ಮಗಳ ನೆನಪಿಗಾಗಿ ದೇವಸ್ಥಾನ ನಿರ್ಮಿಸಿದ ತಂದೆ 
ದೇಶ

ಕಣ್ಣೆದುರಲ್ಲೇ 13 ವರ್ಷದ ಪ್ರೀತಿಯ ಮಗಳ ಸಾವು: ತಂದೆಯ ಈ ಕರುಣಾಜನಕ ಕತೆ ಎಂಥವರ ಕಣ್ಣಲ್ಲೂ ನೀರು ತರಿಸದೇ ಇರದು..! Father daughter Bond

ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಣ್ಣುಮಗಳನ್ನು ಕಳೆದುಕೊಂಡ ದುಃಖವನ್ನು ತಾಳಲಾರದೆ, ತಂದೆಯೊಬ್ಬ ಆಕೆಯ ನೆನಪಿಗಾಗಿ ದೇವಸ್ಥಾನವನ್ನೇ ನಿರ್ಮಿಸಿ ಪ್ರತಿದಿನ ಪೂಜಿಸುತ್ತಿರುವ ಭಾವುಕ ಕಥೆ ಇಲ್ಲಿದೆ.

ಹೈದರಾಬಾದ್​: ಜಗತ್ತಿನಲ್ಲಿ ತಂದೆ-ಮಗಳ ಬಾಂಧವ್ಯಕ್ಕಿಂತ ಪವಿತ್ರವಾದದ್ದು ಮತ್ತೊಂದಿಲ್ಲ, ಅದರಲ್ಲೂ ಹೆಣ್ಣುಮಗಳೆಂದರೆ ಪ್ರತಿಯೊಬ್ಬ ತಂದೆಗೂ ಅಚ್ಚುಮೆಚ್ಚು, ತನ್ನ ಪ್ರಾಣಕ್ಕಿಂತಲೂ ಮಿಗಿಲು ( Father daughter Bond ). ಆದರೆ, ವಿಧಿಯ ಕ್ರೂರ ಆಟಕ್ಕೆ ಮುದ್ದಿನ ಮಗಳೇ ಕಣ್ಣುಮುಂದೆ ಇಲ್ಲದಂತಾದರೆ ಆ ತಂದೆಯ ಹೃದಯ ಎಷ್ಟು ನೋವು ಅನುಭವಿಸುತ್ತದೆ ಅನ್ನೋದನ್ನು ಅಂದಾಜಿಸಲಾಗದು. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಣ್ಣುಮಗಳನ್ನು ಕಳೆದುಕೊಂಡ ದುಃಖವನ್ನು ತಾಳಲಾರದೆ, ತಂದೆಯೊಬ್ಬ ಆಕೆಯ ನೆನಪಿಗಾಗಿ ದೇವಸ್ಥಾನವನ್ನೇ ನಿರ್ಮಿಸಿ ಪ್ರತಿದಿನ ಪೂಜಿಸುತ್ತಿರುವ ಭಾವುಕ ಕಥೆ ಇಲ್ಲಿದೆ.

ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಚುಕ್ಕೈಪಲ್ಲಿ ಗ್ರಾಮದ ರಮೇಶ್ ಎಂಬುವವರು ತಮ್ಮ 13 ವರ್ಷದ ಮುದ್ದಿನ ಮಗಳನ್ನು ಕಳೆದುಕೊಂಡಿದ್ದಾರೆ. ಮಗಳ ನೆನಪುಗಳಲ್ಲೇ ದಿನ ಕಳೆಯುತ್ತಿದ್ದ ರಮೇಶ್​, ಆ ನೋವಿನಿಂದ ಹೊರಬರಲು ಮತ್ತು ಮಗಳನ್ನು ಸದಾ ಜೀವಂತವಾಗಿರಿಸಿಕೊಳ್ಳಲು ದೇವಸ್ಥಾನ ನಿರ್ಮಿಸಿ ಪ್ರತಿದಿನ ಆ ಮಗುವನ್ನು ದೇವಿಯಂತೆ ಪೂಜಿಸುತ್ತಿದ್ದಾರೆ. ರಮೇಶ್ ಅವರ ಈ ಅಪ್ಪಟ ಪ್ರೀತಿಯು ಸ್ಥಳೀಯ ಜನರನ್ನು ಭಾವುಕರನ್ನಾಗಿ ಮಾಡಿದೆ.

