5 ಲಕ್ಷ ರೂ. ಪಡೆಯಲು ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ಯುವಕ!
- 5 ಲಕ್ಷ ರೂ. ಪಡೆಯಲು ತನ್ನನ್ನು ತಾನೇ ಕಿಡ್ನಾಪ್ ಮಾಡಿಕೊಂಡ ಯುವಕ!
- ವಿಡಿಯೋ ಕಾಲ್ ಮಾಡಿ ಮನೆಯವರನ್ನು ನಂಬಿಸಲು ಯತ್ನ
- ಪುಣೆಯ ಲಾಡ್ಜ್ನಲ್ಲಿ ಸಿಕ್ಕಿಬಿದ್ದ ಉತ್ತರ ಪ್ರದೇಶ್ ಯುವಕ
ಪುಣೆ: ಹಣಕ್ಕಾಗಿ ತನ್ನನ್ನು ಅಪಹರಣ ಮಾಡಿದ್ದು, 5 ಲಕ್ಷ ನೀಡಿದರೆ ಬಿಡುವುದಾಗಿ ಮನೆಯವರಿಗೆ ಸುಳ್ಳು (Fake Kidnap) ಹೇಳಿ ಸಿಕ್ಕಿ ಬಿದ್ದಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ವರದಿಯಾಗಿದೆ.
ಉತ್ತರ ಪ್ರದೇಶದ, ಬಂಡಾ ಜಿಲ್ಲೆಯ ನಿವಾಸಿ 19 ವರ್ಷದ ಓಂ ಪ್ರಕಾಶ ಗೌರಿಶಂಕರ್ ಎಂಬ ಯುವಕ ತನ್ನ ಮನೆಯವರಿಗೆ ತಾನು ಕಿಡ್ನಾಪ್ ಆಗಿದ್ದೇನೆಂದು ವಿಡಿಯೋ ಕಾಲ್ ಮಾಡಿ, ಅಪಹರಣ ಮಾಡಿದವರು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾಗಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದಾನೆ.
ವಿಡಿಯೋ ಕಾಲ್ ಮಾಡಿ ನಂಬಿಸಲು ಯತ್ನ!
ಈ ಓಂ ಪ್ರಕಾಶ್ ಗೌರಿಶಂಕರ್, ಪುಣೆಯಲ್ಲಿ ತನ್ನನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ, ನನಗೆ ಅವರು ಬಹಳ ಹೊಡೆಯುತ್ತಿದ್ದಾರೆಂದು ಮನೆಯರಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ಇವರಿಗೆ 5 ಲಕ್ಷ ಕೊಟ್ಟರೆ ನನ್ನನ್ನು ಜೀವಸಹಿತ ಬಿಡುವುದಾಗಿ, ಇಲ್ಲದಿದ್ದರೆ ಸಾಯಿಸುವುದಾಗಿ ಹೇಳಿದ್ದಾರೆಂದು ಓಂ ಪ್ರಕಾಶ್, ತನ್ನ ಅಣ್ಣನಲ್ಲಿ ವಿಡಿಯೋ ಕಾಲ್ನಲ್ಲಿ ಅತ್ತಿದ್ದಾನೆ.
ನಂತರ ಗಾಬರಿಗೊಂಡ ಇತನ ಸಹೋದರ, ಪೊಲೀಸರಲ್ಲಿ ದೂರನ್ನು ನೀಡಿದ್ದಾನೆ. ದೂರನ್ನು ಆಧರಿಸಿ, ಮೊಬೈಲ್ ಅನ್ನು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಈ ಓ ಪ್ರಕಾಶ್, ಪುಣೆಯ ಲಾಡ್ಜ್ವೊಂದರಲ್ಲಿರುವುದಾಗಿ ತಿಳಿದು ಬಂದಿದೆ.
ಕೂಡಲೇ, ಲಾಡ್ಜ್ ಮೇಲೆ ದಾಳಿ ನಡೆಸಿದಾಗ, ಈ ಓಂ ಪ್ರಕಾಶ್ ಆಡಿರುವ ನಾಟಕ ಬಯಲಾಗಿದೆ. ಈ ಕಿಡ್ನಾಪ್ ನಾಟಕಕ್ಕೆ ಕಾರಣವೇನೆಂದು ವಿಚಾರಣೆ ನಡೆಸಿದಾಗ, ತಾನು ಆರ್ಥಿಕ ಸಂಕಷ್ಟದಲ್ಲಿದ್ದೆ, ಮನೆಯಲ್ಲಿ ನೇರವಾಗಿ ಹಣ ಕೇಳಿದರೆ ಕೊಡುವುದಿಲ್ಲ ಎಂಬ ಕಾರಣಕ್ಕೆ ಈ ಕಿಡ್ನಾಪ್ ನಾಟಕವಾಡಿದ್ದಾಗಿ ಒಪ್ಪಿಕೊಂಡಿದ್ದಾನೆ, (ಏಜನ್ಸೀಸ್).