ಮಾರಕ ರೋಗದ ವಿರುದ್ಧ ಗೆದ್ದು ಬಂದಿದ್ಹೇಗೆ ಸೋನಿಯಾ ಗಾಂಧಿ WEB
ದೇಶ

ಮಾರಕ ರೋಗದ ವಿರುದ್ಧ ಗೆದ್ದು ಬಂದಿದ್ಹೇಗೆ ಸೋನಿಯಾ ಗಾಂಧಿ? ಕಠಿಣ ದಿನಗಳ ಅನುಭವ ಹಂಚಿಕೊಂಡ ಕಾಂಗ್ರೆಸ್ ಅಧಿನಾಯಕಿ! sonia gandhi

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಜೀವನದ ಅತ್ಯಂತ ಕಠಿಣ ಆರೋಗ್ಯ ಹೋರಾಟದ ಕುರಿತು ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. 2010ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ಕ್ಯಾನ್ಸರ್ ಪ್ಯಾಂಕ್ರಿಯಾಸ್‌ಗೂ ಹರಡಿರುವುದು ತಿಳಿದುಬಂದಿತ್ತು ಎಂಬ ಆಘಾತಕಾರಿ ಸಂಗತಿಯನ್ನು ತಮ್ಮ ಆತ್ಮಕಥೆ 'Belonging: A Journey of Love'ನಲ್ಲಿ ಬಹಿರಂಗಪಡಿಸಿದ್ದಾರೆ. sonia gandhi

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತಮ್ಮ ಜೀವನದ ಅತ್ಯಂತ ಕಠಿಣ ಆರೋಗ್ಯ ಹೋರಾಟದ ಕುರಿತು ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. 2010ರಲ್ಲಿ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಬಳಿಕ ಕ್ಯಾನ್ಸರ್ ಪ್ಯಾಂಕ್ರಿಯಾಸ್‌ಗೂ ಹರಡಿರುವುದು ತಿಳಿದುಬಂದಿತ್ತು ಎಂಬ ಆಘಾತಕಾರಿ ಸಂಗತಿಯನ್ನು ತಮ್ಮ ಆತ್ಮಕಥೆ 'Belonging: A Journey of Love'ನಲ್ಲಿ ಬಹಿರಂಗಪಡಿಸಿದ್ದಾರೆ. ಕ್ಯಾನ್ಸರ್ ಪತ್ತೆಯಾದ ಸಂದರ್ಭದಲ್ಲಿ ತಮಗಾದ ಆತಂಕ, ಮಕ್ಕಳೊಂದಿಗಿನ ಭಾವನಾತ್ಮಕ ಕ್ಷಣಗಳು ಹಾಗೂ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ನಿರ್ಧರಿಸಿದ ಹಿಂದಿನ ಕಾರಣಗಳನ್ನು ಅವರು ಪುಸ್ತಕದಲ್ಲಿ ವಿವರಿಸಿದ್ದಾರೆ.

ಕ್ಯಾನ್ಸರ್ ಸುದ್ದಿ ಕೇಳಿ ಕಂಗಾಲಾಗಿದ್ದ ಸೋನಿಯಾ

2010ರಲ್ಲಿ ಮೊದಲ ಬಾರಿಗೆ ಕ್ಯಾನ್ಸರ್ ಪತ್ತೆಯಾದಾಗ ಸೋನಿಯಾ ಗಾಂಧಿ ಮಾನಸಿಕವಾಗಿ ಆಘಾತಕ್ಕೊಳಗಾಗಿದ್ದರು. ವೈದ್ಯರ ಮೇಲೆ ಸಂಪೂರ್ಣ ವಿಶ್ವಾಸವಿದ್ದರೂ, ಭಾರತದಲ್ಲಿ ಚಿಕಿತ್ಸೆ ಪಡೆದರೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯಬಹುದು ಎಂಬ ಆತಂಕ ಅವರಿಗಿತ್ತು. ಹೀಗಾಗಿ ದೆಹಲಿಯಲ್ಲೇ ಚಿಕಿತ್ಸೆ ಪಡೆಯುವ ಬದಲು ವಿದೇಶಕ್ಕೆ ತೆರಳಲು ನಿರ್ಧರಿಸಿದ್ದರು.

