ಶಿರಡಿಯ ದೇವಮಾನವ ಅಶೋಕ್ ಖರಕ್ನಿಂದ ನಕಲಿ ಇನ್‌ಕಮ್ ಟ್ಯಾಕ್ಸ್ ರೈಡ್
- ಶಿರಡಿಯ ದೇವಮಾನವ ಅಶೋಕ್ ಖರಕ್ನಿಂದ ನಕಲಿ ಇನ್‌ಕಮ್ ಟ್ಯಾಕ್ಸ್ ರೈಡ್
- ಉದ್ಯಮಿಗಳಿಂದ ಕೋಟಿ-ಕೋಟಿ ಪೀಕಿರುವ ಖರತ್
- ಬಾಲಿವುಡ್ ಸಿನಿಮಾ ಸ್ಪೆಶಲ್ 26 ನ್ನು ಮೀರಿಸುವಂತಿದೆ ಖರತ್ ವರಸೆ
ಪುಣೆ: ಹಣೆ ಮೇಲೆ ತಿಲಕ, ಕೈಯಲ್ಲಿ ಜಪಸರ, ಬಾಯಲ್ಲಿ ಆಧ್ಯಾತ್ಮದ ಮಾತುಗಳು, ಇವನನ್ನು ನಂಬಿದ ಶ್ರೀಮಂತ ಭಕ್ತರು ತಮ್ಮ ಆಸ್ತಿ-ಪಾಸ್ತಿ, ರಹಸ್ಯಗಳನ್ನೆಲ್ಲ ಇವನ ಮುಂದೆ ಸುರಿತಿದ್ರು. ಆದರೆ ಇವನು ಮಾತ್ರ ಅವತಾರ ಪುರುಷನಂತೆ ನಟಿಸಿ, ಬೆನ್ನ ಹಿಂದೆ ಮಾತ್ರ ಮಾಡ್ತಿದ್ದ ದಂಧೆ ಕೇಳಿದ್ರೆ ನೀವು ಖಂಡಿತ ಶಾಕ್ ಆಗೋದು ಗ್ಯಾರಂಟಿ!
ಶಿರಡಿಯ ದೇವಮಾನವ ಅಂತಲೇ ಕರೆಸಿಕೊಳ್ಳುವ ಅಶೋಕ್ ಖರತ್ (Ashok Kharat) ಎಂಬಾತನ ಮೇಲೆ ಈಗ ಕೇಳಿ ಬಂದಿರುವ ವಂಚನೆಯ ಆರೋಪಗಳು ಮಹಾರಾಷ್ಟ್ರ ಮಾತ್ರವಲ್ಲದೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿವೆ. ಭಕ್ತರ ಸಂಕಷ್ಟ ದೂರ ಮಾಡಬೇಕಾದ ಗುರುವೇ, ಭಕ್ತರಿಗೆ ಸಂಕಷ್ಟ ತಂದೊಡ್ಡಿ ಕೋಟಿಗಟ್ಟಲೆ ಹಣ ಪೀಕುತ್ತಿದ್ದ ರಹಸ್ಯ ಈಗ ಬಯಲಾಗಿದೆ.
ಯಾರು ಈ ಅಶೋಕ್ ಖರತ್?
ಅಶೋಕ್ ಖರತ್ ಶಿರಡಿ ಭಾಗದಲ್ಲಿ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳ ನಡುವೆ ಫೇಮಸ್ ಆಗಿದ್ದವನು. ನಿಮ್ಮ ಜಾತಕದಲ್ಲಿ ದೋಷವಿದೆ, ಪೂಜೆ ಮಾಡಿಸಿದರೆ ಉದ್ಯಮ ಬೆಳೆಯುತ್ತೆ ಅಂತ ನಂಬಿಸಿ ಅವರ ಹತ್ತಿರವಾಗುತ್ತಿದ್ದ. ಒಮ್ಮೆ ದೊಡ್ಡ ಉದ್ಯಮಿಗಳ ವಿಶ್ವಾಸ ಗಳಿಸಿದ ಮೇಲೆ, ಅವರ ಮನೆಯಲ್ಲಿ ಹಣ ಎಲ್ಲಿದೆ? ಲೆಕ್ಕಕ್ಕೆ ಸಿಗದ ಆಸ್ತಿ ಎಷ್ಟು? ಎಂಬ ಕಂಪ್ಲೀಟ್ ಡಿಟೇಲ್ಸ್ ಕಲೆಹಾಕುತ್ತಿದ್ದ.
ಅಸಲಿ ಆಟ ಶುರುವಾಗೋದೆ ಇಲ್ಲಿ
ಒಮ್ಮೆ ಉದ್ಯಮಿಯ ಸಂಪತ್ತಿನ ರಹಸ್ಯ ತಿಳಿದ ಮೇಲೆ ಅಶೋಕ್ ಖರತ್ ತನ್ನ ಕರಾಳ ಬುದ್ಧಿ ಉಪಯೋಗಿಸುತ್ತಿದ್ದ. ಅಕ್ಷಯ್ ಕುಮಾರ್ ಅಭಿನಯದ ಸ್ಪೆಷಲ್ 26 ಸಿನಿಮಾದಲ್ಲಿ ಬರುವ ಹಾಗೆ, ತನ್ನ ಸಹಚರರಿಗೆ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳ ವೇಷ ತೊಡಿಸಿ ಭಕ್ತರ ಮನೆಗೆ ಕಳಿಸುತ್ತಿದ್ದ.
