RSS ಜಗತ್ತಿನಲ್ಲೇ ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಸಂಸ್ಥೆ: ಮೋಹನ್ ಭಾಗವತ್
- ಭಾರತದಲ್ಲಿರುವ ಎಲ್ಲರೂ ಸಾಂಸ್ಕೃತಿಕವಾಗಿ ಹಿಂದೂಗಳೇ
- RSS ಜಗತ್ತಿನಲ್ಲೇ ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಸಂಸ್ಥೆ: ಮೋಹನ್ ಭಾಗವತ್
- RSS ಬಗ್ಗೆ ತಿಳಿಯಲು ಮೊದಲು ಸಂಘಕ್ಕೆ ಸೇರಿ
ತಿರುವನಂತಪುರಂ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ವು ಜಗತ್ತಿನ ಅತಿದೊಡ್ಡ ಸ್ವಯಂಸೇವಾ ಸಂಘಟನೆ ಜೊತೆ ಅತ್ಯಂತ ತಪ್ಪಾಗಿ ಅರ್ಥೈಸಲ್ಪಟ್ಟ ಸಂಸ್ಥೆಗಳಲ್ಲಿ ಕೂಡ ಅಗ್ರಗಣ್ಯವಾಗಿದೆ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat on RSS) ಹೇಳಿದ್ದಾರೆ.
ಶನಿವಾರ (ಜೂ.13) ತಿರುವನಂತಪುರಂನಲ್ಲಿ ಸಂಘ ಶತಾಬ್ದಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘದ ಬಗ್ಗೆ ತಿಳಿಯಬೇಕೆಂದರೆ ಮೊದಲು ಸಂಘದೊಟ್ಟಿಗೆ ಸೇರಿಕೊಳ್ಳಿ, ನಂತರ ಸಂಘವೇನು? ನಾವು ಮಾಡುವ ಕೆಲಸವೇನೆಂದು ತಿಳಿಯುತ್ತದೆ ಎಂದು ಹೇಳಿದರು.
ಆರ್ಎಸ್ಎಸ್ ಬಿಜೆಪಿಯ ಸೈದ್ಧಾಂತಿಕ ತಂದೆ
ಜನರು ಆರ್ಎಸ್ಎಸ್ ಬಗ್ಗೆ ಹೊರಗಡೆ ಲಭ್ಯವಿರುವ ಮಾಹಿತಿ ಆಧರಿಸಿ ನಮ್ಮ ಬಗ್ಗೆ, ನಮ್ಮ ಸಂಘಟನೆ ಬಗ್ಗೆ ಅಭಿಪ್ರಾಯವನ್ನು ಮೂಡಿಸಿಕೊಳ್ಳುತ್ತಾರೆ. ಆದರೆ ನಮ್ಮ ಬಗ್ಗೆ ತಿಳಿಯ ಬಯಸುವವರು ಮೊದಲು ನಮ್ಮನ್ನು ಸೇರಿ ಎಂದು ಭಾಗವತ್ ಹೇಳಿದ್ದಾರೆ.
ಆರ್ಎಸ್ಎಸ್, ಬಿಜೆಪಿಯ ಸೈದ್ಧಾಂತಿಕ ಪಿತೃವಾಗಿದ್ದು, ಆರ್ಎಸ್ಎಸ್ನ ರಾಜಕೀಯ ಸಂಸ್ಥೆ ಬಿಜೆಪಿ ಎಂದು ಹೇಳಬಹುದು. ಸಂಘ ಈ ವರ್ಷ ತನ್ನ ನೂರು ವರ್ಷಗಳನ್ನು ಪೂರೈಸಿರುವ ಹಿನ್ನಲೆ, ಜನರಿಗೆ ಸಂಘದ ಬಗ್ಗೆ ಮತ್ತೊಮ್ಮೆ ಅರಿವನ್ನು ಮೂಡಿಸಲು ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಭಾರತದಲ್ಲಿರುವ ಎಲ್ಲರೂ ಹಿಂದೂಗಳೇ!
ಇದೇ ಭಾಷಣದಲ್ಲಿ ಮಾತನಾಡಿದ ಭಾಗವತ್, ನಾನು ಸಂಘದ ಆರನೇ ಸರಸಂಘಚಾಲನಾಗಿದ್ದೆನೆ. ನನಗೆ ಅನೇಕ ವೇದಿಕೆಗಳಲ್ಲಿ, ಇಸ್ಲಾಂ ಹಾಗೂ ಕ್ರಿಶ್ಚಿಯನ್ ಪಂಥಕ್ಕೆ ಸೇರಿದವರು ಭೇಟಿಯಾಗುತ್ತಾರೆ. ಆಗ ನಾನು ಅವರಿಗೆ, ನೋಡಿ ನಾವು ಮತ್ತು ನೀವು ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಮತ್ತು ಸಾಮಾಜಿಕ ಪ್ರಭಾವಗಳನ್ನು ಅಧ್ಯಯನ ಮಾಡಿದರೆ ನಾವೆಲ್ಲರೂ ಒಂದು, ನಾವೆಲ್ಲಾ ಹಿಂದೂ ಎಂದು ಹೇಳುತ್ತೆನೆ.
ಆದರೆ ಅವರಿಗೆ ಹಿಂದೂ ಎಂದು ಕರೆಯುವ ಬದಲು ಹಿಂದವಿಗಳು ಅಥವಾ ಭಾರತೀಯರೆಂದು ಕರೆದರೆ ಸರಿ ಎನ್ನಿಸುತ್ತದೆ ಎಂದು ಅವರು ನನ್ನಲ್ಲಿ ಹೇಳಿದುಂಟು. ಆದರೆ ಹಿಂದವಿ ಮತ್ತು ಭಾರತೀಯ ಎಂದರೆ ಸಹ ಹಿಂದೂ ಎಂದೇ ಆಗುತ್ತದೆ ಎಂಬುದಾಗಿ ಮೋಹನ್ ಭಾಗವತ್ ಹೇಳಿದ್ದಾರೆ, (ಏಜನ್ಸೀಸ್).