ಬಿಸಿಲಿನ ಹೊಡೆತಕ್ಕೆ ಪ್ರಜ್ಞೆ ತಪ್ಪಿದ ತಾಯಿಯನ್ನು ರಕ್ಷಿಸಲು ಹೋರಾಡಿದ ಮಗು: ವಿಡಿಯೋ ನೋಡಿದ್ರೆ ಕಣ್ತುಂಬಿ ಬರುತ್ತೆ! Child Struggle to Save Mother  
ದೇಶ

ಬಿಸಿಲಿನ ಹೊಡೆತಕ್ಕೆ ಪ್ರಜ್ಞೆ ತಪ್ಪಿದ ತಾಯಿಯನ್ನು ರಕ್ಷಿಸಲು ಹೋರಾಡಿದ ಮಗು: ವಿಡಿಯೋ ನೋಡಿದ್ರೆ ಕಣ್ತುಂಬಿ ಬರುತ್ತೆ! Child Struggle to Save Mother

ಪ್ರಮುಖ ಮುಖ್ಯಾಂಶಗಳು

  • ಬಿಸಿಲಿನ ಹೊಡೆತಕ್ಕೆ ಸಿಲುಕಿ ರಸ್ತೆಯಲ್ಲಿ ಪ್ರಜ್ಞೆ ತಪ್ಪಿದ ತನ್ನ ತಾಯಿಯನ್ನು ರಕ್ಷಿಸಲು ಮಗುವಿನ ಹೋರಾಟ
  • ತನ್ನ ಪಾದಗಳು ಸುಡುತ್ತಿದ್ದರೂ ಅದನ್ನು ಲೆಕ್ಕಿಸದೇ ತನ್ನ ತಾಯಿಗೆ ನೀರು ತಂದು ಎಬ್ಬಿಸಲು ಪ್ರಯತ್ನ
  • ತಾಯಿಯ ಬಾಯಿಗೆ ನೀರು ಸುರಿಯುವುದನ್ನು ನೋಡಿದರೆ ಎಂತಹ ಕಲ್ಲು ಹೃದಯವು ಕೂಡ ಕರಗದೇ ಇರದು
  • ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಮನಕಲಕುವ ವಿಡಿಯೋ ನೋಡಿ ಕಂಬನಿ ಮಿಡಿದ ನೆಟ್ಟಿಗರು
Child Struggle to Save Mother : ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದು ನೆಟ್ಟಿಗರು ಕಣ್ಣುಗಳಲ್ಲಿ ನೀರು ತರಿಸಿದೆ. ಬಿಸಿಲಿನ ಹೊಡೆತಕ್ಕೆ ಸಿಲುಕಿ ರಸ್ತೆಯಲ್ಲಿ ಪ್ರಜ್ಞೆ ತಪ್ಪಿದ ತನ್ನ ತಾಯಿಯನ್ನು ರಕ್ಷಿಸಲು ಎಂಟು ವರ್ಷದ ಮಗನ ಹೋರಾಟವನ್ನು ನೋಡಿ ಎಲ್ಲರ ಹೃದಯ ಕರಗಿದೆ. ಅಲ್ಲದೆ, ರಸ್ತೆಯಲ್ಲಿ ತನ್ನ ತಾಯಿಗಾಗಿ ಮಗುವಿನ ಹೋರಾಟ ಎಲ್ಲರನ್ನೂ ಯೋಚಿಸುವಂತೆಯೂ ಮಾಡಿದೆ.
ರಸ್ತೆಯ ಬದಿಯಲ್ಲಿ ಬಿಸಿಲಿನ ತಾಪವನ್ನು ಸಹಿಸಲಾಗದೆ ಒಬ್ಬ ಮಹಿಳೆ ಪ್ರಜ್ಞಾಹೀನಳಾಗಿ ಬಿದ್ದಿದ್ದಳು. ವಾಹನಗಳು ಹಾದುಹೋಗುತ್ತಿದ್ದರೂ ಯಾರೊಬ್ಬರು ಆಕೆಯತ್ತ ಗಮನ ಹರಿಸಲೇ ಇಲ್ಲ. ಆ ಸಮಯದಲ್ಲಿ, ಆಕೆಯ ಎಂಟು ವರ್ಷದ ಮಗ, ಚಪ್ಪಲಿಯೂ ಇಲ್ಲದೇ, ಸುಡುವ ಬಿಸಿಲಿನಲ್ಲಿ ನೀರಿಗಾಗಿ ಓಡಿದನು. ತನ್ನ ಪಾದಗಳು ಸುಡುತ್ತಿದ್ದರೂ ಅದನ್ನು ಲೆಕ್ಕಿಸದೇ ತನ್ನ ತಾಯಿಗೆ ನೀರು ತಂದು ಎಬ್ಬಿಸಲು ಪ್ರಯತ್ನಿಸಿದನು.
