ಮೊಬೈಲ್ ಆ್ಯಪ್ ಮೂಲಕ ಇ-ರಿಕ್ಷಾಗಳನ್ನು ಹ್ಯಾಕ್
- ಮೊಬೈಲ್ ಆ್ಯಪ್ ಮೂಲಕ ಇ-ರಿಕ್ಷಾಗಳನ್ನು ಹ್ಯಾಕ್
- ವಿವಾದದ ಬೆನ್ನಲ್ಲೇ ಕೇಂದ್ರ ಸರ್ಕಾರ ಬಿಗ್ ಆ್ಯಕ್ಷನ್
- ವಿವಾದಿತ 2 ಆ್ಯಪ್‌ಗಳನ್ನು ಬ್ಯಾನ್ ಮಾಡಿದ ಕೇಂದ್ರ ಸರ್ಕಾರ
ನವದೆಹಲಿ: ಇತ್ತೀಚಿನ ಕೆಳ ದಿನಗಳಲ್ಲಿ ರಸ್ತೆಯಲ್ಲಿ ಇ ರಿಕ್ಷಾ (E Rickshaw Hack) ಚಲಾವಣೆ ಮಾಡುತ್ತಿದ್ದಾಗ ಅಪರಿಚಿತರು ತಮ್ಮ ಮೊಬೈಲ್ ಮೂಲಕ ವಾಹನವನ್ನು ಆಫ್ ಮಾಡುವ ಘಟನೆ ನಡೆಯುತ್ತಿದೆ. ಇದೀಗ ಈ ಕುರಿತು ಇ-ರಿಕ್ಷಾ ಮಾಲೀಕರು ಹಾಗೂ ಚಾಲಕರಲ್ಲಿ ತಲ್ಲಳ ಸೃಷ್ಟಿಯಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಾದ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಎಚ್ಚೆಂತುಕೊಂಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ದೊಡ್ಡ ಕಠಿಣ ಕ್ರಮಕ್ಕೆ ಮುಂದಾಗಿದೆ.
ಏನಿದು 'BAT-BMS' ಆ್ಯಪ್ ವಿವಾದ?
ಸಾಮಾನ್ಯವಾಗಿ ಎಲೆಕ್ಟ್ರಿಕ್ ವಾಹನಗಳಲ್ಲಿ (EV) ಬ್ಯಾಟರಿಯ ವೋಲ್ಟೇಜ್, ಕರೆಂಟ್ ಹಾಗೂ ತಾಪಮಾನವನ್ನು ಚೆಕ್ ಮಾಡಲು ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (BMS) ಇರುತ್ತೆ. ಇದಕ್ಕಾಗಿಯೇ 'BAT-BMS' ಎಂಬ ಮೊಬೈಲ್ ಆ್ಯಪ್ ಕೂಡ ಇತ್ತು. ಬ್ಲೂಟೂತ್ ಮೂಲಕ ಕಾರ್ಯನಿರ್ವಹಿಸುವ ಈ ಆ್ಯಪ್, ಬ್ಯಾಟರಿಯನ್ನು ಮೇಲ್ವಿಚಾರಣೆ ಮಾಡಲು ಡಿಸೈನ್ ಮಾಡಲಾಗಿತ್ತು.
ಆದರೆ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆದವು. ಅದರಲ್ಲಿ ಕೆಲವರು ಈ ಆ್ಯಪ್ ಬಳಸಿ ಹತ್ತಿರದಲ್ಲಿದ್ದ ಇ-ರಿಕ್ಷಾಗಳ ಬ್ಯಾಟರಿಗಳನ್ನು ಬ್ಲೂಟೂತ್ ಮೂಲಕ ಕನೆಕ್ಟ್ ಮಾಡಿಕೊಂಡು, ಅದರ ವಿದ್ಯುತ್ ಸರಬರಾಜುನ್ನು ಆಫ್ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ದೆಹಲಿ ಚಾಲಕರಲ್ಲಿ ಹೆಚ್ಚಿದ ನಡುಕ!
ಈ ವಿಡಿಯೋಗಳು ಹೊರಬರುತ್ತಿದ್ದಂತೆ ದೇಶದ ರಾಜಧಾನಿ ದೆಹಲಿಯ ಇ-ರಿಕ್ಷಾ ಚಾಲಕರು ಮತ್ತು ಡೀಲರ್‌ಗಳು ಬೆಚ್ಚಿಬಿದ್ದಿದ್ದಾರೆ. ನಾವು ಪ್ಯಾಸೆಂಜರ್ ಕರ್ಕೊಂಡು ಹೋಗ್ತಿರುವಾಗ ಯಾರೋ ಮಜಾ ನೋಡೋಕೆ ನಮ್ಮ ಗಾಡಿ ಆಫ್ ಮಾಡಿದ್ರೆ, ನಡು ರಸ್ತೆಯಲ್ಲಿ ನಮ್ಮ ಗತಿ ಏನು? ಎನ್ನುವುದು ಚಾಲಕರ ಪ್ರಶ್ನೆಯಾಗಿದೆ.
ಆದರೆ ಈ ಆ್ಯಪ್ ಎಲ್ಲಾ ಎಲೆಕ್ಟ್ರಿಕ್ ವಾಹನಗಳನ್ನ ಆಫ್ ಮಾಡಲು ಸಾಧ್ಯವಿಲ್ಲ. ಕೇವಲ ಬ್ಲೂಟೂತ್ ಕನೆಕ್ಟಿವಿಟಿ ಇರುವ ನಿರ್ದಿಷ್ಟ ಬ್ಯಾಟರಿಗಳೊಂದಿಗೆ ಮಾತ್ರ ಇದು ಕನೆಕ್ಟ್ ಆಗುತ್ತಿತ್ತು. ಆದರೂ, ಸುರಕ್ಷತೆಯ ದೃಷ್ಟಿಯಿಂದ ಇದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ವಿಷಯ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ತಡ ಮಾಡದೆ, ಈ ವಿವಾದಕ್ಕೆ ಕಾರಣವಾಗಿದ್ದ ಎರಡು ಮೊಬೈಲ್ ಆ್ಯಪ್‌ಗಳನ್ನು ಈಗಾಗಲೇ ಪ್ಲೇಸ್ಟೋರ್ ಹಾಗೂ ಆಪ್ ಸ್ಟೋರ್‌ಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು MeitY ಕಾರ್ಯದರ್ಶಿ ಎಸ್. ಕೃಷ್ಣನ್ ಹೇಳಿದ್ದಾರೆ, (ಏಜನ್ಸೀಸ್).