ತನಿಖಾ ಪರ್ತಕರ್ತ ಸೌರವ್ ದಾಸ್, ಐಐಟಿಯನ್ ಅಶುತೋಷ್ ಮತ್ತು ಲೇಖಕ ವಿಜೇತಾ ದಹಿಯಾ ವಕ್ತಾರರಾಗಿ ಆಯ್ಕೆ
- ಕಾಕ್ರೋಚ್ ಜನತಾ ಪಕ್ಷಕ್ಕೆ (CJP) ಯುವ ಸಾರಥಿಗಳ ನೇಮಕ!
- ತನಿಖಾ ಪರ್ತಕರ್ತ ಸೌರವ್ ದಾಸ್, ಐಐಟಿಯನ್ ಅಶುತೋಷ್ ಮತ್ತು ಲೇಖಕಿ ವಿಜೇತಾ ದಹಿಯಾ ವಕ್ತಾರರಾಗಿ ಆಯ್ಕೆ
- ಜಂತರ್ ಮಂತರ್ ಧರಣಿಗೆ ವಾಂಗ್‌ಚುಕ್ ಸಪೋರ್ಟ್!
- ಶನಿವಾರ ಜಂತರ್ ಮಂತರ್ ನಲ್ಲಿ ನೀಟ್ ಪತ್ರಿಕರ ಸೋರಿಕೆ ವಿರೋಧಿಸಿ ಧರಣಿ
ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿರೋ ಕಾಕ್ರೋಚ್ ಜನತಾ ಪಕ್ಷ (Cockroach Janata Party) ಈಗ ದೇಶದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಲು ರೆಡಿಯಾಗಿದೆ.
ಬುಧವಾರ (ಜೂ.3) ಈ ಪಾರ್ಟಿ ಮೂವರು ಪ್ರಮುಖ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್‌ಗಳನ್ನು (Influencers) ತನ್ನ ಅಧಿಕೃತ ವಕ್ತಾರರನ್ನಾಗಿ (CJP Appoints Spokespersons) ಘೋಷಿಸಿದೆ. ಈ ವಿಷಯವನ್ನು ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ತಿಳಿಸಿದ್ದಾರೆ.
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಶನಿವಾರ (ಜೂ.6) ಜಂತರ್ ಮಂತರ್‌ನಲ್ಲಿ ಈ ಯುವ ಪಡೆ ಬೃಹತ್ ಧರಣಿ ಹಮ್ಮಿಕೊಂಡಿದೆ. ಇದಕ್ಕೆ ಖ್ಯಾತ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಬೆಂಬಲ ಘೋಷಿಸಿದ ಬೆನ್ನಲ್ಲೇ ಈ ಮೂವರನ್ನು ಪಾರ್ಟಿಯ ವಕ್ತಾರರೆಂದು ಘೋಷಿಸಿದೆ.
ಮುಖ್ಯ ವಕ್ತಾರರಾಗಿ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ ಸೌರವ್ ದಾಸ್ ಎಂಟ್ರಿ!
ಕಳೆದ ತಿಂಗಳು ಇಂಟರ್ನೆಟ್‌ನಲ್ಲಿ ತಲ್ಲಣ ಸೃಷ್ಟಿಸಿದ್ದ ತನಿಖಾ ಪತ್ರಕರ್ತ ಸೌರವ್ ದಾಸ್ ಈಗ ಕಾಕ್ರೋಚ್ ಜನತಾ ಪಕ್ಷದ ಮುಖ್ಯ ವಕ್ತಾರರಾಗಿ ನೇಮಕವಾಗಿದ್ದಾರೆ. ಇವರು ವರ್ಷಗಳಿಂದ ದೇಶದ ಪ್ರಮುಖ ಕಾನೂನು, ನ್ಯಾಯಾಂಗ ಮತ್ತು ಸಾಮಾಜಿಕ ಹಗರಣಗಳನ್ನು ಬಯಲು ಮಾಡುತ್ತಿರುವ ಪತ್ರಕರ್ತರಾಗಿದ್ದಾರೆ. ನವೆಂಬರ್ 2025 ರಲ್ಲಿ ಇಂಡಿಯಾ ಗೇಟ್‌ನಲ್ಲಿ ನಡೆದ ಮಾಲಿನ್ಯ ವಿರೋಧಿ ಪ್ರೊಟೆಸ್ಟ್‌ನ ಮಾಸ್ಟರ್ ಮೈಂಡ್ ಕೂಡ ಇವರೇ ಆಗಿದ್ದರು.
