ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ಹಾಸ್ಯನಟ ರಾಜ್‌ಪಾಲ್ ಯಾದವ್ ಅಪರಾಧಿ
- ಚೆಕ್ ಬೌನ್ಸ್ ಪ್ರಕರಣದಲ್ಲಿ ಬಾಲಿವುಡ್ ಹಾಸ್ಯನಟ ರಾಜ್‌ಪಾಲ್ ಯಾದವ್‌ಗೆ ಶಿಕ್ಷೆ
- 3 ತಿಂಗಳ ಜೈಲು ಶಿಕ್ಷೆ ಹಾಗೂ ಒಟ್ಟು 7.35 ಕೋಟಿ ರೂ. ಭಾರಿ ದಂಡ ವಿಧಿಸಿದ ದೆಹಲಿ ಹೈಕೋರ್ಟ್
- 7 ಪ್ರತ್ಯೇಕ ಚೆಕ್ ಬೌನ್ಸ್ ಪ್ರಕರಣಗಳಲ್ಲಿ ದೋಷಿ ಎಂದು ತೀರ್ಮಾನಿಸಿದ ನ್ಯಾಯಾಲಯ
ನವದೆಹಲಿ: ಚೆಕ್ ಬೌಂನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಾಸ್ಯನಟ ರಾಜ್‌ಪಾಲ್ ಯಾದವ್ (Rajpal Yadav Jailed) ದೋಷಿ ಎಂದು ತೀರ್ಮಾನಿಸಿರುವ ದೆಹಲಿ ಹೈಕೋರ್ಟ್ ಮೂರು ತಿಂಗಳ ಕಾರಾಗೃಹದ ಶಿಕ್ಷೆಯನ್ನು ಪ್ರಕಟಿಸಿದೆ.
ಮತ್ತೆ ಜೈಲು ಪಾಲಾದ ರಾಜ್‌ಪಾಲ್!
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್‌ಪಾಲ್ ಯಾದವ್ ಸಂಬಂಧಿಗಳ ಮದುವೆ ಹಿನ್ನಲೆ ಮಾರ್ಚ್ 18 ರಂದು ನ್ಯಾಯಾಲಯದಿಂದ ಜಾಮೀನನ್ನು ಪಡೆದುಕೊಂಡಿದ್ದರು. ಹಾಗೆಯೇ ಇತ್ತೀಚೆಗೆ ಬಿಡುಗಡೆಯಾಗಿದ್ದ ಅಕ್ಷಯ್ ಕುಮಾರ್ ನಟನೆಯ ವೆಲ್ಕಮ್ ಟು ಜಂಗಲ್ ಎಂಬ ಸಿನಿಮಾದಲ್ಲಿ ರಾಜ್‌ಪಾಲ್ ಯಾದವ್ ಕಾಣಿಸಿಕೊಂಡಿದ್ದರು. ಇಂದು (ಜು.10) ದೆಹಲಿ ಹೈಕೋರ್ಟ್ ರಾಜ್‌ಪಾಲ್ ಯಾದವ್ ಚೆಕ್ ಬೌಂನ್ಸ್ ಪ್ರಕರಣದಲ್ಲಿ ಆರೋಪಿ ಎಂದು ತೀರ್ಮಾನಿಸಿರುವ ಹಿನ್ನಲೆ ಮೂರು ತಿಂಗಳು ಜೈಲಿನಲ್ಲಿ ಶಿಕ್ಷೆ ಅನುಭವಿಸ ಬೇಕಾಗಿದೆ.
ಭಾರಿ ಮೊತ್ತದ ದಂಡ ವಿಧಿಸಿದ ನ್ಯಾಯಾಲಯ!
