ವಿದ್ಯಾರ್ಥಿಗಳಿಂದ ಖಡ್ಗ ಹಿಡಿದು 'ಸರ್ ತನ್ ಸೇ ಜುದಾ' ಹಾಡಿಗೆ ನೃತ್ಯ
- ವಿದ್ಯಾರ್ಥಿಗಳಿಂದ ಖಡ್ಗ ಹಿಡಿದು 'ಸರ್ ತನ್ ಸೇ ಜುದಾ' ಹಾಡಿಗೆ ನೃತ್ಯ
- ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲೆಯಲ್ಲಿ ನಡೆದ ಘಟನೆ
- ವಿಡಿಯೋ ವೈರಲ್ ಬೆನ್ನಲ್ಲೇ ಶಾಲಾ ಅಧ್ಯಕ್ಷರು, ಶಿಕ್ಷಕರ ವಿರುದ್ಧ ಎಫ್‌ಐಆರ್ ದಾಖಲು
ಪಾರ್ತೂರ್: ಮಹಾರಾಷ್ಟ್ರದ ಜಲ್ನಾದಲ್ಲಿ ಶಾಲಾ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳು ಖಡ್ಗವನ್ನು ಜಳಪಿಸುತ್ತಾ, ಸರ್ ತನ್ ಸೇ ಜುಧಾ (Sar Tan Se Juda Viral Video) ಹಾಡಿಗೆ ನೃತ್ಯ ಪ್ರದರ್ಶನ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ನೃತ್ಯವು ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳದಲ್ಲಿ ನಡೆದಿದ್ದು, ಇದರ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆದ ಬೆನ್ನಲ್ಲೆ ಪ್ರಕರಣ ದಾಖಲಾಗಿದೆ.
ಏನಿದು ವಿವಾದ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಜಲ್ನಾ ಜಿಲ್ಲೆಯ ಪಾರ್ತೂರ್ನಲ್ಲಿರುವ ಖಾಸಗಿ ಶಾಲೆಯಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ.
ಈ ನೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದಂತೆ ಜನರ ಆಕ್ರೋಶ ಭುಗಿಲೆದ್ದ ಪರಿಣಾಮ ಶಾಲೆಯ ಅಧ್ಯಕ್ಷ, ಶಿಕ್ಷಕರು ಮತ್ತು ಕಾರ್ಯಕ್ರಮದ ನಿರೂಪಕನ ಮೇಲೆ ಪಾರ್ತೂರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಶಾಲೆಯ ಕಾರ್ಯಕ್ರಮದಲ್ಲಿ ಈ ಹಾಡಿಗೆ ಹಾಗೂ ನೃತ್ಯ ಪ್ರದರ್ಶನಕ್ಕೆ ಯಾರು? ಏಕೆ? ಅನುಮತಿ ನೀಡಿದರು ಎಂಬ ಕುರಿತು ವಿಚಾರಣೆ ನಡೆಯುತ್ತಿದೆ.
ಹೆಚ್ಚಿದ ಜನಾಕ್ರೋಶ!
ಈ ಸರ್ ತನ್ ಸೇ ಜುಧಾ ಹಾಡಿನ ವಿಡಿಯೋ ವೈರಲ್ ಆಗುತ್ತಿದ್ದಂತೆ ಜನರ ಆಕ್ರೋಶ ಹೆಚ್ಚಾಗಿದೆ. ನಮ್ಮ ಮಕ್ಕಳು ಶಾಲೆಯಲ್ಲಿ ದೇಶಪ್ರೇಮವನ್ನು ಕಲಿಯಲು ಕಲಿಸಿದರೆ, ಇಲ್ಲಿ ಹೊಡಿ, ಕೊಲೆ ಮಾಡಿ ಎನ್ನುವುದನ್ನು ಪ್ರೋತ್ಸಾಹಿಸುತ್ತಿದ್ದಾರೆಂದು ಹೇಳುತ್ತಿದ್ದಾರೆ.
ಶಾಲಾ ಕಾರ್ಯಕ್ರಮದಲ್ಲಿ ಈ ಕೋಮು ವಿರೋಧಿ ಹಾಡನ್ನು ಹಾಕಿ, ನೃತ್ಯ ಮಾಡಲು ಅವಕಾಶ ನೀಡಿದ ಶಾಲೆಯನ್ನು ಮೊದಲು ಮುಚ್ಚಬೇಕು. ಈ ಶಾಲೆಗೆ ಯಾರು ನಿಮ್ಮ ಮಕ್ಕಳನ್ನು ಕಳುಹಿಸಬೇಡಿ ಎಂದು ಕೆಲವರು ಒತ್ತಾಯಿಸಿದ್ದಾರೆ, (ಏಜನ್ಸೀಸ್).