ಅಡುಗೆಮನೆಯಲ್ಲಿ ಜಿರಳೆ, ನೊಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಎಫ್‌ಡಿಎ (FDA) ಖಡಕ್ ಕ್ರಮ 
ದೇಶ

ಮೆಕ್‌ಡೊನಾಲ್ಡ್ಸ್‌ ಮೇಲೆ ಎಫ್‌ಡಿಎ ಖಡಕ್​ ಆ್ಯಕ್ಷನ್: ಅಡುಗೆಮನೆಯಲ್ಲಿ ಜಿರಳೆ, ನೊಣ ಪತ್ತೆ; ಲೈಸೆನ್ಸ್​ ರದ್ದು ಪಡಿಸಿ ಆದೇಶ! FDA Suspends McDonalds License

ಮುಂಬೈ:

ಕಳೆದ ಕೆಲ ದಿನಗಳಲ್ಲಿ ಮಹಾರಷ್ಟ್ರದಲ್ಲಿ ಆಹಾರ ಸುರಕ್ಷತೆ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಖ್ಯಾತನಾಮ, ವಿಶ್ವವಿಖ್ಯಾತ ಆಹಾರ ಮಳಿಗೆಗಳು ಸೇರಿದಂತೆ ತಯಾರಿಸುವ ಆಹಾರದಲ್ಲಿ ಲೋಪ ಕಂಡುಬಂದಲ್ಲಿ ಕೂಡಲೇ ಪರವಾನಗಿಯನ್ನು ರದ್ದುಪಡಿಸುತ್ತಿರುವ ಟ್ರೆಂಡ್​ ಆರಂಭವಾಗಿದೆ.


ಶುಕ್ರವಾರ (ಆ.21) ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ದ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 13 ಆಹಾರ ಮಳಿಗೆ, ಹೋಟೆಲ್​ ಹಾಗೂ ಫುಡ್​ ಜಾಯಿಂಟ್​ಗಳ ಪರವಾನಗಿಯನ್ನು ರದ್ದು ಪಡಿಸಿರುವುದಾಗಿ ವರದಿಯಾಗಿದೆ.
ಪರವಾನಗಿ ಕಳೆದುಕೊಂಡ 13 ಮಳಿಗೆಗಳಲ್ಲಿ ವಿಶ್ವ ವಿಖ್ಯಾತ ಫುಡ್​ ಚೈನ್​ ಮೆಕ್‌ಡೊನಾಲ್ಡ್ಸ್(FDA Suspends McDonalds License) ಮಳಿಗೆ ಕೂಡ ಸೇರಿದೆ ಎಂಬ ಶಾಕಿಂಗ್ ಸುದ್ದಿ ಜನರ ಹುಬ್ಬೇರುವಂತೆ ಮಾಡಿದೆ.

ಅಡುಗೆಮನೆ ತುಂಬಾ ನೊಣ, ಜಿರಳೆ!

ಶುಕ್ರವಾರ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ದ ಅಧಿಕಾರಿಗಳು ಸುಮಾರು 89 ಹೋಟೆಲ್​ಗಳು, ದಾಭಾಗಳ ಮೇಲೆ ಪರಿಶೀಲನೆ ನಡೆಸಿದ್ದು, ಇದರಲ್ಲಿ ಸುಮಾರು 70 ಸ್ಥಳಗಳಿಗೆ ನೋಟಿಸ್​ ನೀಡಲಾಗಿದ್ದು, 13 ಆಹಾರ ಮಳಿಗೆಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ತಿಳದು ಬಂದಿದೆ.

ನೋಟಿಸ್​ ನೀಡಿದ ಹಾಗೂ ಪರವಾನಗಿ ರದ್ದು ಪಡಿಸಿದ ಆಹಾರ ಮಳಿಗೆಗಳ ಅಡುಗೆ ಮನೆಯಲ್ಲಿ ಕೊಳಕಾದ ನೆಲ, ಪಾತ್ರೆಗಳಲ್ಲಿ ನೊಣ ಹಾಗೂ ಜಿರಳೆ ಅಧಿಕವಾಗಿ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಮೆಕ್‌ಡೊನಾಲ್ಡ್ಸ್ ಗೆ ಬೀಗ!


ಈ ಕಾರ್ಯಾಚರಣೆಯಲ್ಲಿ, ಕೊಲಾಬಾದ ಮೆಟ್ರೋ ಹೌಸ್‌ನಲ್ಲಿರುವ ಹಾರ್ಡ್‌ಕ್ಯಾಸಲ್ ರೆಸ್ಟೋರೆಂಟ್ಸ್ ಪ್ರೈವೇಟ್ ಲಿಮಿಟೆಡ್‌ನ ಮೆಕ್‌ಡೊನಾಲ್ಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಕಿಯೋಸ್ಕ್‌ನ FSSAI ಪರವಾನಗಿಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ.
ಆಗಸ್ಟ್ 19 ರಂದು ಮರು-ತಪಾಸಣೆಯ ಸಮಯದಲ್ಲಿ, ಹಿಂದಿನ ಸುಧಾರಣಾ ಸೂಚನೆಯಲ್ಲಿ ಉಲ್ಲೇಖಿಸಲಾದ 20 ನ್ಯೂನತೆಗಳಲ್ಲಿ 18 ದೋಷಗಳನ್ನು ಸರಿಪಡಿಸಲಾಗಿಲ್ಲ ಎಂದು ಅಧಿಕಾರಿಗಳು ಕಂಡುಕೊಂಡರು ಎಂದು FDA ತಿಳಿಸಿದೆ.

ಪರಿಶೀಲನೆ ವೇಳೆ, ಜೇಡರ ಬಲೆ, ಶುಚಿಯಾಗಿರದ ಕೋಲ್ಡ್​ ಸ್ಟೋರೆಜ್​. ಅಡುಗೆ ಮನೆ ನೆಲದ ಮೇಲೆ ಆಹಾರ ತ್ಯಾಜ್ಯ, ಶುಚಿಗೊಳಿಸದ ಬಟ್ಟೆಗಳು ಕಂಡುಬಂದ ಹಿನ್ನಲೆ ಪರವಾನಗಿ ರದ್ದಾಗಿದೆ.

ತಮ್ಮ ಫುಡ್​ಚೈನ್​ ಮೇಲೆ ನಡೆದ ದಾಳಿಗೆ ಪ್ರತಿಕ್ರಿಯಿಸಿರುವ ಮೆಕ್‌ಡೊನಾಲ್ಡ್ಸ್ ಇಂಡಿಯಾ ವಕ್ತಾರರು,ಕಂಪನಿಯು ಆಹಾರ ಸುರಕ್ಷತೆಯ ವಿಷಯಗಳಲ್ಲಿ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಹೊಂದಿದೆ ಎಂದು ತಿಳಿಸಿದ್ದಾರೆ. ನಮ್ಮ ಫುಡ್ ಜಾಯಿಂಟ್ ಮೇಲೆ ನಡೆದ ದಾಳಿ ಬಗ್ಗೆ ತಿದ್ದುಕೊಳ್ಳಬೇಕಾದ ಹಾಗೂ ಕೈಗೊಳ್ಳಬೇಕಾದ ದಂಡಾತ್ಮಕ ಕ್ರಮಗಳನ್ನು ಕೂಡಲೇ ಕೈಗೊಳ್ಳುವುದಾಗಿ ಹೇಳಿದ್ದಾರೆ, (ಏಜನ್ಸೀಸ್​).