

Premanand Maharaj: ಎರಡು ಕಿಡ್ನಿಗಳಿಲ್ಲದಿದ್ದರೂ ಪವಾಡ ಸದೃಶ್ಯವಾಗಿ, ಜೀವಂತವಾಗಿದ್ದು, ಜೀವನದಲ್ಲಿ ಹೇಗೆ ಪ್ರೀತಿಯಿಂದ, ಮೌಲ್ಯಯುತವಾಗಿ ಬದುಕಬೇಕೆಂದು ಪ್ರವಚನ ನೀಡುವ ಮೂಲಕ ಸಾಕಷ್ಟು ಖ್ಯಾತಿಗಳಿಸಿರುವ ಆಧ್ಯಾತ್ಮಿಕ ವ್ಯಕ್ತಿ ಹೆಸರೇ ಪ್ರೇಮಾನಂದ್ ಮಹಾರಾಜ್.
ಇವರು ಪ್ರೀತಿ, ಭಕ್ತಿ, ಸಹನೆ, ತಾಳ್ಮೆ ಮೊದಲಾದ ಮಾನವೀಯ ಸಂಗತಿಗಳ ಬಗ್ಗೆ ಪ್ರವಚನ ನೀಡುತ್ತಾ ದೇಶದಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿದ್ದಾರೆ. ಇವರ ಅನೇಕ ವಿಡಿಯೋಗಳು ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಕೂಡ ಆಗಿವೆ.
ಆದರೆ, ಕೆಲ ದಿನಗಳ ಹಿಂದೆ ಇವರ ಮೇಲೆ ಇವರದೇ ಆಶ್ರಮದ ದಿನೇಶ್ ಫಲಹಾರಿ ಮಹಾರಾಜ್, ಎನ್ನುವವರು ಮಾಡಿರುವ ಆರೋಪವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ದಿನೇಶ್ ಫಲಹಾರಿ ಮಹಾರಾಜ್ ಆರೋಪದ ಪ್ರಕಾರ, ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಆತನ ಪತ್ನಿ ಅನುಷ್ಕಾ ಶರ್ಮಾ ವೃಂದಾವನದ, ಪ್ರೇಮಾನಂದ ಮಹಾರಾಜ್ರನ್ನು ಬೇಟಿಯಾಗಲು 5 ಕೋಟಿ ರೂಪಾಯಿ ಪಡೆದಿದ್ದರೆಂದು, ಇದರ ಹಿಂದೆ ಪ್ರೇಮಾನಂದರ ಖ್ಯಾತಿಯನ್ನು ಹೆಚ್ಚಿಸುವ ಪಿಆರ್ ಅಜೆಂಡಾ ಇದೆ ಎನ್ನವುದು ಅವರ ಆರೋಪವಾಗಿತ್ತು.
ದಿನೇಶ್ ಫಲಹಾರಿ ಮಹಾರಾಜ್ ಮಾಡಿರುವ ಈ ಆರೋಪ ಸೋಷಿಯಲ್ ಮೀಡಿಯಾನಲ್ಲಿ ಸಾಕಷ್ಟು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಓಹೋ.. ಈ 5 ಕೋಟಿ ಸಲುವಾಗಿ ವಿರಾಟ್ ಕೊಹ್ಲಿ ಈ ಬಾಬಾನ ಬೇಟಿಗೆ ಹೋಗುತ್ತಿರಬೇಕು ಎಂಬ ವದಂತಿ ಜೋರಾಯಿತು. ಯಾವಾಗ, ಈ 5 ಕೋಟಿ ವದಂತಿ ವ್ಯಾಪ್ತಿ ಮೀರಿ ಹರಡಲು ಶುರುವಿಟ್ಟ ಕಾರಣ ಈಗ ಇದಕ್ಕೆ ವಿರಾ ಟ್ ಕೊಹ್ಲಿ ಅವರ ವಕ್ತಾರರೊಬ್ಬರು ಇದಕ್ಕೆ ಸಷ್ಟನೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ, ದಿನೇಶ್ ಫಲಹಾರಿ ಮಹಾರಾಜ್ ಅವರು, ವಿರಾಟ್ ಕೊಹ್ಲಿ, ಪ್ರೇಮಾನಂದ್ ಮಹಾರಾಜರ ಬೇಟಿ ಮಾಡಿದ ಕುರಿತು ನೀಡಿರುವ ಹೇಳಿಕೆ/ ಆರೋಪವು ಆಧಾರರಹಿತ, ಸುಳ್ಳಿನಿಂದ ಕೂಡಿದ ಹಾಗೂ ಸತ್ಯಕ್ಕೆ ದೂರವಾಗಿದ್ದು, ಇದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ವಿರಾಟ್ ಕೊಹ್ಲಿ, ಮಹಾರಾಜರ ಬಗ್ಗೆ ಹೊಂದಿರುವ ಆಳವಾದ ಭಕ್ತಿ ಹಾಗೂ ನಂಬಿಕೆ ಕಾರಣಕ್ಕಾಗಿ ಪ್ರೇಮಾನಂದ ಮಹಾರಾಜ್ರನ್ನು ಭೇಟಿ ಮಾಡಿದ್ದಾರೆ ವಿನಃ ಇದರಲ್ಲಿ ಯಾವುದೇ ವ್ಯವಹಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಪ್ರಕಟನೆ ಅಥವಾ ಮಾಹಿತಿಯನ್ನು ಹಂಚಿಕೊಳ್ಳುವ ಮೊದಲು ಸತ್ಯಾಂಶವನ್ನು ತಿಳಿದು ಕೊಳ್ಳಿ, ಸುಮ್ಮನೆ ಸುಳ್ಳು ವಂದತಿಗಳನ್ನು ಹಂಚಿಕೊಳ್ಳಬೇಡಿ ಎಂದು ವಿರಾಟ್ ವಕ್ತಾರ ತಿಳಿಸಿದ್ದಾರೆ.
ಪ್ರೇಮಾನಂದ ಮಹರಾಜ್ರನ್ನು ಭೇಟಿ ಮಾಡಲು ವಿರಾಟ್ ಕೊಹ್ಲಿ ಹಣ ಪಡೆದಿದ್ದಾರೆ ಎಂದು ದಿನೇಶ್ ಫಲಹಾರಿ ಮಹಾರಾಜ್ ಮಾಡಿರುವ ಆರೋಪ, ಪ್ರೇಮಾನಂದರ ಭಕ್ತವೃಂಧದ ಕೋಪಕ್ಕೆ ಕಾರಣವಾಗಿದೆ. ದಿನೇಶ್ ಫಲಹಾರಿ ಮಹಾರಾಜ್ ಅವರು ಹೀಗೆ ಸುಖಾಸುಮ್ಮನೆ ಆರೋಪ ಮಾಡಬಾರದು. ಇದರಿಂದ ಮಹಾರಾಜರ ಬಗ್ಗೆ ತಪ್ಪು ಅಭಿಪ್ರಾಯ ಮೂಡುತ್ತದೆ.
ಹೀಗಾಗಿ, ಈ ದಿನೇಶ್ ಫಲಹಾರಿ ಮಹಾರಾಜ್ ಅವರ ವಿರುದ್ಧ ಸರ್ಕಾರ ತನಿಖೆ ನಡೆಸಬೇಕು. ಅವರು ಮಾಡಿರುವ ಆರೋಪ ಸುಳ್ಳಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕಾಗಿ ಪ್ರೇಮಾನಂದ್ ಮಹಾರಾಜರ ಭಕ್ತರು ಆಗ್ರಹಿಸಿದ್ದಾರೆ, (ಏಜೆನ್ಸೀಸ್).