ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ
- ಪಶ್ಚಿಮ ಬಂಗಾಳದಲ್ಲಿ ನಿಮ್ಮ ಪಕ್ಷ ಒಂದು ಸೀಟ್ನ್ನು ಪಡೆಯುವುದಿಲ್ಲ
- ತಮಿಳನಾಡು ಮತ್ತು ಪುದುಚೇರಿಯಲ್ಲಿ ಒಂದಕ್ಕಿ ದಾಟಲ್ಲ
- ಅಸ್ಸಾಂನಲ್ಲಿ ಹೀನಾಯ ಸೋಲನ್ನು ಕಾಣುತ್ತಿರಿ
- ರಾಹುಲ್ ಗಾಂಧಿ ಜೊತೆ ಸೇರಿ ಮಲ್ಲಿಕಾರ್ಜುನ್ ಖರ್ಗೆ ಅವರ ನಾಲಿಗೆ ಹದಗೆಟ್ಟಿದೆ
- ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಪಶ್ಚಿಮ ಬಂಗಾಳ: ಬುಧವಾರ (ಏ.22) ಪಶ್ಚಿಮ ಬಂಗಾಳದ ದಮ್ದಮ್ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah on Rahul Gandhi), ಈ ಭಾರಿಯ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಕ್ಷೇತ್ರದಲ್ಲಿ ಸಹ ಜಯವನ್ನು ಸಾಧಿಸುವುದಿಲ್ಲ ಎಂದು ಹೇಳಿದ್ದಾರೆ.
ಅದೇ ರೀತಿ ಅಸ್ಸಾಂನಲ್ಲಿ ಅತ್ಯಂತ ಹೀನಾಯವಾಗಿ ಸೋಲಲಿದ್ದು, ಇನ್ನು ತಮಿಳನಾಡು ಮತ್ತು ಪುದುಚೇರಿಯಲ್ಲಿ ಒಂದಕ್ಕಿ ದಾಟುವುದಿಲ್ಲ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಇಷ್ಟ ಪಡುತ್ತೇನೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಮುಖ್ಯಸ್ಥರ ನಾಲಿಗೆ ಹದಗೆಟ್ಟಿದೆ
ನಿನ್ನೆ (ಏ.21) ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ್ ಖರ್ಗೆ ಪತ್ರಿಕಾಗೋಷ್ಠಿವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದರು. ಬಳಿಕ ಈ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆ, ನನ್ನ ಮಾತಿನ ಬೇರೆಯಾಗಿತ್ತು, ಮೋದಿ ಜನರನ್ನು ಭಯಗ್ರಸ್ಥರಾಗಿಸುತ್ತಾರೆ ಎಂದು ಸ್ಪಷ್ಟನೆ ನೀಡಿದ್ದರು.
ಈ ಹೇಳಿಕೆಗೆ ತೀರುಗೇಟು ಕೊಟ್ಟ ಅಮಿತ್ ಶಾ, ರಾಹುಲ್ ಗಾಂಧಿ ಜೊತೆ ಸೇರಿಕೊಂಡು ಮಲ್ಲಿಕಾರ್ಜುನ್ ಖರ್ಗೆ ಅವರ ನಾಲಿಗೆ ಸಹ ಹದಗೆಟ್ಟು ಹೋಗಿದೆ. ಕಾಂಗ್ರೆಸ್ ಪ್ರತಿ ಸಲ ಪ್ರಧಾನಿಗಳ ಮೇಲೆ ಮತ್ತು ಬಿಜೆಪಿ ಮೇಲೆ ಸುಳ್ಳು ಆರೋಪಗಳನ್ನು ಮಾಡಲು ಹೋದಾಗ ಭಾರತದ ಜನರೇ ಅವರಿಗೆ ತಕ್ಕ ಉತ್ತರವನ್ನು ನೀಡಿದ್ದಾರೆ ಎಂದು ಹೇಳಿದರು.
ಪ್ರಧಾನಿಗೆ ಟೆರರಿಸ್ಟ್ ಎಂದ ಖರ್ಗೆ
ಮಂಗಳವಾರ (ಏ.21) ತಮಿಳುನಡಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಈ ಎಐಎಡಿಎಂಕೆ ಅವರು ಏಕೆ ಆ ಮೋದಿ ಜೊತೆ ಕೈ ಜೋಡಿಸಬೇಕು, ಅವರೊಬ್ಬ ಟೆರರಿಸ್ಟ್, ಆ ಪಕ್ಷ ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ನಂಬಿಕೆ ಇಲ್ಲದ ಪಕ್ಷದ ಜೊತೆ ಅಣ್ಣಾ ಧುರೈರಂತ ಮಹಾನ್ ಚೇತನ ಕಟ್ಟಿ ಬೆಳೆಸಿದ ಪಕ್ಷ ಏಕೆ ಸೇರಿಕೊಂಡಿದೆ ಎಂದು ಖರ್ಗೆ ಹೇಳಿದ್ದರು.
ನಂತರ ತಮ್ಮ ಈ ಭಯೋತ್ಪಾದಕ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ, ನಾನು ಮೋದಿ ಅವರನ್ನು ನೇರವಾಗಿ ಭಯೋತ್ಪಾದಕನೆಂದು ಕರೆದಿಲ್ಲ. ಅವರು ಜನರನ್ನು ಹೆದರಿಸುತ್ತಾರೆ, ಅವರನ್ನು ಪ್ರಶ್ನಿಸುವ ಜನರ ಮನೆಗೆ ಇಡಿ, ಸಿಬಿಐ ಮತ್ತು ಐಟಿ ಅಧಿಕಾರಿಗಳನ್ನು ಬಿಟ್ಟು ಭಯ ಪಡಿಸುವ ಪ್ರಯತ್ನ ಮಾಡುತ್ತಾರೆ. ನಾನು ಈ ಅರ್ಥದಲ್ಲಿ ಅವರನ್ನು ಭಯೋತ್ಪಾದಕನೆಂದು ಹೇಳಿದ್ದು, ಎಂದು ಖರ್ಗೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು, (ಏಜನ್ಸೀಸ್).