ರಸ್ತೆಯಲ್ಲಿ ಅಡ್ಡಬಂದು ಕಾರಿನ ಮೇಲೆ ಕಾಲಿಟ್ಟ ಕಾಡಾನೆ; ಪ್ರಾಣಾಪಾಯದಿಂದ ಪಾರಾದ ಚಾಲಕ. 
ದೇಶ

ಕಾರಿನ ಮೇಲೆ ಕಾಲಿಟ್ಟ ಗಜರಾಜ: ಕಾಡಾನೆ ಆರ್ಭಟಕ್ಕೆ ಬೆಚ್ಚಿಬಿದ್ದ ಚಾಲಕ; ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​! Elephant Attack on Car

ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಮೇಲೆ ಕಾಡಾನೆಯೊಂದು ಕಾಲಿಟ್ಟ ಬೆಚ್ಚಿಬೀಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಸಂಪೂರ್ಣ ವಿವರ ಇಲ್ಲಿದೆ.

ತಮಿಳುನಾಡು: ಕರ್ನಾಟಕದಿಂದ ತಮಿಳುನಾಡಿನತ್ತ ಹೊರಟ್ಟಿದ್ದ ಕಾರ್​​ವೊಂದರ ಮೇಲೆ ಕಾಡಾನೆಯೊಂದು ಕಾಲಿಟ್ಟಿರುವ ವಿಡಿಯೋವೊಂದು ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗುತ್ತಿದೆ. ಈ ಘಟನೆಯು ಬೆಂಗಳೂರು-ದಿಂಡಿಗಲ್​ ರಾಷ್ಟ್ರೀಯ ಹೆದ್ದಾರಿ ಹಾದುಹೋಗುವ ತಮಿಳುನಾಡಿನ ಅಸನೂರಿನಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.

ಮಾಹಿತಿ ಪ್ರಕಾರ, ವ್ಯಕ್ತಯೊಬ್ಬರು ಮೈಸೂರಿನಿಂದ ಕೊಯಂಮತ್ತೂರ್​ನತ್ತ ಪ್ರಯಾಣ ಬೆಳೆಸಿದ್ದ ಸಂದರ್ಭದಲ್ಲಿ ಈ ಆನೆ ಅವರಿಗೆ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಆನೆ, ಆಹಾರವನ್ನು ಹುಡಿಕಿಕೊಂಡು ರಸ್ತೆಗೆ ಬಂದಿದ್ದು, ಸಾಗುತ್ತಿದ್ದ ಕಾರನ್ನು ಅಡ್ಡಗಟ್ಟಿದೆ. ನಂತರ ಕಾರಿನ ಮೇಲೆ ಕಾಲಿಟ್ಟಿದ್ದು, ಕಾರಿನ ಕನ್ನಡಿ ಹಾಗೂ ಬೊನಾಟ್​ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಆನೆ ಕಾರನ್ನು ಅಡ್ಡಗಟ್ಟಿ, ಕಾರಿನ ಮೇಲೆ ಕಾಲಿಟ್ಟಾಗ, ಕಾರನಿ ಒಳಗಿದ್ದ ವ್ಯಕ್ತಿ ಭಯದಿಂದ ಕೂಗಾಡಿದ್ದಾರೆ. ಆದರೆ, ಕೆಲ ನಿಮಿಷಗಳ ನಂತರ ಆನೆ ತನ್ನ ಪಾಡಿಗೆ ತಾನು ನಡೆದು ಹೋಗಿದ್ದು, ಕಾರಿನ ಚಾಲಕ ಕೂಡ ಯಾವುದೇ ಪ್ರಾಣಾಪಾಯಕ್ಕೆ ಒಳಗಾಗದೆ ತನ್ನ ಪ್ರಯಾಣ ಮುಂದುವರಿಸಿದ್ದಾನೆಂದು ಹೇಳಲಾಗುತ್ತಿದೆ.

ವಿಡಿಯೋ ವೈರಲ್​!