ರಮೇಶ್ ಅವರ ಮಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಾ 2024ರಲ್ಲಿ ಕೊನೆಯುಸಿರೆಳೆದಿದ್ದಳು. ಪ್ರೀತಿಯ ಮಗಳು ಕಿರಿಯ ವಯಸ್ಸಿನಲ್ಲಿಯೇ ತನ್ನ ಕಣ್ಣಮುಂದೆ ಸಾವಿಗೀಡಾಗಿದ್ದರಿಂದ ಆ ತಂದೆ ಮಾನಸಿಕವಾಗಿ ಸಂಪೂರ್ಣ ಜರ್ಜರಿತಗೊಂಡರು. ಎಷ್ಟೇ ಕಾಲ ಕಳೆದರೂ ಮಗುವಿನೊಡಲಿನ ನಂಟು ಹಾಗೂ ಜತೆಗಿದ್ದ ಸಿಹಿ ನೆನಪುಗಳನ್ನು ಮರೆಯಲು ಸಾಧ್ಯವಾಗದೆ ಅವರು ಪ್ರತಿದಿನ ಕಣ್ಣೀರು ಹಾಕುತ್ತಿದ್ದರು.

ಮಗಳ ನೆನಪುಗಳನ್ನು ಎಂದೆಂದೂ ಶಾಶ್ವತವಾಗಿರಿಸಿಕೊಳ್ಳುವ ಉದ್ದೇಶದಿಂದ ರಮೇಶ್ ಅವರು ಸ್ವಂತ ಹಣದಿಂದ ಸುಮಾರು 2 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿ ಗ್ರಾಮದಲ್ಲಿ ಒಂದು ವಿಶೇಷವಾದ ಪುಟ್ಟ ಗುಡಿಯನ್ನು ನಿರ್ಮಿಸಿದ್ದಾರೆ. ಪ್ರತಿದಿನ ತಪ್ಪದೆ ಆ ದೇವಸ್ಥಾನಕ್ಕೆ ಭೇಟಿ ನೀಡಿ ದೀಪಾರಾಧನೆ ಮಾಡುವುದರ ಜತೆಗೆ, ಮಗಳ ಪ್ರತಿಮೆಗೆ ನಮನ ಸಲ್ಲಿಸುವ ಮೂಲಕ ತಮ್ಮ ಮಗಳೊಂದಿಗಿನ ಅವಿನಾಭಾವ ಸಂಬಂಧವನ್ನು ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಮಗಳ ಮೇಲೆ ತಂದೆಯೊಬ್ಬನ ಅಗಾಧ ಪ್ರೀತಿಯ ಸಂಕೇತವಾಗಿ ಆ ದೇವಸ್ಥಾನ ನಿಂತಿದೆ. ಲೋಕದಲ್ಲಿ ತಂದೆ-ಮಗಳ ಬಾಂಧವ್ಯಕ್ಕೆ ಅತ್ಯುತ್ತಮ ಉದಾಹರಣೆಯಾಗಿರುವ ರಮೇಶ್ ಅವರ ಈ ಕಥೆಯು ಪ್ರತಿಯೊಬ್ಬರ ಕರುಳನ್ನು ಕಿವುಚಿದೆ. ಈ ಘಟನೆ ಪಿತೃವಾತ್ಸಲ್ಯದ ನಿಜವಾದ ಅರ್ಥ ಏನೆಂಬುದನ್ನು ಜಗತ್ತಿಗೆ ಸಾರುತ್ತಿದೆ, (ಏಜೆನ್ಸೀಸ್​).