ದೆಹಲಿ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಮತ್ತು ಪೊಲೀಸರ ಭದ್ರತೆ CJP protest and police security at Delhi's Jantar Mantar
ದೇಶ

ಅನುಮತಿ ಇಲ್ಲದಿದ್ದರೂ CJP ಪ್ರತಿಭಟನೆ: SIR, ಜ್ಞಾನೇಶ್ ಕುಮಾರ್ ವಿರುದ್ಧ ಹೋರಾಟ; ದೆಹಲಿಯಲ್ಲಿ ಪೊಲೀಸರ ಕಟ್ಟೆಚ್ಚರ! CJP Protest

SIR ರದ್ದು ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ದೆಹಲಿಯಲ್ಲಿ ಪ್ರತಿಭಟನೆಗೆ ಸಜ್ಜಾಗಿದೆ. ಅನುಮತಿ ನಿರಾಕರಿಸಿದ ಪೊಲೀಸರು ಕಟ್ಟೆಚ್ಚರ ವಹಿಸಿದ್ದು, 57 ಮೆಟ್ರೋ ನಿಲ್ದಾಣಗಳು ಬಂದ್ ಆಗುವ ಸಾಧ್ಯತೆಯಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ವಿಶೇಷ ಪರಿಷ್ಕರಣೆ (SIR) ಯನ್ನು ಕೂಡಲೇ ನಿಲ್ಲಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕೆಂದು ಕಾಕ್ರೋಚ್​ ಜನತಾ ಪಾರ್ಟಿ ಆಗ್ರಹಿಸಿ, ಶನಿವಾರ (ಅಕ್ಟೋಬರ್​ 10) ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ.

ಆದರೆ, ಈ ಪ್ರತಿಭಟನೆ ನಡೆಸಲು ಜಂತರ್​-ಮಂತರ್​ನಲ್ಲಿ ನಡೆಸಲು ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಜಂಟಿ ಪೊಲೀಸ್​ ಆಯುಕ್ತೆ ನುಪೂರ್ ಪ್ರಸಾದ್​ ತಿಳಿಸಿದ್ದಾರೆ. ಕಾಕ್ರೋಚ್​ ಜನತಾ ಪಾರ್ಟಿ ವಕ್ತಾರ, ಸೌರವ್​ ದಾಸ್​ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಅಕ್ಟೋಬರ್​ 7 ರಂದು ಮನವಿ ಸಲ್ಲಿಸಿದ್ದರು. ಆದರೆ ಇಷ್ಟು ಕಡಿಮೆ ಅವಧಿಯನ್ನು ಮನವಿಯನ್ನು ಒಪ್ಪಿಕೊಂಡು, ಪ್ರತಿಭಟನೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ದೆಹಲಿಯಲ್ಲಿ ಯಾವುದೇ ಪ್ರತಿಭಟನೆ ನಡೆಸುವ ಪೂರ್ವದಲ್ಲಿ ಹತ್ತು ದಿನಗಳ ಮುಂಚಿತವಾಗಿ ಮನವಿ ಸಲ್ಲಿಸಬೇಕು. ನಂತರ ಅವರ ಪ್ರತಿಭಟನೆ ಸ್ವರೂಪವನ್ನು ಪರಿಶೀಲಿಸಿ, ಅಗತ್ಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡ ನಂತರದಲ್ಲಿ ಪೊಲೀಸ್ ಇಲಾಖೆ ಅನುಮತಿ ನೀಡುತ್ತದೆ ಎಂದು ಪೊಲೀಸ್​ ಆಯುಕ್ತರು ತಿಳಿಸಿದ್ದಾರೆ.

ಜನರಿಗೆ ತೊಂದರೆ ಕೊಟ್ಟರೆ ಕಾನೂನು ಕ್ರಮ!

ನಾಳೆ ದೆಹಲಿಯಲ್ಲಿ ನಡೆಯಲಿರುವ ಸಿಜೆಪಿ ಪ್ರತಿಭಟನೆ ಕುರಿತು ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪೊಲೀಸ್​ ಆಯುಕ್ತೆ, ನುಪೂರ್​ ಪ್ರಸಾದ್​​, ಪೊಲೀಸರ ಅನುಮತಿ ಇಲ್ಲದೆ ಹೋದರೂ ಈ ಪ್ರತಿಭಟನೆ ನಡೆಯಲಿದೆ ಎನ್ನುವುದು ನಮಗೆ ತಿಳಿದಿದೆ. ಆದರೆ, ಈ ಪ್ರತಿಭಟನೆ ಸಮಯದಲ್ಲಿ ನಾಗರಿಕರಿಗೆ ಮತ್ತು ಸಾರ್ವಜನಿಕ ಆಸ್ತಿಗಳಿಗೆ ಅಥವಾ ಭದ್ರತಾ ಸಿಬ್ಬಂದಿಗಳಿಗೆ ಏನಾದರೂ ಹಾನಿಯುಂಟಾದರೆ, ಪ್ರತಿಭಟನಾಕಾರರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

57 ಮೆಟ್ರೋ ನಿಲ್ದಾಣಗಳು ಬಂದ್​?

ಶನಿವಾರ (ಅ.10) ರಂದು ದೆಹಲಿಯ ಜಂತರ್​-ಮಂತರ್​ನಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಯುವ ಸೂಚನೆ ದೊರೆತಿರುವ ಹಿನ್ನಲೆ, ದೆಹಲಿಯಲ್ಲಿ ಮೆಟ್ರೋ ಸಂಚಾರದಲ್ಲಿ ಭಾರೀ ವ್ಯತ್ಯಯ ಉಂಟಾಗಲಿದ್ದು, ಸುಮಾರು 57 ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಸಂಚಾರಕ್ಕೆ ತಡೆ ನೀಡಬೇಕೆಂದು ಪೊಲೀಸ್​ ಇಲಾಖೆ ದೆಹಲಿ ಮೆಟ್ರೋ ಕಾರ್ಪೋರೇಷನ್​ಗೆ ಮನವಿ ಸಲ್ಲಿಸಿದೆ ಎನ್ನಲಾಗಿದೆ.

ಹೊರ ರಾಜ್ಯದಿಂದ ಕೂಡ ಪ್ರತಿಭಟನಾಕಾರರು ಆಗಮಿಸುತ್ತಿರುವ ಹಿನ್ನಲೆ, ಈ 57 ಮೆಟ್ರೋ ನಿಲ್ದಾಣಗಳ ಎಂಟ್ರಿ ಹಾಗೂ ಎಕ್ಸಿಟ್​ ಗೇಟ್​ಗಳನ್ನು ಬಂದ್​ ಮಾಡುವಂತೆ ಪೊಲೀಸ್​ ಇಲಾಖೆ ಮೆಟ್ರೋ ಕಾರ್ಪೋರೇಷನ್​ಗೆ ನಿರ್ದೇಶನ ನೀಡಿದೆ. ಆದರೆ ಈ ಬಗ್ಗೆ ಮೆಟ್ರೋ ಕಾರ್ಪೋರೇಷನ್​ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ, (ಏಜೆನ್ಸೀಸ್​).