ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸೌರವ್ ದಾಸ್ ಪಟ್ಟು 
ದೇಶ

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು; ಅಲ್ಲಿವರೆಗೆ ಹೋರಾಟ ನಿಲ್ಲುವುದಿಲ್ಲ: ಸರ್ಕಾರಕ್ಕೆ CJP ವಕ್ತಾರ ಸೌರವ್​ ದಾಸ್​​ ಎಚ್ಚರಿಕೆ! Saurav Das on Dharmendra Pradhan

ಪ್ರಮುಖ ಮುಖ್ಯಾಂಶಗಳು

  • ನೀಟ್ ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಸಿಜೆಪಿ ಹೋರಾಟ ತೀವ್ರ
  • ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸೌರವ್ ದಾಸ್ ಪಟ್ಟು
  • ಸರ್ಕಾರದ ಮುಂದೆ ನಾಲ್ಕು ಬೇಡಿಕೆಗಳನ್ನು ಇಟ್ಟ ಸಿಜೆಪಿ
ನವದೆಹಲಿ: ಸೋಮವಾರ (ಜು.20) ದಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಜೆಪಿಯ ಹೋರಾಟ ತೀವ್ರಗೊಂಡಿದ್ದು, ನೀಟ್​ ಪೇಪರ್​ ಸೋರಿಕೆ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಿದೆ.
ಈ ಪ್ರತಿಭಟನೆಯನ್ನು ಗಮನಿಸಿರುವ ಕೇಂದ್ರ ಸರ್ಕಾರವು ಸಿಜೆಪಿ ವಕ್ತಾರರೊಂದಿಗೆ ಮಾತನಾಡಿದ್ದು, ಅವರ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸುವುದಾಗಿ ತಿಳಿಸಿದೆ.

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲೇಬೇಕು!

ಈ ನೀಟ್​ ಹೋರಾಟವನ್ನು ಆರಂಭಿಸಿದ ದಿನದಿಂದ ಕಾಕ್ರೋಚ್​ ಜನತಾ ಪಾರ್ಟಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Saurav Das on Dharmendra Pradhan) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪಟ್ಟು ಹಿಡಿದಿದೆ.
ಸಚಿವರ ರಾಜೀನಾಮೆ ಜೊತೆಗೆ ನೀಟ್​ ಪರೀಕ್ಷಾ ಅಕ್ರಮದ ಕಾರಣ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ತಲಾ ಒಂದು ಕೋಟಿ ಪರಿಹಾರವನ್ನು ನೀಡಬೇಕು. ಹಾಗೆಯೇ ಈ ಅಕ್ರಮವನ್ನು ವಿರೋಧಿಸಿ 26 ದಿನಗಳಿಂದ ಉಪವಾಸ ಮಾಡುತ್ತಿರುವ ಸೋನಮ್​ ವಾಂಗ್​ಚುಕ್​ ಜೊತೆ ಸರ್ಕಾರ ಮಾತುಕತೆ ನಡೆಸಬೇಕು ಎನ್ನುವ ಬೇಡಿಕೆಗಳನ್ನು ಇಟ್ಟಿದ್ದರು.
ಈಗ ಸೋಮವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಪ್ರತಿಭಟನಾಕಾರರ ಮೇಲೆ ಯಾವುದೇ ರೀತಿಯ ಕಾನೂನು ಕ್ರಮ ಜರುಗಬಾರದು ಎಂಬ ನಾಲ್ಕನೇ ಬೇಡಿಕೆಯನ್ನು ಸಿಜೆಪಿ ಸರ್ಕಾರದ ಮುಂದಿಟ್ಟಿದೆ.

ಹೋರಾಟ ಶಾಂತಿಯುತವಾಗಿರಲಿ!

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಮ್​ ವಾಂಗ್​ಚುಕ್​ ಜಂತರ್​​-ಮಂತರ್​ನಲ್ಲಿ ನಡೆಯುತ್ತಿರುವ ಹೋರಾಟ ಶಾಂತಯುತವಾಗಿ ನಡೆಯಲಿ. ಅಲ್ಲಿ ಯಾವುದೇ ರೀತಿಯ ಹಿಂಸೆಗೆ ಅವಕಾಶ ನೀಡಬೇಡಿ. ಒಂದು ವೇಳೆ ಅಲ್ಲಿ ಗಲಭೆ ರೀತಿ ಪರಿಸ್ಥಿತಿ ನಿರ್ಮಾಣವಾದರೆ ಸರ್ಕಾರ ನಮ್ಮ ಯಾವುದೇ ರೀತಿಯ ಬೇಡಿಕೆ ಈಡೇರಿಸುವುದಿಲ್ಲ ಎಂದು ಸೋನಮ್​ ವಾಂಗ್​ಚುಕ್​ ಮನವಿ ಮಾಡಿದ್ದಾರೆ ಎಂದು ಸಿಜೆಪಿ ವಕ್ತಾರ ಸೌರವ್​​ ದಾಸ್​ ಹೇಳಿಕೆ ನೀಡಿದ್ದಾರೆ, (ಏಜನ್ಸೀಸ್​).