ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಮನವಿ 
ದೇಶ

ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ! ಪ್ರಧಾನಿ ನರೇಂದ್ರ ಮೋದಿಗೆ ಮುಸ್ಲಿಂ ಸಂಘಟನೆಗಳ ಮನವಿ! Cow As National Animal

ಪ್ರಮುಖ ಮುಖ್ಯಾಂಶಗಳು

  • ಬಕ್ರಿದ್​ ಹಬ್ಬಕ್ಕೂ ಮುನ್ನ ಮುಸ್ಲಿಂ ಸಂಘಟನೆಗಳ ಬೇಡಿಕೆ
  • ಹಸುವನ್ನು ರಾಷ್ಟ್ರೀಯ ಪ್ರಾಣಿಯನ್ನಾಗಿ ಘೋಷಿಸುವಂತೆ ಮನವಿ
  • ಸಿಎಂ ಯೋಗಿ ಆದಿತ್ಯನಾಥ್​, ಪಿಎಂ ನರೇಂದ್ರ ಮೋದಿಯನ್ನು ಬೇಟಿಯಾಗುತ್ತೇವೆ
ಲಖನೌ: ಬಕ್ರಿದ್​ ಹಬ್ಬಕ್ಕೂ ಮುನ್ನ ಹಸುವನ್ನು ರಾಷ್ಟ್ರೀಯ ಪ್ರಾಣಿ (Cow As National Animal) ಯನ್ನಾಗಿ ಘೋಷಿಸುವಂತೆ ಜಮೀಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಮನವಿ ಮಾಡಿದ್ದಾರೆ. ಈ ಕುರಿತಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಪಿಎಂ ನರೇಂದ್ರ ಮೋದಿ ಅವರಲ್ಲಿ ಮಾತನಾಡುವುದಾಗಿ ತಿಳಿಸಿದ್ದಾರೆ.
ಮುಸಲ್ಮಾನರ ಜನಸಂಖ್ಯೆ ಹೆಚ್ಚಿರುವ ಸ್ಥಳಗಳಲ್ಲಿ ಗೋ ಹತ್ಯೆ/ವಧೆ ಅಧಿಕವಾಗಿದ್ದು, ಕಡಿಮೆ ಜನಸಂಖ್ಯೆ ಇರುವ ಸ್ಥಳಗಳಲ್ಲಿ ಕೆಲ ಹಿಂದೂಗಳು ಈ ಕೆಲಸದಲ್ಲಿ ತೊಡಗಿದ್ದಾರೆ. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ, ದೇಶದಲ್ಲಿ ನಡೆಯುವ ಹಲವಾರು ಕೋಮುದಂಗೆಗಳನ್ನು ತಪ್ಪಿಸಬಹುದು ಎನ್ನುವುದು ಮೌಲಾನಾ ಅರ್ಷದ್ ಮದನಿ ಅವರ ಅಭಿಪ್ರಾಯವಾಗಿದೆ.

ಇತರೆ ಮುಸ್ಲಿಂ ಸಂಘಟನೆಗಳ ಬೆಂಬಲ!

ಜಮೀಯತ್ ಉಲಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಅರ್ಷದ್ ಮದನಿ ಅವರ ಮಾತನ್ನು ದೇಶದ ಇತರ ಇಸ್ಲಾಮಿಕ್​ ಸಂಘಟನೆಗಳು ಸಹ ಒಪ್ಪಿಕೊಂಡಿವೆ. ಅಖಿಲ ಭಾರತ ಮುಸ್ಲಿಂ ಜಮಾತ್ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ, ಮೌಲಾನಾ ಅರ್ಷದ್ ಮದನಿ ಅವರ ಮಾತನ್ನು ನಾನು ಸ್ವಾಗತಿಸುತ್ತೆನೆ. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಸರ್ಕಾರ ಘೋಷಿಸಲೇಬೇಕು. ಈ ಕುರಿತು ನಾವು ಸ್ವಲ್ಪ ದಿನಗಳಲ್ಲಿ ದೆಹಲಿಯಲ್ಲಿ ಸಭೆ ನಡೆಸಲಿದ್ದೆವೆ ಎಂದು ಹೇಳಿದ್ದಾರೆ.
ಅಖಿಲ ಭಾರತ ಖುರೇಷಿ ಜಮಾಅತ್ ಅಧ್ಯಕ್ಷ ಸಿರಾಜ್ ಖುರೇಷಿ, ಬಕ್ರಿದ್​ ಸಮಯದಲ್ಲಿ ಗೋ ವಧೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಹಸುವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿದರೆ ಈ ಸಮಸ್ಯೆಗೆ ಪೂರ್ಣವಿರಾಮ ಬೀಳುತ್ತದೆ. ಈ ಕುರಿತು ನಾವು ಪ್ರಧಾನಿಗಳನ್ನು ಬೇಟಿ ಮಾಡುತ್ತೇವೆಂದು ತಿಳಿಸಿದ್ದಾರೆ.
ಅಖಿಲ ಭಾರತ ಶಿಯಾ ವೈಯಕ್ತಿಕ ಕಾನೂನು ಮಂಡಳಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಯಾಸೂಬ್ ಅಬ್ಬಾಸ್, ಮೌಲಾನಾ ಅರ್ಷದ್ ಮದನಿ ಅವರು ಹೇಳಿರುವುದು ಸರಿಯಿದೆ. ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಿ ಬಿಟ್ಟರೆ ದೇಶದಲ್ಲಿ ನಡೆಯುವ ಅರ್ಧದಷ್ಟು ಕೋಮು ಹಿಂಸಾಚಾರ ನಿಂತುಹೋಗುತ್ತದೆ. ಈ ಬಗ್ಗೆ ಸರ್ಕಾರ ಚಿಂತನೆ ನಡೆಸಬೇಕೆಂದು ಅವರು ಹೇಳಿದ್ದಾರೆ, (ಏಜನ್ಸೀಸ್​).