ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು
ಕೋಲ್ಕತ್ತಾ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಯಲದ(ED raid) ಅಧಿಕಾರಿಗಳು ಇಂದು(ಫೆ. 03) ಪಶ್ಚಿಮ ಬಂಗಾಳದಲ್ಲಿ ಐ-ಪ್ಯಾಕ್ ಕಚೇರಿ ಹೊರತುಪಡಿಸಿ ಹಲವು ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಿದ್ದಾರೆ ಎಂದು ವರದಿಯಾಗಿದೆ.
ಕಳೆದು ತಿಂಗಳು ಇದೇ ಕಲ್ಲಿದ್ದಲು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಐ-ಪ್ಯಾಕ್ ಕಚೇರಿ ಮೇಲೆ ದಾಳಿ ನಡೆಸಿ ದೇಶದಲ್ಲಿ ತೀವ್ರ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿತ್ತು. ದಾಳಿ ಸ್ಥಳವಾದ ಐ-ಪ್ಯಾಕ್ ಕಚೇರಿಗೆ ಆಗಮಿಸಿ ಸಿಎಂ ಮಮತಾ ಬ್ಯಾನರ್ಜಿ ಪಕ್ಷಕ್ಕೆ ಸಂಬಂಧಿಸಿದ ಫೈಲ್ಗಳನ್ನು ಹೊತ್ತೊಯ್ತಿದ್ದರು.
ಇಂದಿನ ದಾಳಿಯು ತನಿಖೆಯ ಪ್ರತ್ಯೇಕ ಭಾಗವಾಗಿದ್ದು, ಇನ್ಚಾರ್ಜ್ ಅಧಿಕಾರಿ (ಓಸಿ) ಮನೋರಂಜನ್ ಮೊಂಡಲ್, ಕಿರಣ್ ಖಾನ್, ರಮೇಶ್ ಬನ್ಸಾಲ್, ಶೇಖ್ ಅಖ್ತರ್, ಪ್ರಬೀರ್ ದತ್ತ ಮತ್ತು ಮಿರ್ಜಾ ಎಚ್ ಬೇಗ್ ಸೇರಿದಂತೆ ಹಲವಾರು ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆದಿದೆ. ರಮೇಶ್ ಬನ್ಸಾಲ್ ನಿವಾಸದಿಂದ ಸುಮಾರು 70 ಲಕ್ಷ ರೂ.ಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ (ಏಜೆನ್ಸೀಸ್).