ಸಾಂದರ್ಭಿಕ ಚಿತ್ರ  
ದೇಶ

ಮೊದಲ ರಾತ್ರಿಯಂದು ಬಯಲಾದ ಸತ್ಯ: ಮದ್ವೆಯಾದ ಮೂರೇ ದಿನದಲ್ಲಿ ಡಿವೋರ್ಸ್​ ಕೇಳಿದ ನವವಿವಾಹಿತೆ! Divorce

ಪ್ರಮುಖ ಮುಖ್ಯಾಂಶಗಳು

  • ಮದುವೆಯಾದ ಕೇವಲ ಮೂರೇ ದಿನದಲ್ಲಿ ವಿಚ್ಛೇದನ ಕೋರಿದ ನವವಿವಾಹಿತೆ
  • ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ವಿಚಿತ್ರ ಘಟನೆ
  • ಮೊದಲ ರಾತ್ರಿಯಂದೇ ತನ್ನ ಪತಿ ತಾನು ದೈಹಿಕವಾಗಿ ಅಶಕ್ತನೆಂದು ಒಪ್ಪಿಕೊಂಡನೆಂದ ವಧು
ಲಖನೌ: ಮದುವೆಯಾದ ಕೇವಲ ಮೂರೇ ದಿನದಲ್ಲಿ ಮಹಿಳೆಯೊಬ್ಬಳು ವಿಚ್ಛೇದನಕ್ಕೆ ( Divorce ) ಅರ್ಜಿ ಸಲ್ಲಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದಿದೆ.
ಮದುವೆ ಬಳಿಕ ಮೊದಲ ರಾತ್ರಿಯಂದೇ ತನ್ನ ಪತಿ ತಾನು ದೈಹಿಕವಾಗಿ ಅಶಕ್ತನೆಂದು ಒಪ್ಪಿಕೊಂಡನು. ಬಳಿಕ ವೈದ್ಯಕೀಯ ತಪಾಸಣೆ ನಡೆಸಿದಾಗ, ವರದಿಯಲ್ಲಿ ವರನು ತಂದೆಯಾಗಲು ಸಾಧ್ಯವಿಲ್ಲ ಎಂದು ದೃಢಪಟ್ಟಿದೆ ಎಂದು ವಧು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಇದೀಗ ಮದುವೆಯ ವೆಚ್ಚ ಮತ್ತು ಉಡುಗೊರೆಗಳನ್ನು ತಮಗೆ ಹಿಂದಿರುಗಿಸಬೇಕೆಂದು ವಧುವಿನ ಕುಟುಂಬ ವರನ ಕುಟುಂಬವನ್ನು ಒತ್ತಾಯಿಸುತ್ತಿದೆ ಎಂದು ಹೇಳಿದ್ದಾರೆ.
ಮಹಿಳೆ ಕಳುಹಿಸಿರುವ ಕಾನೂನು ನೋಟಿಸ್‌ನಲ್ಲಿ, ನಾನು ದೈಹಿಕವಾಗಿ ಅಶಕ್ತನಾಗಿರುವ ವ್ಯಕ್ತಿಯೊಂದಿಗೆ ನನ್ನ ಉಳಿದ ಜೀವನ ಕಳೆಯಲು ಇಚ್ಛಿಸುವುದಿಲ್ಲ ಎಂದಿದ್ದಾಳೆ.
ಅಂದಹಾಗೆ, 25 ವರ್ಷದ ವರ, ಶ್ರೀಮಂತ ರೈತ ಕುಟುಂಬದ ಏಕೈಕ ಪುತ್ರ. ಆತ ಗೋರಖ್‌ಪುರ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದ (GIDA) ಕೈಗಾರಿಕಾ ಘಟಕದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ. ಸಂಬಂಧಿಕರ ಮೂಲಕ ಮದುವೆಯನ್ನು ಏರ್ಪಡಿಸಲಾಗಿತ್ತು ಮತ್ತು ನವೆಂಬರ್ 28 ರಂದು ವಿವಾಹ ನಡೆಯಿತು. ಡಿಸೆಂಬರ್ 01 ರಂದು ಮೊದಲ ರಾತ್ರಿಯ ದಿನ ಈ ವಿಷಯ ಬೆಳಕಿಗೆ ಬಂದಿತು ಎಂದು ನವವಿವಾಹಿತೆ ಹೇಳಿದ್ದಾಳೆ.
ವರನ ಸ್ಥಿತಿಯನ್ನು ಮರೆಮಾಡಿ ಮದುವೆಯನ್ನು ಮಾಡಿಸಲಾಗಿದೆ ಎಂದು ವಧುವಿನ ಕುಟುಂಬ ಆರೋಪಿಸಿದೆ. ಅಲ್ಲದೆ, ಇದು ವರನ ಎರಡನೇ ಮದುವೆಯಾಗಿದ್ದು, ಈ ಹಿಂದೆಯೂ ಅವನ ಮೊದಲ ಹೆಂಡತಿ ಇದೇ ರೀತಿಯ ಕಾರಣಗಳಿಗಾಗಿ ಮದುವೆಯಾದ ಒಂದು ತಿಂಗಳೊಳಗೆ ಅವನನ್ನು ತೊರೆದಿದ್ದಳು ಎಂದು ವರದಿಯಾಗಿದೆ.
ಈ ವಿವಾದದ ನಂತರ, ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ, ವರನನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ಗೋರಖ್‌ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರೀಕ್ಷೆ ಮಾಡಿದಾಗ ವರನಿಗೆ ತಂದೆಯಾಗುವ ಸಾಮರ್ಥ್ಯವಿಲ್ಲ ಎಂಬ ವರದಿ ಬಂದಿತು. ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ಎರಡೂ ಕುಟುಂಬ ರಾಜಿ ಮಾಡಿಕೊಂಡಿದೆ. ಮದುವೆಗೆ ವೆಚ್ಚ ಮಾಡಿದ್ದ 7 ಲಕ್ಷ ರೂಪಾಯಿನ್ನು ವರನ ಕುಟುಂಬ ಪಾವತಿಸಿದೆ ಮತ್ತು ಒಂದು ತಿಂಗಳೊಳಗೆ ಉಡುಗೊರೆಗಳನ್ನು ನೀಡುವುದಾಗಿ ಹೇಳಿದೆ, (ಏಜೆನ್ಸೀಸ್​).