ಪ್ರಜ್ಞೆ ತಪ್ಪಿ ರಸ್ತೆಯಲ್ಲಿ ಬಿದ್ದ ತನ್ನ ತಾಯಿಗೆ ಮತ್ತೆ ಪ್ರಜ್ಞೆಗೆ ತರಲು ಹೋರಾಡುತ್ತಾ, ಆಕೆಯ ಬಾಯಿಗೆ ನೀರು ಸುರಿಯುವುದನ್ನು ನೋಡಿದರೆ ಎಂತಹ ಕಲ್ಲು ಹೃದಯವು ಕೂಡ ಕರಗದೇ ಇರದು.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಮಗುವಿನ ಸ್ಥಿತಿಯ ಬಗ್ಗೆ ತುಂಬಾ ವಿಷಾದ ವ್ಯಕ್ತಪಡಿಸಿರುವ ನೆಟ್ಟಿಗರು, ಈ ವಿಡಿಯೋ ಶೂಟ್​ ಮಾಡಿದ ವ್ಯಕ್ತಿಯನ್ನು ಟೀಕಿಸುತ್ತಿದ್ದಾರೆ. ಸಹಾಯ ಮಾಡಬೇಕಾದ ಸಮಯದಲ್ಲಿ ವಿಡಿಯೋ ಮಾಡುವುದೇ ಸರಿಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ಇದು ಕೇವಲ ವೀವ್ಸ್​ಗಾಗಿ ಮಾಡಿದ ಸ್ಕ್ರಿಪ್ಟೆಡ್​ ವಿಡಿಯೋ ಎಂದು ವಾದಿಸಿದ್ದಾರೆ. ಏನೇ ಇರಲಿ ಕೆಲವರು ಮಾತ್ರ ಹುಡುಗನ ನಿಜವಾದ ತಾಯಿಯ ಪ್ರೀತಿಯನ್ನು ಹೊಗಳುತ್ತಿದ್ದಾರೆ.
ಅಂದಹಾಗೆ, ದೇಶಾದ್ಯಂತ ಪ್ರಸ್ತುತ ಬಿಸಿಲು ಸುಡುತ್ತಿದೆ. ಬಿಸಿಲಿನ ಹೊಡೆತದಿಂದ ಅನೇಕ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ, ರಸ್ತೆಯಲ್ಲಿ ಯಾರಾದರೂ ಅಪಾಯದಲ್ಲಿದ್ದರೆ ವಿಡಿಯೋಗಳನ್ನು ಮಾಡುವುದನ್ನು ನಿಲ್ಲಿಸಿ ಮತ್ತು ಪ್ರಥಮ ಚಿಕಿತ್ಸೆ ನೀಡುವಂತೆ ಸಾಮಾಜಿಕ ಕಾರ್ಯಕರ್ತರು ಜನರನ್ನು ಕೇಳುತ್ತಿದ್ದಾರೆ.
ಇನ್ನೂ ಚಿಕ್ಕ ಮಕ್ಕಳು ಬಿಸಿಲಿನಲ್ಲಿ ಬರಿಗಾಲಿನಲ್ಲಿ ನಡೆದರೆ ಗಂಭೀರ ಗಾಯಗಳಾಗಬಹುದು ಎಂದು ಎಚ್ಚರಿಸಿದ್ದಾರೆ. ಸದ್ಯ ಈ ವಿಡಿಯೋ ಮಕ್ಕಳು ತಮ್ಮ ತಾಯಂದಿರ ಮೇಲೆ ಹೊಂದಿರುವ ಅಪಾರ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ಈ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್​).