ಟೈಗರ್ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಮೂವರನ್ನು ಬಂಧಿಸಿದ ಪೊಲೀಸರು: ಗುಜರಾತ್​ನಲ್ಲಿ ತಲೆ ಮರೆಸಿಕೊಳ್ಳಲು ಯತ್ನ | Tiger Shroff

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ ಮೂವರು ದುಷ್ಕರ್ಮಿಗಳನ್ನು ಮುಂಬೈ ಪೊಲೀಸರು ಇಂದು(ಅ. 19) ಕೋಟಾದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಗುಜರಾತ್​ಗೆ ತೆರಳಿ ಅಲ್ಲಿ ತಲೆ ಮರೆಸಿಕೊಳ್ಳಲು ಯತ್ನಿಸಿದ್ದರು ಎಂದು ವರದಿಯಾಗಿದೆ.
ಟೈಗರ್ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಮೂವರನ್ನು ಬಂಧಿಸಿದ ಪೊಲೀಸರು: ಗುಜರಾತ್​ನಲ್ಲಿ ತಲೆ ಮರೆಸಿಕೊಳ್ಳಲು ಯತ್ನ | Tiger Shroff
Published on: 

ಮುಂಬೈ: ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದ ಮೂವರು ದುಷ್ಕರ್ಮಿಗಳನ್ನು ಮುಂಬೈ ಪೊಲೀಸರು ಇಂದು(ಅ. 19) ಕೋಟಾದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಗುಜರಾತ್​ಗೆ ತೆರಳಿ ಅಲ್ಲಿ ತಲೆ ಮರೆಸಿಕೊಳ್ಳಲು ಯತ್ನಿಸಿದ್ದರು ಎಂದು ವರದಿಯಾಗಿದೆ.

ಪ್ರಾಥಮಿಕ ಗುಪ್ತಚರ ಮಾಹಿತಿಯ ಪ್ರಕಾರ, ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಬಳಿಕ ಮಹಾರಾಷ್ಟ್ರ ಗಡಿಯನ್ನು ದಾಟಿ ನೆರೆಯ ಗುಜರಾತ್‌ಗೆ ಪ್ರವೇಶಿಸಿ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳಲ್ಲಿ ಇಬ್ಬರು ಹರಿಯಾಣದವರು ಮತ್ತು ಒಬ್ಬರು ಮಹಾರಾಷ್ಟ್ರದವರು.

ಮೂವರು ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆರೋಪಿಗಳು ದಾಳಿಯನ್ನು ನಡೆಸುವ ಮೊದಲು ನಟನ ಚಲನವಲನಗಳ ಬಗ್ಗೆ ಮತ್ತು ವಾರದ ದಿನಚರಿಯನ್ನು ಪರಿಶೀಲನೆ ನಡೆಸಿದ್ದರು.

Also Read
ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ; ಬುಲೆಟ್​ಗೆ ಬುಲೆಟ್​ಗಳಿಂದಲೇ ಉತ್ತರ: ಗ್ಯಾಂಗ್​ವಾರ್​ಗಳಿಗೆ ಡಿಸಿಎಂ ಶಿಂಧೆ ಎಚ್ಚರಿಕೆ | Eknath Shinde
ಟೈಗರ್ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆಸಿದ ಮೂವರನ್ನು ಬಂಧಿಸಿದ ಪೊಲೀಸರು: ಗುಜರಾತ್​ನಲ್ಲಿ ತಲೆ ಮರೆಸಿಕೊಳ್ಳಲು ಯತ್ನ | Tiger Shroff

ದಾಳಿ ಬಳಿಕ ವಿಲೆ ಪಾರ್ಲೆ ಮತ್ತು ಅಂಧೇರಿ ಮೂಲಕ ಎಸ್.ವಿ. ರಸ್ತೆಯುದ್ದಕ್ಕೂ, ಮೊದಲೇ ಯೋಜಿಸಿದ್ದ ದಾರಿ ಮೂಲಕ ತೆರಳಿದ್ದಾರೆ. ಅಂದೇರಿ ಪಶ್ಚಿಮ ರೈಲು ನಿಲ್ದಾಣದಲ್ಲಿ ತಮ್ಮ ಮೋಟಾರ್‌ಸೈಕಲ್ ಅನ್ನು ಬಿಟ್ಟು, ಬೋರಿವಲಿ ಕಡೆಗೆ ಹೋಗುವ ರೈಲನ್ನು ಹತ್ತಿ ಪರಾರಿಯಾಗಿದ್ದರು. ಈಗ ಕೋಟಾದಲ್ಲಿ ಸಿಕ್ಕಿ ಬಿದ್ದಿದ್ದಾರೆ.

ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ, ಮುಂಬೈ ಅಥವಾ ಮಹಾರಾಷ್ಟ್ರದಲ್ಲಿ ಸೆಲೆಬ್ರಿಟಿಗಳನ್ನು ಬೆದರಿಸುವ ಅಥವಾ ಕ್ರಿಮಿನಲ್ ಗ್ಯಾಂಗ್‌ಗಳ ಪ್ರಾಬಲ್ಯವನ್ನು ಸ್ಥಾಪಿಸುವ ಪ್ರಯತ್ನಗಳನ್ನು ಸರ್ಕಾರ ಸಹಿಸುವುದಿಲ್ಲ. ಗುಂಡಿನ ದಾಳಿಗೆ ಗುಂಡುಗಳಿಂದಲೇ ಉತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ಸಂಜೆ 7 ಗಂಟೆ ಸುಮಾರಿಗೆ ಪುಷ್ಪಾ ಪಾರ್ಕ್ ಬಳಿ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿದೆ. ಫುಟ್ಬಾಲ್ ಮೈದಾನದಲ್ಲಿ ಆಟವಾಡಿ ಮನೆಗೆ ತೆರಳುವಾಗ ಗೇಟ್ ಬಳಿ ದುಷ್ಕರ್ಮಿಗಳು ಅವರ ಬಿಎಮ್​ಡಬ್ಲ್ಯೂ ಕಾರಿನ ಮೇಲೆ ಮೂರು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ಇಬ್ಬರು ದರೋಡೆಕೋರರು ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net