ಯೂತ್ ಐಕಾನ್ ವಿಜೇತಾ ದಹಿಯಾ ಸಾರಥ್ಯ
ಸೌರವ್ ದಾಸ್ ಜೊತೆ ವಕ್ತಾರರಾಗಿ ಕೈಜೋಡಿಸಿರೋ ಮತ್ತೊಬ್ಬರೆಂದರೆ ಅದು ವಿಜೇತಾ ದಹಿಯಾ. ಇವರು ಕೇವಲ ರಾಜಕೀಯ ಸಂಶೋಧಕಿ ಮಾತ್ರವಲ್ಲ; ಬೆಸ್ಟ್ ಸೆಲ್ಲರ್ ಪುಸ್ತಕಗಳನ್ನು ಬರೆದ ಲೇಖಕಿ ಮತ್ತು ಚಲನಚಿತ್ರ ನಿರ್ಮಾಪಕಿ ಕೂಡ ಹೌದು. ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದ ಸ್ಟೂಡೆಂಟ್ ಆಗಿರೋ ವಿಜೇತಾ, ರಾಜಕೀಯ ರಣತಂತ್ರ ಹೆಣೆಯುವಲ್ಲಿ ಎಕ್ಸ್‌ಪರ್ಟ್. ಇವರ ಎಂಟ್ರಿಯಿಂದ ಯುವತಿಯರ ಮತ್ತು ವಿದ್ಯಾರ್ಥಿಗಳ ದೊಡ್ಡ ಬಳಗವೇ ಈ ಗ್ರೂಪ್ ಕಡೆ ತಿರುಗಿ ನೋಡುವಂತೆ ಮಾಡಲಿದೆ ಎನ್ನುವುದು CJP ಲೆಕ್ಕಾಚಾರವಾಗಿದೆ.
ಐಐಟಿಯನ್ ಅಶುತೋಷ್ ರಂಕಾ ಸಾಥ್
ಇನ್ನು ಮೂರನೇ ವಕ್ತಾರರಾಗಿ ಐಐಟಿ ಕಾನ್ಪುರ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಹಳೆಯ ವಿದ್ಯಾರ್ಥಿ ಅಶುತೋಷ್ ರಂಕಾ. ಜಾಗತಿಕ ಮ್ಯಾನೇಜ್‌ಮೆಂಟ್ ಕನ್ಸಲ್ಟಿಂಗ್ ಸಂಸ್ಥೆ ಮೆಕಿನ್ಸೆಯಲ್ಲಿ ಇಂಟರ್ನ್ಯಾಷನಲ್ ಕಂಪನಿಗಳಿಗೆ ಫೈನಾನ್ಷಿಯಲ್ ಸ್ಟ್ರಾಟಜಿ ಹೇಳಿಕೊಡುತ್ತಿದ್ದ ರಂಕಾ, ಕಳೆದ ವರ್ಷ ಭಾರತಕ್ಕೆ ವಾಪಸ್ ಆಗಿದ್ದಾರೆ.
ಜೈಪುರದಲ್ಲಿ ನಡೆದ ಡೋಲ್ ಕಾ ಬಾದ್ ಪ್ರೊಟೆಸ್ಟ್, ಅಮೈರಾ ಆತ್ಮಹತ್ಯೆ ಪ್ರಕರಣ ಮತ್ತು ದೇಶಾದ್ಯಂತ ಸದ್ದು ಮಾಡಿದ್ದ ನೀಟ್ ಪೇಪರ್ ಲೀಕ್ ಹಗರಣಗಳ ವಿರುದ್ಧ ಯುವ ಚಳವಳಿಗಳನ್ನು ಮುನ್ನಡೆಸಿದ ಕ್ರೆಡಿಟ್ ಇವರಿಗೆ ಸಲ್ಲುತ್ತದೆ.
ಶನಿವಾರ ಜಂತರ್ ಮಂತರ್‌ನಲ್ಲಿ ಏನಾಗಲಿದೆ?
ಕಾಕ್ರೋಚ್ ಜನತಾ ಪಕ್ಷ ಕೇವಲ ಸೋಷಿಯಲ್ ಮೀಡಿಯಾಗೆ ಸೀಮಿತವಾಗಿಲ್ಲ, ರೋಡ್‌ಗೆ ಇಳಿದು ಫೈಟ್ ಮಾಡ್ತೀವಿ ಅನ್ನೋದನ್ನ ಸಾಬೀತುಪಡಿಸಲು ಶನಿವಾರ (ಜೂ.6) ಜಂತರ್ ಮಂತರ್‌ನಲ್ಲಿ ಧರಣಿ ಹಮ್ಮಿಕೊಂಡಿದೆ. ಶಿಕ್ಷಣ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿರೋ ಈ ಯುವ ಶಕ್ತಿಗೆ ಈಗ ಸೋನಮ್ ವಾಂಗ್‌ಚುಕ್ ಆಶೀರ್ವಾದವೂ ಸಿಕ್ಕಿದೆ.
ಲಕ್ಷಾಂತರ ಫಾಲೋವರ್ಸ್ ಇರೋ ಈ ಮೂವರು ಇನ್ಫ್ಲುಯೆನ್ಸರ್‌ಗಳು ವಕ್ತಾರರಾಗಿ ಅಖಾಡಕ್ಕೆ ಇಳಿದಿರುವುದರಿಂದ, ಶನಿವಾರದ ಪ್ರತಿಭಟನೆ ಇಂಟರ್ನೆಟ್ ಹಾಗೂ ದೆಹಲಿ ಬೀದಿಗಳಲ್ಲಿ ತಲ್ಲಣ ಸೃಷ್ಟಿಸುವುದು ಗ್ಯಾರಂಟಿ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ, (ಏಜನ್ಸೀಸ್).