ದಾವೂದ್ನನ್ನು ರೋಗಗ್ರಸ್ಥನಾಗಿ ತೋರಿಸಿದ ಧುರಂಧರ್ ಸಿನಿಮಾ
- ದಾವೂದ್ನನ್ನು ರೋಗಗ್ರಸ್ಥನಾಗಿ ತೋರಿಸಿದ ಧುರಂಧರ್ ಸಿನಿಮಾ
- ಸಿನಿಮಾ ಮೇಲೆ ಕೋಪಿಸಿಕೊಂಡಿರುವ ಮಾಜಿ ಡಾನ್
- ಮುಂಬೈನಲ್ಲಿ ಡಿ-ಕಂಪನಿ ಮರುಸ್ಥಾಪನೆಗೆ ಫ್ಲಾನ್
- ಈ ಯೋಜನೆಗೆ ಪಾಕಿಸ್ತಾನದ ಐಎಸ್ಐನಿಂದ ಫುಲ್ ಸಪೋರ್ಟ್
ಮುಂಬೈ: ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಹಾಗೂ ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾ ತೆರೆಕಂಡು ಭಾರತೀತ ಸಿನಿಮಾರಂಗದಲ್ಲಿ ನೂತನ ಮೈಲಿಗಲ್ಲನ್ನು ಸ್ಥಾಪಿಸಿತು.
ಈ ಸಿನಿಮಾ ಬಿಡುಗಡೆಯಾದಾಗನಿಂದ ಇದೊಂದು ಪ್ರೊಪಗಾಂಡಾ, ಬಿಜೆಪಿ ಪ್ರಾಯೋಜಿತ ಸಿನಿಮಾ ಎಂಬೆಲ್ಲಾ ಆರೋಪಗಳು ಕೇಳಿ ಬಂದಿದ್ದವು. ಆದರೆ ಈಗ ಈ ಸಿನಿಮಾ ಮುಂಬೈ ಭೂಗತ ಜಗತ್ತಿನ ಮಾಜಿ ಡಾನ್ನ (Dawood Ibrahim Angry On Dhurandhar) ಕೋಪಕ್ಕೆ ಕಾರಣವಾಗಿದೆ ಎಂಬ ಮಾಹಿತಿ ಹೊರಬಿದಿದ್ದೆ.
ಧುರಂಧರ್ ಮೇಲೆ ದಾವೂದ್ ಗರಂ!
ಧುರಂಧರ್ ಸಿನಿಮಾದಲ್ಲಿ ಬಡೇ ಸಾಬ್ ಎಂಬ ಪಾತ್ರವನ್ನು ಬಾಂಬೆ (ಇಂದಿನ ಮುಂಬೈ) ಭೂಗತ ಜಗತ್ತಿನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ದಾವೂದ್ ಇಬ್ರಾಹಿಂನನ್ನು ಆಧರಿಸಿ ತೆರೆ ಮೇಲೆ ತೋರಿಸಲಾಗಿತ್ತು.
ಈ ಮೊದಲು ಸಹ ದಾವೂದ್ನ ಪಾತ್ರಗಳನ್ನು ಬಾಲಿವುಡ್ನ ಸಿನಿಮಾಗಳಲ್ಲಿ ಟೆರರ್, ಹ್ಯಾಂಡ್ಸಮ್ ಮತ್ತು ಅತ್ಯಂತ ಪ್ರಭಾವಿ ವ್ಯಕ್ತಿ ರೀತಿ ತೋರಿಸಿದ್ದರೆ, ಈ ಧುರಂಧರ್ ಸಿನಿಮಾದಲ್ಲಿ ದಾವೂದ್ ಇಬ್ರಾಹಿಂ ರೋಗಗ್ರಸ್ಥನಾಗಿ ಹಾಸಿಗೆ ಹಿಡಿದು ಮಲಗಿರುವ ರೀತಿ ತೋರಿಸಿದ್ದಾರೆ.
ತನ್ನ ಪಾತ್ರವನ್ನು ಸಿನಿಮಾದಲ್ಲಿ ಪುಕ್ಕಲನ ರೀತಿ ತೋರಿಸಿದ್ದರಿಂದ ಡಾನ್ ಕುಪಿತನಾಗಿದ್ದು, ಮುಂಬೈನಲ್ಲಿ ತನ್ನ ಡಿ-ಕಂಪನಿ ನೆಟ್ವರ್ಕನ್ನು ಪುನಃ ಸ್ಥಾಪಿಸಲು ಮುಂದಾಗಿದ್ದಾನೆಂದು ಹೇಳಲಾಗುತ್ತಿದೆ.
ನಾನು ಈಗಲೂ ಮೊದಲಿನಂತೆ ಸಶಕ್ತನಾಗಿದ್ದೆನೆ, ನನ್ನ ಸಾಮರ್ಥ್ಯ ಈಗಲೂ ಹಿಂದಿನಂತೆಯೇ ಇದೆ, ಈಗಲೂ ಮುಂಬೈನಲ್ಲಿ ತನ್ನ ಹಿಡಿತವಿದೆ ಎಂದು ತೋರಿಸಲು ದಾವೂದ್ ಮುಂದಾಗಿದ್ದಾನೆಂಬ ಮಾಹಿತಿ ದೊರೆತಿದೆ.
ಭೂಗತ ಲೋಕವನ್ನು ಸಕ್ರೀಯಗೊಳಿಸಿ!
ಒಂದು ಸಿನಿಮಾ ಮೂಲಕ ಇಷ್ಟು ವರ್ಷ ಕಾಪಾಡಿಕೊಂಡು ಬಂದಿರುವ ಪ್ರತಿಷ್ಟೆಯನ್ನು ಹಾಳು ಮಾಡಿಕೊಂಡರೆ ಹೇಗೆ ಎಂದು ಯೋಚಿಸಿರುವ ಡಿ-ಗ್ಯಾಂಗ್ ಮುಂಬೈನಲ್ಲಿ ಹೊಸ-ಹೊಸ ಹುಡುಗರನ್ನು ಹುಡುಕಿ ಮತ್ತೆ ಹಳೆ ಬಾಂಬೆ ಅಂಡರ್ವರ್ಲ್ಡ್ನ್ನು ಮರುಸ್ಥಾಪನೆ ಮಾಡಲು ಮುಂದಾಗಿದ್ದಾರೆ.
ಈ ಕೆಲಸಕ್ಕೆ ಪಾಕಿಸ್ತಾನದ ಐಎಸ್ಐ ಸಹ ಸಹಕಾರ ನೀಡುತ್ತಿದ್ದಾಗಿ ತಿಳಿದು ಬಂದಿದ್ದು, ಇತ್ತೀಚೆಗೆ ದೆಹಲಿ ಪೊಲೀಸರು ಪಾಕಿಸ್ತಾನದ ಜೊತೆ ಸಂಕರ್ಪ ಹೊಂದಿದ್ದ 9 ಜನರನ್ನು ಬಂಧಿಸಿದ್ದರು. ಅವರಿಂದ ಭಾರಿ ಸಂಖ್ಯೆಯ ಶಸ್ತ್ರಾಸ್ತ್ರ ಹಾಗೂ ಸ್ಪೋಟಕಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು, (ಏಜನ್ಸೀಸ್).