ದೆಹಲಿ ಹೈಕೋರ್ಟ್ ರಾಜ್‌ಪಾಲ್ ಮೇಲೆ ದಾಖಲಾಗಿರುವ ಒಟ್ಟು ಏಳು ಪ್ರಕರಣಗಳಿಗೆ ಸೇರಿ ತೀರ್ಪನ್ನು ಪ್ರಕಟಿಸಿದೆ. ತಲಾ ಒಂದು ಪ್ರಕರಣಕ್ಕೆ 1.05 ಕೋಟಿ ರೂ. ದಂಡದಂತೆ ಏಳು ಪ್ರಕರಣಗಳಿಗೆ ಒಟ್ಟು 7.35 ಕೋಟಿ ರೂ. ದಂಡ ಪಾವತಿಸಬೇಕಾಗಿದೆ. ಹಾಗೆಯೇ ದೂರುದಾರರಿಗೆ ಅವರ 1,04,75,000 (ಒಂದು ಕೋಟಿ ನಾಲ್ಕು ಲಕ್ಷದ ಎಪ್ಪತ್ತೈದು ಸಾವಿರ) ವನ್ನು ನೀಡಬೇಕಿದ್ದು, ತಲಾ ಪ್ರಕರಣದಲ್ಲಿ ರಾಜ್ಯಕ್ಕೆ 25,000 ದಂಡ ಪಾವತಿಸಬೇಕೆಂದು ಕೋರ್ಟ್ ಹೇಳಿದೆ.
ನನಗೆ ಒಂದು ಅವಕಾಶವನ್ನು ನೀಡಿ!
ನ್ಯಾಯಾಲಯ ತೀರ್ಪನ್ನು ಪ್ರಕಟಿಸುತ್ತಿದ್ದಂತೆ ಭಾವುಕರಾದ ನಟ ರಾಜ್‌ಪಾಲ್ ಯಾದವ್, ನನಗೆ ಮುಂದಿನ ದಿನಗಳಲ್ಲಿ ಸಿನಿಮಾ ಹಾಗೂ ರಿಯಾಲಿಟಿ ಶೋ ಸೇರಿದಂತೆ ಅನೇಕ ಅವಕಾಶಗಳು ದೊರೆಯಲಿದ್ದವು. ಆದರೆ ಈಗ ಶಿಕ್ಷೆ ಆಗಿರುವ ಕಾರಣ ಅವೆಲ್ಲಾ ಕೈತಪ್ಪಿ ಹೋಗಬಹುದು. ನನಗೆ ಈ ಪ್ರಕರಣದಲ್ಲಿ ಒಂದು ಅವಕಾಶ ನೀಡಬೇಕೆಂದು ದೆಹಲಿ ಸಿಎಂ ರೇಖಾ ಗುಪ್ತಾ ಅವರಲ್ಲಿ ಮನವಿ ಮಾಡುತ್ತೆನೆಂದು ಹೇಳಿದ್ದಾರೆ.
2010 ರಲ್ಲಿ ರಾಜ್‌ಪಾಲ್ ಯಾದವ್ ಅತಾ ಪತಾ ಲಾಪತಾ ಎಂಬ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ದೇಶಿಸಲು, ಮುರಳಿ ಪ್ರಾಜೆಕ್ಟ್ ಎಂಬ ಸಂಸ್ಥೆಯಿಂದ 5 ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.
ಆದರೆ ಬಿಡುಗಡೆಯಾದ ಈ ಸಿನಿಮಾ ನೆಲಕಚ್ಚಿದ ಪರಿಣಾಮ, ಹಣವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯವಕಾಶ ನೀಡಿದ ಬಳಿಕವು ರಾಜ್‌ಪಾಲ್ ಹಣವನ್ನು ಮರಳಿ ನೀಡದಿದ್ದಾಗ, ಮುರಳಿ ಪ್ರಾಜೆಕ್ಟ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ನ್ಯಾಯಾದಲ್ಲಿ ಸಹ ರಾಜ್‌ಪಾಲ್ ಹಣವನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ಮೇಲೂ, ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾದರು.
ಕೊನೆಗೆ ಪ್ರಕರಣ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದಾಗ ರಾಜ್‌ಪಾಲ್, ನನ್ನ ಬಳಿ ಹಣವಿಲ್ಲ, ಇದ್ದರೆ ಖಂಡಿತವಾಗಿ ಇವರ ಹಣವನ್ನು ಹಿಂದಿರುಗಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದಾಗ, ನ್ಯಾಯಾಲಯ ನೀವು ಹಣವನ್ನು ಮರು ಪಾವತಿ ಮಾಡುವವರೆಗೆ ಜೈಲಿನಲ್ಲಿ ಇರಿ ಎಂದು ಹೇಳಿ, ರಾಜ್ಪಾಲ್ನನ್ನು ತಿಹಾರ್ ಜೈಲಿಗೆ ಶರಣಾಗುವಂತೆ ಆದೇಶಿಸಿತು, (ಏಜನ್ಸೀಸ್).