ಭಾರತದ ಯಾವ ರಾಜ್ಯದ ಜಿಲ್ಲೆಗೆ ಗೋಲ್ಡನ್​ 'ಕ್ಯಾಪಿಟಲ್ ಆಫ್​ ಇಂಡಿಯಾ​' ಪಟ್ಟ ಸಿಕ್ಕಿದೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ | Gold Capital  
ದೇಶ

ಭಾರತದ ಯಾವ ರಾಜ್ಯದ ಜಿಲ್ಲೆಗೆ ಗೋಲ್ಡನ್​ 'ಕ್ಯಾಪಿಟಲ್ ಆಫ್​ ಇಂಡಿಯಾ​' ಪಟ್ಟ ಸಿಕ್ಕಿದೆ ಗೊತ್ತಾ? ಇಲ್ಲಿದೆ ನೋಡಿ ಉತ್ತರ | Gold Capital

ಆ ರೀತಿಯಲ್ಲಿ, ಭಾರತದ ಚಿನ್ನದ ರಾಜಧಾನಿ ಎಂದು ಕರೆಯಲ್ಪಡುವ ನಗರದ ಬಗ್ಗೆ ಕೇಳಿದಾಗ, ಬಹುತೇಕರಿಗೆ ಮೊದಲು ನೆನಪಿಗೆ ಬರುವುದೇ ಕರ್ನಾಟಕದ ಕೆಜಿಎಫ್​ ಚಿನ್ನದ ಗಣಿ. ಅಸಲಿಗೆ, ಉತ್ತರ ಅದಲ್ಲ.

ನವದೆಹಲಿ: ಕಾಫಿನಾಡು ಚಿಕ್ಕಮಗಳೂರು, ಬೊಂಬೆಗಳ ನಾಡು ಚನ್ನಪಟ್ಟಣ, ಸಾಂಸ್ಕೃತಿಕ ನಗರಿ ಮೈಸೂರು, ಶಿಲ್ಪ-ಕಲೆಗಳ ಬೀಡು ಬೇಲೂರು ಸೇರಿದಂತೆ ಹಲವು ರಾಜ್ಯಗಳ ಜಿಲ್ಲೆಗಳಲ್ಲಿನ ಪ್ರಖ್ಯಾತಿ ವಸ್ತು ಅಥವಾ ಇತಿಹಾಸ, ಜನಪ್ರಿಯತೆಯ ಆಧಾರದ ಮೇಲೆ ಆಯಾ ಸ್ಥಳಗಳಿಗೆ ಒಂದು ವಿಶೇಷ ಪಟ್ಟ ಅಥವಾ ಬಿರುದನ್ನು ನೀಡಲಾಗುತ್ತದೆ. ಈ ಸಾಲಿನಲ್ಲಿ, ಭಾರತದ ಗೋಲ್ಡನ್ ಕ್ಯಾಪಿಟಲ್ ಎಂದು ಯಾವ ಊರಿಗೆ ಕರೆಯಲಾಗುತ್ತೆ ಎಂಬ ಅನೇಕರ ಕುತೂಹಲಕಾರಿ ಪ್ರಶ್ನೆಗೆ ಹೀಗಿದೆ ನೋಡಿ ಉತ್ತರ.

​ಸಾಮಾನ್ಯವಾಗಿ, ಪ್ರತಿಯೊಬ್ಬರೂ ಚಿನ್ನದ ಆಭರಣಗಳನ್ನು ದೊಡ್ಡ ಹೂಡಿಕೆಯಾಗಿ ನೋಡುತ್ತಾರೆ. ಇತ್ತೀಚಿಗೆ ಚಿನ್ನದ ಬೆಲೆ ಕೂಡ ದಿನ ಕಳೆದಂತೆ ಹೆಚ್ಚಾಗುತ್ತಲೇ ಇದೆ. ಅನೇಕರು ಆಭರಣಗಳನ್ನು ಖರೀದಿಸಲು ಕಷ್ಟಪಡುತ್ತಿದ್ದಾರೆ. ಆ ರೀತಿಯಲ್ಲಿ, ಭಾರತದ ಚಿನ್ನದ ರಾಜಧಾನಿ ಎಂದು ಕರೆಯಲ್ಪಡುವ ನಗರದ ಬಗ್ಗೆ ಕೇಳಿದಾಗ, ಬಹುತೇಕರಿಗೆ ಮೊದಲು ನೆನಪಿಗೆ ಬರುವುದೇ ಕರ್ನಾಟಕದ ಕೆಜಿಎಫ್​ ಚಿನ್ನದ ಗಣಿ. ಅಸಲಿಗೆ, ಉತ್ತರ ಅದಲ್ಲ.