ಯಾವುದೇ ಮುನ್ಸೂಚನೆ ಇಲ್ಲದೆ ಬಂದ ಅಧಿಕಾರಿಗಳನ್ನು ಕಂಡು ಉದ್ಯಮಿಗಳು ಬೆವತು ಹೋಗುತ್ತಿದ್ದರು. ಐಟಿ ಅಧಿಕಾರಿಗಳಂತೆ ನಟಿಸುತ್ತಿದ್ದ ಖರತ್ ಗ್ಯಾಂಗ್, ಬೆದರಿಕೆ ಹಾಕಿ ಅಲ್ಲಿನ ದಾಖಲೆಗಳನ್ನೋ ಅಥವಾ ಹಣವನ್ನೋ ಸೀಜ್ ಮಾಡೋ ತರ ನಾಟಕ ಆಡುತ್ತಿದ್ದರು.
ಸಂಕಷ್ಟ ಹರಕನಂತೆ ಎಂಟ್ರಿ ಕೊಡ್ತಿದ್ದ ಗುರೂಜಿ
ಮನೆ ಮೇಲೆ ಐಟಿ ರೇಡ್ ಆಗ್ತಿದ್ದಂತೆ ಹೌಹಾರಿ ಭಕ್ತರು ತಕ್ಷಣ ತಮ್ಮ ಪರಮ ಪೂಜ್ಯ ಅಶೋಕ್ ಖರತ್ ಗುರೂಜಿ ಸಾನಿಧ್ಯಕ್ಕೆ ಹೋಗುತ್ತಿದ್ದರು. ಆಗ ಖರತ್ ನಾಯಕನ ತರ ಎಂಟ್ರಿ ಕೊಟ್ಟು, ನೀವೇನೂ ಹೆದರಬೇಡಿ, ನನಗೆ ಮೇಲ್ಮಟ್ಟದಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳ ಪರಿಚಯ ಇದೆ. ಮ್ಯಾಟರ್ ಅಲ್ಲಿಗೆ ಕ್ಲೋಸ್ ಮಾಡೋಣ, ಆದರೆ ಸ್ವಲ್ಪ ದುಡ್ಡು ಖರ್ಚಾಗುತ್ತೆ ಎಂದು ಹೇಳುತ್ತಿದ್ದ.
ತಮ್ಮ ಮರ್ಯಾದೆ ಉಳಿಸಿಕೊಳ್ಳಲು ಉದ್ಯಮಿಗಳು ಕೋಟಿ ಕೋಟಿ ಹಣವನ್ನು ಖರತ್ ಕೈಗಿಡುತ್ತಿದ್ದರು. ಅತ್ತ ಐಟಿ ರೇಡ್ ಕೂಡ ನಿಲ್ಲುತ್ತಿತ್ತು. ತನ್ನ ಆಳುಗಳನ್ನೇ ಕಳಿಸಿ ರೇಡ್ ಮಾಡಿಸಿ, ಬಳಿಕ ತಾನೇ ಮಿಡ್ಲ್ ಮ್ಯಾನ್ ಆಗಿ ನಿಂತು ಹಣ ವಸೂಲಿ ಮಾಡೋದು ಇವನ ಪಕ್ಕಾ ಪ್ರೊಫೆಷನಲ್ ಕ್ರಿಮಿನಲ್ ಪ್ಲ್ಯಾನ್ ಆಗಿತ್ತು.
ಬಲಿಪಶುಗಳು ಯಾಕೆ ಸೈಲೆಂಟ್ ಆಗಿದ್ದಾರೆ?
ಸಾವಿರಾರು ಕೋಟಿ ಹಣ ಲೂಟಿಯಾಗಿದ್ದರೂ ದೂರು ನೀಡಲು ಉದ್ಯಮಿಗಳು ಮುಂದೆ ಬರುತ್ತಿಲ್ಲ. ಇದಕ್ಕೆ ಮುಖ್ಯ ಕಾರಣ, ಅವರ ಬಳಿ ಇದ್ದಿದ್ದು ಕಪ್ಪು ಹಣ ಅಥವಾ ಸರಿಯಾದ ಲೆಕ್ಕವಿಲ್ಲದ ಆಸ್ತಿ. ಒಂದು ವೇಳೆ ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ನಿಜವಾದ ಇನ್‌ಕಮ್ ಟ್ಯಾಕ್ಸ್ ಅಧಿಕಾರಿಗಳು ದಾಳಿ ಮಾಡಬಹುದು ಎಂಬ ಭಯ ಒಂದು ಕಡೆಯಾದರೆ, ಸಮಾಜದಲ್ಲಿ ತಮ್ಮ ಮಾನ ಹರಾಜಾಗಬಹುದು ಎಂಬ ಮುಜುಗರ ಇನ್ನೊಂದು ಕಡೆ.
ಮುಂದೇನು? ಅಧಿಕಾರಿಗಳ ಎಚ್ಚರಿಕೆ
ಸದ್ಯಕ್ಕೆ ಈ ವಿಷಯ ಕಾಡ್ಗಿಚ್ಚಿನಂತೆ ಹಬ್ಬಿದೆ. ಜಿಲ್ಲಾಡಳಿತ ಮತ್ತು ಪೊಲೀಸರು ಈ ಹಗರಣದ ಬೇರುಗಳನ್ನ ಹುಡುಕಲು ಮುಂದಾಗಿದ್ದಾರೆ. ತನಿಖೆ ಶುರುವಾದರೆ ಮಹಾರಾಷ್ಟ್ರದ ಇನ್ನ್ಯಾವ ದೊಡ್ಡ ಉದ್ಯಮಿಗಳ ಹೆಸರುಗಳು ಹೊರಬರುತ್ತವೋ ಕಾದು ನೋಡಬೇಕಾಗಿದೆ, (ಏಜನ್ಸೀಸ್).