ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ಬಂದ ರೈತ 
ದೇಶ

ಗದ್ದೆಯಲ್ಲಿ ಕಾಣಿಸಿಕೊಂಡ ಮೊಸಳೆ: ಹೆಗಲ ಮೇಲೆ ಹೊತ್ತು ಪೊಲೀಸ್​ ಠಾಣೆಗೆ ಬಂದ ರೈತ; ವಿಡಿಯೋ ವೈರಲ್​! Crocodile Rescue in Bihar

ಪ್ರಮುಖ ಮುಖ್ಯಾಂಶಗಳು

  • ಗದ್ದೆಯಲ್ಲಿ ಪತ್ತೆಯಾದ ಮೊಸಳೆ
  • ಮೊಸಳೆಯನ್ನು ಹೆಗಲ ಮೇಲೆ ಹೊತ್ತು ಪೊಲೀಸ್ ಠಾಣೆಗೆ ಬಂದ ರೈತ
  • ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಬಿಹಾರ​: ಮಳೆಗಾಲದಲ್ಲಿ ತನ್ನ ಗದ್ದೆಗೆ ಬಂದಿದ್ದ ಮೊಸಳೆಯೊಂದನ್ನು(Crocodile Rescue in Bihar) ಹಿಡಿದ ಯುವಕ ಅದನ್ನು ಹೊತ್ತಿಕೊಂಡು ಪೊಲೀಸ್​ ಠಾಣೆಗೆ ತಲುಪಿರುವ ಘಟನೆ ಬಿಹಾರದ ಭೀಮಾನಗರದಲ್ಲಿ ವರದಿಯಾಗಿದೆ.
ಗದ್ದೆಯಲ್ಲಿದ್ದ ಮೊಸಳೆಯನ್ನು ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಬಾರದ ಹಿನ್ನಲೆ, ತನೇ ಸ್ವತಃ ಗದ್ದೆಗಿಳಿದು, ಮೊಸಳೆಯನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿರುವ ವಿಡಿಯೋ ಈಗ ಸೋಷಿಯಲ್​ ಮೀಡಿಯಾನಲ್ಲಿ ಸಕ್ಕತ್​ ಸೌಂಡ್​ ಮಾಡುತ್ತಿದೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ಯುವಕನೊಬ್ಬ, ಮಧ್ಯಮ ಗಾತ್ರದ ಮೊಸಳೆಯೊಂದನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು, ಪೊಲೀಸ್​ ಠಾಣೆಗೆ ಹೋಗುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದಾಗಿದೆ.

ಮಾಹಿತಿ ಪ್ರಕಾರ, ಕಳೆದ ಕೆಲ ದಿನಗಳಿಂದ ಬಿಹಾರದಲ್ಲಿ ಭಾರಿ ಮಳೆ ಕಂಡುಬರುತ್ತಿದ್ದು, ಇದರಿಂದ ಮೊಸಳೆಯೊಂದು ಈ ಯುವಕನ ಗದ್ದೆಯನ್ನು ಸೇರಿದೆ. ಗದ್ದೆಯಲ್ಲಿ ಮೊಸಳೆಯನ್ನು ಕಂಡ ಊರಿನವರು, ಗಾಬರಿಗೊಂಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.


ಆದರೆ ಅರಣ್ಯ ಸಿಬ್ಬಂದಿಗಳಿಂದ ಸೂಕ್ತ ಪ್ರತಿಕ್ರಿಯೆ ದೊರೆಯದ ಕಾರಣ, ಈ ಯುವಕ ಸ್ವತಃ ಗದ್ದೆಗಿಳಿದು ಮೊಸಳೆ ಬಾಯಿಗೆ ಹಗ್ಗವನ್ನು ಬಿಗಿದು, ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾನೆ. ನಂತರ ಸೆರೆಹಿಡಿದ ಈ ಮೊಸಳೆಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಪೊಲೀಸ್​ ಠಾಣೆ ಪ್ರವೇಶಿಸಿ, ಠಾಣಾಧಿಕಾರಿಗೆ ಹಸ್ತಾಂತರಿಸಿದ್ದಾನೆ.

ಕೆರೆ ಸೇರಿದ ಮೊಸಳೆ!

ಮೊಸಳೆ ಹೊತ್ತು ಠಾಣೆಗೆ ಆಗಮಿಸಿದ ಯುವಕನನ್ನು ನೋಡಿ ಗಾಬರಿಯಾದ ಪೊಲೀಸರು ಕೂಡಲೇ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಯುವಕನಿಂದ ಮೊಸಳೆಯನ್ನು ಪಡೆದು ಆರೋಗ್ಯ ಸ್ಥಿತಿ ಪರೀಕ್ಷಿಸಿ, ಹತ್ತಿರದ ಕೆರೆಗೆ ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.

ಹಾಗೆಯೇ, ಈಗ ಮಳೆಗಾಲ ಪ್ರಾರಂಭವಾಗಿರುವ ಕಾರಣ ನೀರಿನ ಮಟ್ಟ ಏರಿಕೆ ಕಂಡ ಬೆನ್ನಲ್ಲೆ ಮೊಸಳೆ, ಹಾವೂ ಸೇರಿದಂತೆ ಜಲಚರಗಳ ಚಲನೆ ಬದಲಾಗುತ್ತದೆ. ಆದರೆ ಹೀಗೆ ವನ್ಯಮೃಗಗಳನ್ನು ತಾವಾಗಿಯೇ ಹಿಡಿಯುವ ಹುಚ್ಚು ಕೆಲಸಕ್ಕೆ ಮುಂದಾಗಬೇಡಿ, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬರುವವರೆಗೆ ಸಮಾಧಾನ ಕಾದುಕೊಳ್ಳಿ ಎಂದು ಸಹಲೆ ನೀಡಿದ್ದಾರೆ,

(ಏಜನ್ಸೀಸ್​).