ಮನೆ ನೋಡಲು ಹೋದ ದಂಪತಿ ಮೇಲೆ ನಾಯಿ ಭೀಕರ ದಾಳಿ 
ದೇಶ

ಮನೆ ನೋಡಲು ಹೋದ ದಂಪತಿ ಮೇಲೆ ನಾಯಿ ದಾಳಿ; ಮೈತುಂಬಾ ಗಾಯ, ಆಪರೇಷನ್​; ವಿಡಿಯೋ ವೈರಲ್​! Dog Attack Couple

ಪ್ರಮುಖ ಮುಖ್ಯಾಂಶಗಳು

  • ಮನೆ ನೋಡಲು ಹೋದ ದಂಪತಿ ಮೇಲೆ ನಾಯಿ ಭೀಕರ ದಾಳಿ
  • ಪಂಜಾಬ್​ನ ಪಟಿಯಾಲಾದಲ್ಲಿ ನಡೆದಿರುವ ಘಟನೆ
  • ದಾಳಿ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​
ಪಟಿಯಾಲಾ: ಬಾಡಿಗೆಗೆ ಮನೆ ನೋಡಲು ಹೋದಾಗ ಸಾಕಿದ ನಾಯಿ (Dog Attack Couple) ಯೊಂದು ದಂಪತಿಗಳ ಮೇಲೆ ದಾಳಿ ನಡೆಸಿದ್ದ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ವೈರಲ್​ ಆಗಿತ್ತು. ಈಗ ಈ ದಾಳಿಗೆ ಒಳಗಾದ ವ್ಯಕ್ತಿ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ದಂಪತಿಗಳಿಬ್ಬರು ಗೇಟ್​ ತೆಗೆದ ತಕ್ಷಣ ಪಿಟ್​ಬುಲ್​ ತಳಿಯ ನಾಯಿಯೊಂದು ಆಚೆ ಬಂದು, ದಿಢೀರ್​ನೆ ದಾಳಿ ನಡೆಸಿದೆ.

ನಾಯಿಯ ಒಮ್ಮೆಲೇ ದಾಳಿಗೆ ದಂಪತಿಗಳು ದಂಗಾಗಿದ್ದಾರೆ. ಆದರೆ ಆ ನಾಯಿ ಅವರಿಬ್ಬರನ್ನು ಎಲ್ಲೆಂದರಲ್ಲಿ ಕಚ್ಚಿ ಭಾರಿ ಗಾಯಗಳನ್ನು ಮಾಡಿದೆ. ಕೂಡಲೇ ನಾಯಿ ಮಾಲೀಕ ಬಿಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ನಂತರ ನೆರೆ ಹೊರೆಯವರು ಸೇರಿಕೊಂಡು ಈ ದಾಳಿಯನ್ನು ತಡೆದಿದ್ದಾರೆ. ಆದರೆ ಅಲ್ಲಿಗೆ ನಾಯಿ ದಾಳಿಯಿಂದ ದಂಪತಿಗಳು ತೀವ್ರ ನೋವನ್ನು ಅನುಭವಿಸಿದ್ದಾರೆ.


ಮೈತುಂಬಾ ಸ್ಟಿಚ್​ ಹಾಕಿದ್ದಾರೆ!

ನಾಯಿ ದಾಳಿ ಬಗ್ಗೆ ಮಾತನಾಡಿರುವ ಅಂಕಿತ್ ಸಭರ್ವಾಲ್, ನಾನು ಮತ್ತು ನನ್ ಪತ್ನಿ ಶಿಫಾಲಿ ಸಭರ್ವಾಲ್ ಪಟಿಯಾಲಾದಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆಯಲು ಹೋಗಿದ್ದ ಸಂದರ್ಭದಲ್ಲಿ ಈ ನಾಯಿದಾಳಿ ನಡೆದಿದೆ.

ನನ್ನ ಮತ್ತು ನನ್ನ ಪತ್ನಿಯ ದೇಹದ ತುಂಬೆಲ್ಲಾ ನಾಯಿ ಕಚ್ಚಿದ್ದು, ಸಂಪೂರ್ಣ ಮೈಯಿಗೆ ಸ್ಟಿಚ್​ ಹಾಕಿದ್ದಾರೆ. ಹಾಗೂ ನನ್ನ ಪತ್ನಿಯ ಕೈ ಮತ್ತು ಕಾಲಿಗೆ ತೀವ್ರ ಗಾಯವಾಗಿದ್ದು, ಆಪರೇಷನ್​ ಮಾಡಬೇಕಾಗಿ ವೈದ್ಯರು ತಿಳಿಸಿದ್ದಾರೆ ಎಂದು ಅಂಕಿತ್​ ತಿಳಿಸಿದ್ದಾರೆ.

ಕಾನೂನು ಹೋರಾಟ ನಡೆಸುತ್ತೆನೆ!


ಈ ಘಟನೆಯಿಂದ ನನ್ನ ಮತ್ತು ನನ್ನ ಪತ್ನಿಯ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ಆ ನಾಯಿ ಮಾಲೀಕ ನಷ್ಟ ಪರಿಹಾರ ನೀಡಬೇಕು. ಹಾಗೂ ಆ ನಾಯಿಯನ್ನು ಹಾಯಾಗಿ ಓಡಾಡಲು ಬಿಟ್ಟಿರುವ ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಂಕಿತ್​ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ನಮಗೆ ನ್ಯಾಯ ದೊರಕಬೇಕು. ಪ್ರಾಣಿಯನ್ನು ಸಾಕಿದರೆ ಸಾಲಲ್ಲ, ಅದರಿಂದ ಇತರರಿಗೆ ತೊಂದರೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಅಂಕಿತ್​ ತಿಳಿಸಿದ್ದಾರೆ, (ಏಜನ್ಸೀಸ್).