ನವದೆಹಲಿ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಭಾನುವಾರ(ಅ. 18) ಗುಂಡಿನ ದಾಳಿ ನಡೆದಿದ್ದು, ಮತ್ತು ಅದರ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಇದರ ನಡುವೆ ಗ್ಯಾಂಗ್ಸ್ಟಾರ್ಸ್ ಮತ್ತು ಪ್ರತಿಭಟನಾಕಾರರ ಜೊತೆ ನಡೆದುಕೊಂಡ ರೀತಿ ಬಗ್ಗೆ ದೆಹಲಿ ಪೊಲೀಸರ ವಿರುದ್ಧ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್‌ನಲ್ಲಿ ಪೂರ್ವ ದೆಹಲಿ ಡಿಸಿಪಿ ಅಭಿಷೇಕ್ ಧನಿಯಾ ಅವರು, ಸುದ್ದಿಗೋಷ್ಠಿಯೊಂದರಲ್ಲಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ನನ್ನು "ಲಾರೆನ್ಸ್ ಬಿಷ್ಣೋಯ್ ಸಾಹೇಬ್" ಎಂದು ಸಂಬೋಧಿಸುವ ವಿಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.
ಇದು ಗ್ಯಾಂಗ್‌ಸ್ಟರ್‌ಗಳ ಬಗ್ಗೆ ದೆಹಲಿ ಪೊಲೀಸರಿಗಿರುವ ಗೌರವ. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ಕಡೆಗೂ ಅವರು ಇದರಲ್ಲಿ ಕೇವಲ ಕನಿಷ್ಠ 10 ಪ್ರತಿಶತದಷ್ಟು ಸೌಜನ್ಯವನ್ನಾದರೂ ತೋರಿದ್ದರೆ ಚೆನ್ನಾಗಿತ್ತು ಎಂದು ಬರೆದುಕೊಂಡಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಬದಲು, ಪೊಲೀಸರು ನಿಜವಾದ ಅಪರಾಧಿಗಳ ಮೇಲೆ ಗಮನಹರಿಸಬೇಕು. ಸರ್ಕಾರ ಮತ್ತು ಪೊಲೀಸರು ತಮ್ಮ ಆದ್ಯತೆಗಳನ್ನು ಸಂಪೂರ್ಣವಾಗಿ ಮರೆತಾಗ ಹೀಗಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).