ಚೆನ್ನೈ: ಸಾಮಾಜಿಕ ನ್ಯಾಯದ ಭರವಸೆಯ ಮೇರೆಗೆ ಅಧಿಕಾರಕ್ಕೆ ಬಂದ ಸಿಎಂ ಸಿ. ಜೋಸೆಫ್ ವಿಜಯ್(CM Joseph Vijay), ತಮ್ಮ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಸರ್ಕಾರದಲ್ಲಿ ತಮಿಳುನಾಡು ಇತಿಹಾಸದಲ್ಲಿ ಮೊದಲ ಬಾರಿಗೆ ಏಳು ದಲಿತ ಶಾಸಕರನ್ನು ಸಚಿವರನ್ನಾಗಿ ನೇಮಿಸುವ ಮೂಲಕ ದಾಖಲೆ ಬರೆದಿದ್ದಾರೆ.
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ದಲಿತ ಸಮುದಾಯಕ್ಕೆ ದೊರೆತ ಅತ್ಯಧಿಕ ಪ್ರಾತಿನಿಧ್ಯವಾಗಿದೆ ಇದೆ ಮೊದಲು ಎನ್ನಲಾಗಿದ್ದು, ವಿಸಿಕೆ ಪಕ್ಷದ ಓರ್ವ ಶಾಸಕ ಸಂಪುಟಕ್ಕೆ ಸೇರಿದರೆ ಆ ಸಂಖ್ಯೆ ಎಂಟಕ್ಕೆ ಏರುವ ಸಾಧ್ಯತೆಯಿದೆ. ಡಿಎಂಕೆ ಸರ್ಕಾರದಲ್ಲಿ ನಾಲ್ವರು ದಲಿತರು ಸಚಿವರಾಗಿದ್ದರು.
ದಲಿತ ಸಚಿವರಲ್ಲಿ ಆರು ಮಂದಿ ಟಿವಿಕೆಯವರಾಗಿದ್ದರೆ, ಓರ್ವ ಕಾಂಗ್ರೆಸ್ ಶಾಸಕ. ಮಧುರೈನ ಮೇಲೂರಿನ ಸಾಮಾನ್ಯ ಕ್ಷೇತ್ರದಿಂದ ಗೆದ್ದ ಕಾಂಗ್ರೆಸ್‌ನ ಪಿ. ವಿಶ್ವನಾಥನ್. ಇತರ ಸಚಿವರಾದ ಪಿ. ಮತನರಾಜ, ಡಿ. ಲೋಗೇಶ್ ತಮಿಳುಸೆಲ್ವನ್, ವಿ. ಗಾಂಧಿರಾಜ್, ಕೆ. ತೆನ್ನರಸು, ಎಸ್. ಕಮಲಿ. ಪ್ರಮಾಣವಚನ ಸ್ವೀಕರಿಸಿದ 10 ಸಚಿವರ ಮೊದಲ ಬ್ಯಾಚ್‌ನಲ್ಲಿ ರಾಜಮೋಹನ್ ಕೂಡ ಒಬ್ಬರು ಮತ್ತು ಶಾಲಾ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
ಹೊಸ ಸಂಪುಟದಲ್ಲಿ ನಾಲ್ವರು ಮಹಿಳೆಯವರು ಸಚಿವರಾಗಿದ್ದಾರೆ. ಮತ್ತು ದಶಕಗಳ ದ್ರಾವಿಡ ರಾಜಕಾರಣದಲ್ಲಿ ಜಯಲಲಿತಾ ಹೊರತುಪಡಿಸಿದ್ರೆ ಯಾರೂ ಬ್ರಾಹ್ಮಣರು ಅಧಿಕಾರದ ಗದ್ದುಗೆ ಹಿಡಿದಿರಲಿಲ್ಲ. ಈ ಬಾರಿ ಇಬ್ಬರು ಬ್ರಾಹ್ಮಣ ಸಮುದಾಯದವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಮುಸ್ಲಿಮರು ಒಬ್ಬರು ಸಚಿವರಾಗಿದ್ದು, ಮುಸ್ಲೀಂ ಲೀಗ್ ಕ್ಯಾಬಿನೆಟ್ ಸೇರಿದ್ರೆ ಆ ಸಂಖ್ಯೆ ಎರಡಾಗಲಿದೆ.
ಇತ್ತೀಚಿನ ಚುನಾವಣೆಯಲ್ಲಿ ತಮಿಳುನಾಡಿನ 44 ಎಸ್‌ಸಿ ಮೀಸಲು ಕ್ಷೇತ್ರಗಳಲ್ಲಿ ಟಿವಿಕೆ 23 ಗೆದ್ದಿದೆ ಎನ್ನಲಾಗಿದೆ. ಅದರಲ್ಲಿ ಒಂದು ಎಸ್‌ಟಿ ಸ್ಥಾನವೂ ಸೇರಿದ್ದು, ಒಟ್ಟು 24 ಶಾಸಕರು. ಮತ್ತು ಟಿವಿಕೆ ಬೆಂಬಲಿಸಿದ ಇತರ ಪಕ್ಷಗಳ 13 ಶಾಸಕರಲ್ಲೂ ಐವರು ದಲಿತ ಸಮುದಾಯದ ಶಾಸಕರು ಎನ್ನಲಾಗಿದೆ.
ಟಿವಿಕೆ 23 ಎಸ್‌ಸಿ ಶಾಸಕರನ್ನು ಹೊಂದಿದೆ. ಇತ್ತೀಚಿನ ಚುನಾವಣೆಯಲ್ಲಿ ಟಿವಿಕೆ 44 ಮೀಸಲು ಸ್ಥಾನಗಳಲ್ಲಿ 24 ಸ್ಥಾನಗಳಲ್ಲಿ ಜಯಗಳಿಸಿತು, ಅದರಲ್ಲಿ ಒಂದು ಎಸ್‌ಟಿ ಸ್ಥಾನವೂ ಸೇರಿದೆ, ಟಿವಿಕೆಯನ್ನು ಬೆಂಬಲಿಸಿದ ಇತರ ಪಕ್ಷಗಳ 13 ಶಾಸಕರಲ್ಲಿ ಐದು ಶಾಸಕರು ಸಹ ಎಸ್‌ಸಿ ಸಮುದಾಯದವರು, (ಏಜೆನ್ಸೀಸ್).