ಐಎಎಸ್ ಅಧಿಕಾರಿ ಆರಾಧನಾ ದಾಸ್ 
ದೇಶ

ಅಂಗವಿಕಲ ವ್ಯಕ್ತಿಗೆ 95 ಲಕ್ಷ ರೂ. ವಂಚಿಸಿದ ಮಹಿಳಾ ಐಎಎಸ್ ಅಧಿಕಾರಿ; ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ | Female IAS officer

ಭುವನೇಶ್ವರ: ಒಡಿಶಾದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ ವಿಶೇಷಚೇತನ ವ್ಯಕ್ತಿಯೊಬ್ಬರಿಗೆ ಜಮೀನು ಕೊಡಿಸುವ ನೆಪದಲ್ಲಿ 95 ಲಕ್ಷ ರೂ. ಪಡೆದು ವಂಚನೆ ಮತ್ತು ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಒಡಿಶಾದ ಕಟಕ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಐಎಎಸ್ ಅಧಿಕಾರಿ ಆರಾಧನಾ ದಾಸ್ ಪ್ರಸ್ತುತ ಒಡಿಶಾ ಗೃಹ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿರುವ ಅವರು ಕಮಲ್ ಕುಮಾರ್ ಭಾವಿಸಿಂಕಾ ಎಂಬ ಅಂಗವಿಕಲ ವ್ಯಕ್ತಿಗೆ ಕಟಕ್ ಅಭಿವೃದ್ಧಿ ಪ್ರಾಧಿಕಾರ(ಸಿಡಿಎ) ಪ್ರದೇಶದಲ್ಲಿ ಭೂಮಿ ನೀಡುವುದಾಗಿ ಹೇಳಿ 95 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.
ಕಮಲ್ ಕುಮಾರ್ ದೂರಿನ ಪ್ರಕಾರ, ಕಟಕ್ ಅಭಿವೃದ್ಧಿ ಪ್ರಾಧಿಕಾರ(ಸಿಡಿಎ) ಪ್ರದೇಶದಲ್ಲಿ ಭೂಮಿ ನೀಡುವುದಾಗಿ ಹೇಳಿ 95 ಲಕ್ಷ ರೂ.ಗಳನ್ನು ಪಡೆದಿದ್ದರು. ತಮ್ಮ ಬೀನಾ ಬ್ಯಾಂಕ್ ಖಾತೆಗಳ ಮೂಲಕ ಎರಡು ವಿಭಿನ್ನ ದಿನಾಂಕಗಳಲ್ಲಿ ಆರಾಧಾನ ದಾಸ್​ ಅವರಿಗೆ ಹಣವನ್ನು ವರ್ಗಾಯಿಸಲಾಗಿದೆ. 95 ಲಕ್ಷ ರೂ.ಗಳನ್ನು ಪಡೆದ ಆರಾಧಾನ ದಾಸ್ ಅವರು ಭೂಮಿಯನ್ನು ನೀಡಲಿಲ್ಲ, ಮತ್ತು ಪಡೆದಿದ್ದ ಹಣವನ್ನು ವಾಪಸ್ ನೀಡಲಿಲ್ಲ. ಹಿಂತಿರುಗಿಸುವಂತೆ ಕೇಳಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ತನಿಖೆ ನಡೆಸಿರುವ ಸಿಡಿಎ ಹಂತ-2 ಠಾಣೆ ಪೊಲೀಸರು, ಭೂಮಿ ನೀಡುವ ಭರವಸೆಗೆ ಸಂಬಂಧಿಸಿದಂತೆ 95 ಲಕ್ಷ ರೂ.ಗಳ ವಹಿವಾಟು ನಡೆದಿರುವುದು ದೃಢಪಟ್ಟಿದೆ. ಸ್ವಲ್ಪ ಹಣವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ. ಆದರೆ ಪ್ರಕರಣದ ತನಿಖೆಯಲ್ಲಿ ಐಎಎಸ್ ಅಧಿಕಾರಿ ಆರಾಧನಾ ದಾಸ್ ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ ಎನ್ನಲಾಗಿದ್ದು, ಈ ಕುರಿತು ಸರ್ಕಾರಿ ನಿಯಮಗಳ ಪ್ರಕಾರ ಐಎಎಸ್ ಅಧಿಕಾರಿ ವಿರುದ್ಧ ಔಪಚಾರಿಕ ಕ್ರಮ ಕೈಗೊಳ್ಳಲು ಅನುಮತಿ ಕೋರಿ ಪೊಲೀಸ್ ಆಯುಕ್ತಾಲಯವು ರಾಜ್ಯ ಗೃಹ ಇಲಾಖೆ ಮತ್ತು ಸಾಮಾನ್ಯ ಆಡಳಿತ ಇಲಾಖೆಗೆ (ಜಿಎಡಿ) ಪತ್ರ ಬರೆದಿದೆ ಎನ್ನಲಾಗಿದೆ (ಏಜೆನ್ಸೀಸ್).