ಕೇರಳಂ ರಾಜ್ಯದ ತ್ರಿಶೂರ್​ ಜಿಲ್ಲೆಯು ಭಾರತದಲ್ಲಿ ಚಿನ್ನದ ಆಭರಣಗಳ ಉತ್ಪಾದನೆ ಮತ್ತು ಮಾರಾಟದ ಪ್ರಮುಖ ಕೇಂದ್ರ ಎಂದು ಕರೆಯಲಾಗಿದೆ. ಹೀಗಾಗಿ, ತ್ರಿಶೂರ್ ಅನ್ನು ಭಾರತದ ಸುವರ್ಣ ರಾಜಧಾನಿ ಎಂದು ಗುರುತಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಚಿನ್ನಾಭರಣ ತಯಾರಿಕಾ ಕಂಪನಿಗಳು, ಕಾರ್ಯಾಗಾರಗಳು ಮತ್ತು ಆಭರಣ ಮಳಿಗೆಗಳನ್ನು ಈ ಜಿಲ್ಲೆ ಹೊಂದಿದ್ದು, ಸಾಂಪ್ರದಾಯಿಕ ಹಾಗೂ ಆಧುನಿಕ ವಿನ್ಯಾಸಗಳಲ್ಲಿ ಚಿನ್ನದ ಆಭರಣಗಳನ್ನು ಇಲ್ಲಿ ತಯಾರಿಸಲಾಗುತ್ತದೆ.

ತ್ರಿಶೂರ್ ಕೇರಳದ ಮಧ್ಯ ಭಾಗದಲ್ಲಿದೆ. ಇದರ ಸ್ಥಳ ಮತ್ತು ಬಲವಾದ ವ್ಯಾಪಾರ ಮೂಲಸೌಕರ್ಯವು ಸ್ವರ್ಣ ಮತ್ತು ಆಭರಣ ವ್ಯವಹಾರದ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾಗಿದೆ. ತ್ರಿಶೂರ್ ಚಿನ್ನಾಭರಣ ಉತ್ಪಾದನೆಯಲ್ಲಿ ಬಹಳ ಹಿಂದಿನಿಂದಲೂ ಪ್ರಮುಖ ಪಾತ್ರವನ್ನು ವಹಿಸಿದೆ. 20ನೇ ಶತಮಾನದಲ್ಲಿ ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ವ್ಯಾಪಾರ ರಚನೆಗಳು ಬೆಳೆದಂತೆ, ಚಿನ್ನದ ಉದ್ಯಮದಲ್ಲಿ ಅದರ ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಯಿತು. ದಕ್ಷಿಣ ಭಾರತದ ಅನೇಕ ಭಾಗಗಳಲ್ಲಿನ ಆಭರಣ ಮಳಿಗೆಗಳು ಚಿನ್ನದ ಆಭರಣಗಳ ವಿನ್ಯಾಸ, ಉತ್ಪಾದನೆ ಮತ್ತು ವಿತರಣೆಗಾಗಿ ತ್ರಿಶೂರ್ ಅನ್ನೇ ಅವಲಂಬಿಸಿವೆ.

ಮದುವೆ, ಹಬ್ಬ ಸೇರಿದಂತೆ ಕಾರ್ಯಕ್ರಮಗಳಿಗೆ ಬೇಕಾದ ಸಾಂಪ್ರದಾಯಿಕ ಹಾಗೂ ಆಧುನಿಕ ಆಭರಣಗಳನ್ನೂ ಇಲ್ಲಿ ತಯಾರಿಸುತ್ತಾರೆ. ಭಾರತದಲ್ಲಿ ಚಿನ್ನದ ಆಭರಣಗಳಿಗೆ ಹೆಚ್ಚಿನ ಬೇಡಿಕೆಯಿರುವ ಕಾರಣ, ತ್ರಿಶೂರ್‌ನಂತಹ ನಗರಗಳು ಆಭರಣ ಉತ್ಪಾದನೆ ಮತ್ತು ವ್ಯಾಪಾರದಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿಯೇ, ತ್ರಿಶೂರ್ ಭಾರತದ ಪ್ರಮುಖ ಚಿನ್ನ ಮತ್ತು ಆಭರಣ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿದೆ,(ಏಜೆನ್ಸೀಸ್).