ಚೈನ್​ ಮಾರುತ್ತಿದ್ದ ರಿಹಾನ್​ ಎಂಬಾತನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಇನ್​ಸ್ಟಾಗ್ರಾಮ್​ ರೀಲ್​ ತಂದ ಆಪತ್ತು!

ಜೋಹೆಬ್​ ಖಾನ್​ ಎಂಬ ಎರಡನೇ ವರ್ಷದ ಬಿಬಿಎ ವಿದ್ಯಾರ್ಥಿ, ತಾನೊಬ್ಬ ಡಾಕ್ಟರ್​ ಎಂಬಂತೆ ಪೋಸ್​ ಕೊಟ್ಟು ಇನ್​​ಸ್ಟಾಗ್ರಾಮ್​ನಲ್ಲಿ 15-20 ವರ್ಷದ ಹುಡುಗರ ವೃಷಣಗಳಿಗೆ ಒಂದು ಕೋಟಿಗೂ ಹೆಚ್ಚಿನ ಬೆಲೆಯಿದೆ ಎಂದು ಹೇಳಿದ್ದಾನೆ.

ಇವನ ಮಾತನ್ನು ನಂಬಿದ ಇಬ್ಬರು ಅಪ್ರಾಪ್ತರು ಈ ರಿಹಾನ್​ ಎಂಬ ಯುವಕನನ್ನು ಕೋಟಿ ಆಸೆಗೆ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಹೆಬ್​ ಖಾನ್​, ಆಮೀರ್​ ಖುರೇಶಿ ಹಾಗೂ ಇನ್ನು ಮೂರು ಜನ ಅಪ್ರಾಪ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ವೃಷಣ ಮಾರಾಟವಾಗದೆ ಸಿಕ್ಕಿಬಿದ್ದರು!

ಡಿಸಿಪಿ ಆಯುಶ್​ ಗುಪ್ತಾ ನೀಡಿರುವ ಮಾಹಿತಿ ಪ್ರಕಾರ, ಬಂಧಿತ ಅಪ್ರಾಪ್ತ ಬಾಲಕರು ಮೃತ ರಿಹಾನ್​ನ ಪರಿಚಿತರೆಂದು ತಿಳಿದು ಬಂದಿದೆ. ವೃಷಣ ಮಾರಿದರೆ ಕೋಟಿ ಸಿಗುತ್ತದೆ ಎಂದು ತಿಳಿದ ಇವರು ರಿಹಾನ್​ನನ್ನು ಕೊಲ್ಲಲ್ಲು ಯೋಜನೆ ರೂಪಿಸಿದ್ದಾರೆ.
ತಮಗೆ ಎದುರಿನ ಗಲ್ಲಿ ಹುಡುಗರ ಜೊತೆ ಜಗಳವಾಗಿದೆ, ನೀನು ನಮ್ಮ ಜೊತೆಗೆ ಬಾ ಎಂದು ನೂರು ರೂಪಾಯಿಯನ್ನು ರಿಹಾನ್​ಗೆ ನೀಡಿದ್ದಾರೆ. ನಂತರ ನೂರು ರೂಪಾಯಿ ಆಸೆಗೆ ಇವರೊಟ್ಟಿಗೆ ಹೋದ ರಿಹಾನ್​ನನ್ನು ಕೊಂದು ಆತನ ವೃಷಣಗಳನ್ನು ಇವರು ಇಟ್ಟುಕೊಂಡಿದ್ದಾರೆ.

ಆದರೆ, ಈ ವೃಷಣವನ್ನು ಯಾರಿಗೆ ಮಾರಬೇಕು? ಹೇಗೆ ಮಾರಬೇಕು? ಖರೀದಿಗಾರರು ಎಲ್ಲಿ ಸಿಗುತ್ತಾರೆ? ಎಂಬ ಮಾಹಿತಿ ತಿಳಿಯದೇ ಗಾಬರಿಯಾಗಿದ್ದಾರೆ. ನಂತರ ಇದೊಂದು ಸುಳ್ಳು ಮಾಹಿತಿಯುಳ್ಳ ರೀಲ್​ ಎಂದು ತಿಳಿದು ವೃಷಣವನ್ನು ಹಳ್ಳಕ್ಕೆ ಎಸೆದಿದ್ದಾರೆ.


ಸಿಕ್ಕಿಬಿದ್ದಿದ್ದು ಹೇಗೆ?

ಆದರೆ, ಈ ಗ್ಯಾಂಗ್​ ಇಲ್ಲೊಂದು ತಪ್ಪು ಮಾಡಿದೆ. ರಿಹಾನ್​​ನನ್ನು ಕೊಂದು ಅವನ ದೇಹವನ್ನು ಅಲ್ಲೇ ಅವಿಸಿಟ್ಟು ಹೋಗಿದ್ದಾರೆ. ಆದರೆ ಕೆಲ ದಿನಗಳ ನಂತರ ರಿಹಾನ್​ನ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದಾಗ ವೃಷಣ ಕತ್ತರಿಸಿರುವುದು ತಿಳಿದಿದ್ದು, ಇದೊಂದು ಮಾನವ ದೇಹ ಕಳ್ಳ ಸಾಗಾಣಿಕೆ ಪ್ರಕರಣ ಎಂದು ಭಾವಿಸಲಾಗಿದೆ.

ನಂತರ ಈ ರಿಹಾನ್​ನ ಸೋಷಿಯಲ್​ ಮೀಡಿಯಾ ಹಾಗೂ ಅಕ್ಕ-ಪಕ್ಕದಲ್ಲಿ ವಿಚಾರಿಸಿದಾಗ, ಈ ಕೊಲೆಗಾರರ ಪತ್ತೆಯಾಗಿದೆ. ನಂತರ ಈ ಕೋಟಿ ಬೆಲೆ ವೃಷಣದ ವೃತ್ತಾಂತ ಬೆಳಕಿಗೆ ಬಂದಿದೆ, (ಏಜನ್ಸೀಸ್​).