ಸುದ್ದಿ ತಿಳಿದ ತಕ್ಷಣ ನಾನು ಸಂಪೂರ್ಣ ಆಘಾತಕ್ಕೊಳಗಾಗಿದ್ದೆ. ಕಣ್ಣಮುಂದೆ ತೀವ್ರ ಆತಂಕ ಆವರಿಸಿತ್ತು. ಪ್ರತಿಯೊಂದು ಕ್ಷಣವೂ ಕಳೆಯುವುದು ಅತ್ಯಂತ ಕಷ್ಟವಾಗಿತ್ತು. ನನ್ನ ಮಕ್ಕಳು ಹಾಗೂ ನನಗೆ ಈ ವಿಚಾರ ತಿಳಿಸಿದಾಗ, ಮನಸ್ಸಿನಲ್ಲಿ ಮುಂದೇನಾಗುವುದೋ ಎಂಬ ಭಯಾನಕ ಪರಿಣಾಮಗಳ ಆಲೋಚನೆಗಳೇ ಸುಳಿದಾಡತೊಡಗಿದವು ಎಂದು ಸೋನಿಯಾ ಗಾಂಧಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

'Belonging: A Journey of Love'

ಮಾಧ್ಯಮಗಳ ಕಣ್ಣಿನಿಂದ ದೂರವಿರಲು ಬಯಸಿದ್ದೇಕೆ?

ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ನಡೆದಿದ್ದರೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗುತ್ತಿತ್ತು. ಪ್ರತಿಯೊಂದು ಬೆಳವಣಿಗೆಯೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗುತ್ತಿತ್ತು. ಇಂತಹ ಪರಿಸ್ಥಿತಿಯನ್ನು ಎದುರಿಸಲು ತಮಗೆ ಇಷ್ಟವಿರಲಿಲ್ಲ ಎಂದು ಸೋನಿಯಾ ಹೇಳಿದ್ದಾರೆ. ನಾನು ಸಾರ್ವಜನಿಕ ವ್ಯಕ್ತಿಯಾಗಿದ್ದೆ ಎಂಬುದು ನಿಜ. ಆದರೆ ಅದಕ್ಕಾಗಿ ನನ್ನ ವೈಯಕ್ತಿಕ ಬದುಕಿನ ಗೌಪ್ಯತೆಯನ್ನೂ ಕಳೆದುಕೊಳ್ಳಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ರಾಮಾಯಣ ಸಿನಿಮಾ ನೋಡಿ ಬೆರಗಾದ ಡ್ರೀಮ್ ಗರ್ಲ್ ಹೇಮಾ ಮಾಲಿನಿ! ರಣಬೀರ್, ಸಾಯಿ ಪಲ್ಲವಿ ನಟನೆಗೆ ಮನಸೋತ ನಟಿ! Ramayan movie

ಮಿಲನ್‌ನಿಂದ ರೋಟರ್‌ಡ್ಯಾಮ್‌ವರೆಗೆ ಚಿಕಿತ್ಸೆ

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಸೋನಿಯಾ ಗಾಂಧಿ ಇಟಲಿಯ ಮಿಲನ್ ಮತ್ತು ನೆದರ್‌ಲ್ಯಾಂಡ್ಸ್‌ನ ರೋಟರ್‌ಡ್ಯಾಮ್‌ಗೆ ತೆರಳಿದ್ದರು. ವಿಶ್ವಪ್ರಸಿದ್ಧ ಕ್ಯಾನ್ಸರ್ ತಜ್ಞ ವೈದ್ಯರ ನೇತೃತ್ವದಲ್ಲಿ ಎರಡು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರು. ಈ ಕಠಿಣ ಆರೋಗ್ಯ ಹೋರಾಟದ ವಿವರಗಳನ್ನು ಇಷ್ಟು ವರ್ಷಗಳ ಕಾಲ ಸಾರ್ವಜನಿಕರಿಂದ ದೂರವಿಟ್ಟಿದ್ದರು. ಇದೀಗ ತಮ್ಮ ಆತ್ಮಕಥೆಯ ಮೂಲಕ ಆ ದಿನಗಳ ನೋವು, ಆತಂಕ ಮತ್ತು ಕುಟುಂಬದ ಬೆಂಬಲದ ಕುರಿತು ಸೋನಿಯಾ ಗಾಂಧಿ ಮೊದಲ ಬಾರಿಗೆ ವಿವರಿಸಿದ್ದಾರೆ. ಅವರ ಈ ವೈಯಕ್ತಿಕ ಬಹಿರಂಗಪಡಿಸುವಿಕೆ ರಾಜಕೀಯ ವಲಯದಲ್ಲಷ್ಟೇ ಅಲ್ಲದೆ ಸಾರ್ವಜನಿಕ ವಲಯದಲ್ಲೂ ಗಮನ ಸೆಳೆದಿದೆ.