ದೇಶ

ಯುವತಿ ಹಿಂದೆ ಸರಿಯುತ್ತಿದ್ರು ಪದೇ ಪದೇ ಮುಟ್ಟಿ ಮಾತನಾಡಿಸಿದ ಕಾಂಗ್ರೆಸ್ ಶಾಸಕ; ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್: ವ್ಯಾಪಕ ಟೀಕೆ | Congress MLA

ತೆಲಂಗಾಣ ಸರ್ಕಾರದ ಮಹಾಲಕ್ಷ್ಮಿ ಉಚಿತ ಬಸ್ ಯೋಜನೆ ಬಗ್ಗೆ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಸಂವಾದ ನಡೆಸುವ ವೇಳೆ , ಕಾಂಗ್ರೆಸ್ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ, ಯುವತಿಯೊಬ್ಬಳು ಪದೇ ಪದೇ ಹಿಂದೆ ಸರಿದ್ರೂ ಆಕೆಯನ್ನು ಮುಟ್ಟಿ ಮಾತನಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಹೈದರಾಬಾದ್: ತೆಲಂಗಾಣ ಸರ್ಕಾರದ ಮಹಾಲಕ್ಷ್ಮಿ ಉಚಿತ ಬಸ್ ಯೋಜನೆ ಬಗ್ಗೆ ಚಲಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಲ್ಲಿ ಸಂವಾದ ನಡೆಸುವ ವೇಳೆ , ಕಾಂಗ್ರೆಸ್ ಶಾಸಕ ಮಾಲ್ರೆಡ್ಡಿ ರಂಗಾ ರೆಡ್ಡಿ, ಯುವತಿಯೊಬ್ಬಳು ಪದೇ ಪದೇ ಹಿಂದೆ ಸರಿದ್ರೂ ಆಕೆಯನ್ನು ಮುಟ್ಟಿ ಮಾತನಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮಹಾಲಕ್ಷ್ಮಿ ಫ್ರೀ ರೈಡ್ ಯೋಜನೆಯ ಫಲಾನುಭವಿಗಳೊಂದಿಗೆ ಸಂವಹನ ನಡೆಸಲು ಮಂಗಳವಾರ(ಅ. 06) ಇಬ್ರಾಹಿಂಪಟ್ನಂ ಶಾಸಕರಾಗಿರುವ ಮಾಲ್ರೆಡ್ಡಿ ರಂಗಾರೆಡ್ಡಿ, ಇಬ್ರಾಹಿಂಪಟ್ನಂನಿಂದ ಯಮಜಲ್ ಕಡೆಗೆ ಪ್ರಯಾಣಿಸುತ್ತಿದ್ದ ಬಸ್ ಹತ್ತಿದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ರಂಗಾ ರೆಡ್ಡಿ, ಬಸ್ಸಿನಲ್ಲಿ ಕುಳಿತು ಕಾಲೇಜು ವಿದ್ಯಾರ್ಥಿನಿಯೊಬ್ಬಳೊಂದಿಗೆ ಮಾತನಾಡುತ್ತಿರುವನ್ನು ನೋಡಬಹುದು. ಅದರಲ್ಲಿ ಶಾಸಕರು ಆಕೆಯ ಕೈಯನ್ನು ಹಿಡಿದುಕೊಂಡಿದ್ದಾರೆ. ಮತ್ತು ಆಕೆ ಪದೇ ಪದೇ ಹಿಂದೆ ಸರಿಯುತ್ತಿದ್ದರು ಸೊಂಟಕ್ಕೆ ಕೈ ಹಾಕಿ ತಮ್ಮತ್ತ ಸೆಳೆದು ಮಾತುಕತೆ ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಯುವತಿ ಅನಾನುಕೂಲತೆಯನ್ನು ಅನುಭವಿಸುತ್ತಿರುವಂತೆ ಕಾಣಿಸುತ್ತಿದ್ದು, ಶಾಸಕರಿಂದ ದೂರ ಸರಿಯಲು ನೋಡುತ್ತಾಳೆ. ಅದಾಗ್ಯೂ, ಶಾಸಕರು ಆಕೆಯನ್ನು ಪದೇ ಪದೇ ಕೈಹಿಡಿಯುತ್ತಿದ್ದಾರೆ. ಈ ಸಂಭಾಷಣೆ ನಡೆಯುವಾಗ ಇನ್ನಿಬ್ಬರು ಮಹಿಳೆಯರು ಶಾಸಕರ ಪಕ್ಕದಲ್ಲಿ ನಿಂತಿದ್ದಾರೆ.

ಶಾಸಕರ ವರ್ತನೆಗೆ ಚಿನ್ಮಯಿ ಟೀಕೆ

ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಗಾಯಕಿ ಚಿನ್ಮಯಿ ಶ್ರೀಪಾದ ಸೇರಿ ಬಿಆರ್​ಎಸ್ ನಾಯಕರು ಟೀಕಿಸಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿ ಟೀಕಿಸಿರುವ ಚಿನ್ಮಯಿ, ಅವರಿಗೆ ಸಮ್ಮತಿಯ ಕುರಿತು ಯಾವುದೇ ಅರಿವಿಲ್ಲ. ಮಹಿಳೆಯರ ವೈಯಕ್ತಿಕ ಮಿತಿಗಳನ್ನು ಗೌರವಿಸುವ ಬಗ್ಗೆ ಕಾಂಗ್ರೆಸ್ ತನ್ನ ಪುರುಷ ರಾಜಕಾರಣಿಗಳಿಗೆ ತರಬೇತಿ ನೀಡಬೇಕು ಎಂದಿದ್ದಾರೆ.

ಬಿಆರ್​ಎಸ್ ನಾಯಕ ಪಟ್ಲೋಲ್ಲಾ ಕಾರ್ತಿಕ್ ಇಂದ್ರ ರೆಡ್ಡಿ ಘಟನೆಯನ್ನು ಖಂಡಿಸಿದ್ದು, ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಬದಲು, ಈ ಸರ್ಕಾರ ಅವರ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿ ತಮ್ಮ ಪಕ್ಷದಿಂದ ಅಮಾನತುಗೊಳಿಸಬೇಕು. ಸರ್ಕಾರ ಹಾಗೆ ಮಾಡಲು ವಿಫಲವಾದರೆ, ನಾವು ಇಬ್ರಾಹಿಂಪಟ್ಟಣಕ್ಕೆ ತೆರಳಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ (ಏಜೆನ್ಸೀಸ್).