ಎಣ್ಣೆ ನಶೆಯಲ್ಲಿ ಕುಡುಕನೊಬ್ಬ ಆಸ್ಪತ್ರೆಯಲ್ಲೇ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ  
ದೇಶ

ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದ ಕುಡುಕ! ಆಸ್ಪತ್ರೆಯಲ್ಲಿ ಖಾಕಿ ಮೇಲೆ ಕೈ ಎತ್ತಿದ ನಶೆಡಿ; ವಿಡಿಯೋ ವೈರಲ್​! Viral Video

ಪ್ರಮುಖ ಮುಖ್ಯಾಂಶಗಳು

  • ಎಣ್ಣೆ ನಶೆಯಲ್ಲಿ ಕುಡುಕನೊಬ್ಬ ಆಸ್ಪತ್ರೆಯಲ್ಲೇ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ
  • ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​
  • ತನ್ನ ಶವಪೆಟ್ಟಿಗೆಗೆ ತಾನೇ ಮೊಳೆ ಹೊಡೆದ ಕುಡುಕ ಎನ್ನುತ್ತಿರುವ ನೆಟ್ಟಿಗರು
ಓರಿಸ್ಸಾ: ಮದ್ಯ ಸೇವಿಸಿ, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯ ವರ್ತನೆ ತೋರುತ್ತಿದ್ದ ಇಬ್ಬರನ್ನು ವೈಧ್ಯಕೀಯ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆತಂದಾಗ ಪಾನಮತ್ತನಾಗಿದ್ದ ಒರ್ವ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ಮಾಡಿರುವ ಘಟನೆ ಓರಿಸ್ಸಾನಲ್ಲಿ ವರದಿಯಾಗಿದೆ.
ಈ ಹಲ್ಲೆಯ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ (Viral Video) ಆಗುತ್ತಿದ್ದು, ಎಣ್ಣೆ ಏಟಿನಲ್ಲಿ ಪೊಲೀಸರ ಮೇಲೆ ಕೈ ಎತ್ತಿದ ಆರೋಪಿಯ ಧೈರ್ಯಕ್ಕೆ ನೆಟ್ಟಿಗರು ನಕ್ಕು-ನಕ್ಕು ಸುಸ್ತಾಗಿದ್ದಾರೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ, ಆಸ್ಪತ್ರೆಗೆ ಪರೀಕ್ಷೆಗೆಂದು ಇಬ್ಬರನ್ನು ಪೊಲೀಸರು ಕರೆತಂದಿದ್ದಾರೆ. ಸುತ್ತಲೂ ಆಸ್ಪತ್ರೆ ಸಿಬ್ಬಂದಿಗಳಿದ್ದರೂ ಕೂಡ ಪಾನಮತ್ತನಾಗಿದ್ದ ಓರ್ವ ಆರೋಪಿ ಕರ್ತವ್ಯದಲ್ಲಿ ನಿರತನಾಗಿದ್ದ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.
ವಿಡಿಯೋನಲ್ಲಿ ಕಾಣುವಂತೆ ಎಣ್ಣೆ ಏಟಿನಲ್ಲಿ ಪೊಲೀಸರ ಮೇಲೆ ಕೈ ಮಾಡಿದ್ದು, ಆತನ ಸಹಚರ ಇನ್ನೊಬ್ಬ ಕುಡುಕ ಅವನನ್ನು ಹಿಡಿದುಕೊಂಡು ದೂರ ಹೋಗುತ್ತಿರುವುದನ್ನು ನೋಡಬಹುದಾಗಿದೆ.

ಏನಿದು ಘಟನೆ?

ಈ ವೈರಲ್​ ಘಟನೆಯು ಓರಿಸ್ಸಾದ ಭಾಗ್ಮರಿ ಪೊಲೀಸ್​ ವ್ಯಾಪ್ತಿಯಲ್ಲಿ ನಡೆದಿದ್ದು, ಇಬ್ಬರು ಯುವಕರು ಮದ್ಯ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆಂದು ದೂರು ದಾಖಲಾಗಿದೆ.
ಈ ಇಬ್ಬರ ಆಟಾಟೋಪ ನೋಡಿದ ಪೊಲೀಸರು ಇವರು ಕೇವಲ ಮದ್ಯ ಮಾತ್ರವಲ್ಲ ಮಾದಕ ದ್ರವ್ಯಗಳನ್ನು ಸೇವಿಸಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆಗ ಈ ಇಬ್ಬರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವೈಧ್ಯಕೀಯ ಚಿಕಿತ್ಸೆಗೆಂದು ಕರೆದುಕೊಂಡು ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಅಗತ್ಯ ಕ್ರಮ ಕೈಗೊಳ್ಳುತ್ತೇವೆ!

ಘಟನೆ ನಂತರ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸ್​ ಆಯುಕ್ತರು, ಈ ಇಬ್ಬರು ನಮ್ಮ ಸಿಬ್ಬಂದಿ ಮೇಲೆ ಆಕ್ರಮಣ ನಡೆಸಿರುವ ವಿಡಿಯೋ ಹಾಗು ಸಾಕ್ಷಿಗಳು ನಮ್ಮ ಬಳಿಯಿದೆ. ಸದ್ಯ ಈ ಇಬ್ಬರನ್ನು ಪೊಲೀಸ್​ ಠಾಣೆಯಲ್ಲಿ ಇರಿಸಲಾಗಿದ್ದು, ನಾಳೆ ನ್ಯಾಯಾಲಯಕ್ಕೆ ಪ್ರಸ್ತುತ ಪಡಿಸಲಾಗುತ್ತದೆ. ಇವರ ಮೇಲೆ ಅತ್ಯಂತ ಕಠಿಣ ಕ್ರಮವನ್ನು ತೆಗೆದು ಕೊಳ್ಳಲಾಗುತ್ತದೆಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ನೆಟ್ಟಿಗರ ರಿಯಾಕ್ಷನ್​ ಹೇಗಿದೆ?

ಈ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್​ ಸೆಕ್ಷನ್​ ತುಂಬಿಸುವ ಕೆಲಸಕ್ಕೆ ಇಳಿದಿದ್ದಾರೆ. ಎಣ್ಣೆ ನಶೆಯಲ್ಲಿ ಪೊಲೀಸರ ಮೇಲೆ ಕೈ ಮಾಡಿದ್ದಾನೆ, ಪೊಲೀಸರು ಇವನ ಮೇಲೆ ಕೈ ಮಾಡುವ ವಿಡಿಯೋ ಇದ್ದರೆ ಅದನ್ನು ಶೇರ್​ ಮಾಡಿ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.
ತನ್ನ ಶವ ಪೆಟ್ಟಿಗೆಗೆ ತಾನೇ ಮೊಳೆ ಹೊಡೆಯುವುದೆಂದರೆ ಇದೇ ಇರಬೇಕೆಂದು ಇನ್ನೊಬ್ಬರು ವ್ಯಂಗ್ಯ ಮಾಡಿದ್ದಾರೆ. ಪಾಪ ಪೊಲೀಸರಿಗೆ ಅವರ ಕೆಲಸವನ್ನು ಸರಿಯಾಗಿ ಮಾಡಲು ಬಿಡುವುದಿಲ್ಲ, ಆಮೇಲೆ ಪೊಲೀಸರು ಕೋಪಿಷ್ಟರು ಎಂದು ಕರೆಯುತ್ತಾರೆ ಎಂದು ಮತ್ತೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ, (ಏಜನ್ಸೀಸ್​).