ಕಾರಿನ ಮೇಲೆ ಕಾಡಾನೆ ಕಾಲಿಟ್ಟ ಈ ವಿಡಿಯೋವನ್ನು ಹಿಂದಿನಿಂದ ಬರುತ್ತಿದ್ದ ಇನ್ನೊಂದು ವಾಹನದವರು ಸೆರೆಹಿಡಿದಿದ್ದಾರೆ. ನಂತರ ಸೋಷಿಯಲ್​ ಮೀಡಿಯಾನಲ್ಲಿ ಹರಿಬಿಟ್ಟ ಹಿನ್ನಲೆ ಈ ವಿಡಿಯೋ ಈಗ ಎಲ್ಲೆಡೆ ಸಕ್ಕತ್​ ವೈರಲ್​ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಳ್ಳುತ್ತಿದೆ.

ಅರಣ್ಯ ಇಲಾಖೆಯವರು ತಿಳಿಸಿರುವಂತೆ, ಈ ಪ್ರದೇಶದಲ್ಲಿ ಆನೆಗಳ ಸಂಖ್ಯೆ ಅಧಿಕವಾಗಿದ್ದು, ಸೀಸನ್​ನಲ್ಲಿ ಇವು ಕಾಡು ಮತ್ತು ರಸ್ತೆ ನಡುವೆ ನಿರಂತರವಾಗಿ ಸಂಚರಿಸುತ್ತಿರುತ್ತವೆ. ಈ ಮಾರ್ಗದಲ್ಲಿ ಸಂಚಾರ ಮಾಡುವವರು ದಯವಿಟ್ಟು ಹಾರ್ನ್​ ಮಾಡಬೇಡಿ. ಹಾಗೆಯೇ, ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ ಎಂದು ಸೂಚನೆ ನೀಡಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ಕಾಡಾನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಭಯ ಹಾಗೂ ಆತಂಕದಿಂದ ಕೂಡಿರುವ ಕಮೆಂಟ್​ಗಳನ್ನು ಹೆಚ್ಚಿನದಾಗಿ ಮಾಡಿದ್ದಾರೆ. ನಾನು ಬಂಡೀಪುರ ಪ್ರದೇಶದಲ್ಲಿ ಬೈಕ್​ ರೈಡ್​ಗೆ ತೆರಳಿದ್ದಾಗ ಕೂಡ ಇಂತಹದ್ದೇ ಘಟನೆ ನಡೆದಿದ್ದು. ಇದು ನೋಡಲು ಎಷ್ಟು ಹೆದರಿಕೆಯೋ, ಅನುಭವಿಸಲು ಇನ್ನೂ ಭಯಾನಕವಾಗಿರುತ್ತದೆ ಎಂದು ಒಬ್ಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಮೊದಲನೆದಾಗಿ ಎಲಿಫೆಂಟ್​ ಕಾರಿಡಾರ್​ಗಳಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು. ಅವಕಾಶ ನೀಡಿದರೂ, ಅಲ್ಲಿ ಹಾರ್ನ್​ ಮಾಡುವುದು, ವಾಹನ ಪಾರ್ಕ್​ ಮಾಡಿ ಫೋಟೊ ಕ್ಲಿಕ್​ಕಿಸುತ್ತಾ ನಿಲ್ಲುವುದಕ್ಕೆ ಸಂಪೂರ್ಣ ನಿರ್ಭಂದ ಹೇರಬೇಕೆಂದು ಇನ್ನೊಬ್ಬರು ತಿಳಿಸಿದ್ದಾರೆ.

ಒಮ್ಮಲೇ ಆನೆ, ಹೀಗೆ ದಾಳಿಗೆ ನಿಂತರೆ, ಏನು ಮಾಡಲು ಆಗುವುದಿಲ್ಲ. ಅರ್ಧ ಹೆದರಿಕೆಗೆ ಏನು ಮಾಡುವುದೆಂದು ತೋಚುವುದಿಲ್ಲ. ಪಾಪಾ ಆ ಕಾರು ಚಾಲಕ ಎಷ್ಟು ಹೆದರಿಕೊಂಡನೋ ಏನೋ? ಎಂದು ಮತ್ತೊಬ್ಬರು ಸಹಾನುಭೂತಿ ತೋರಿದ್ದಾರೆ, (ಏಜೆನ್ಸೀಸ್​).