- ತುಂಬ ದಿನಗಳ ಬಳಿಕ ಚಿನ್ನ-ಬೆಳ್ಳಿ ಬೆಲೆಗಳಲ್ಲಿ ಇಳಿಕೆ
- ದಾಖಲೆ ಮಟ್ಟದಲ್ಲಿ ಏರುತ್ತಿದ್ದ ಬೆಳ್ಳಿಗೆ ಇಂದು ಕೊಂಚ ವಿರಾಮ
- ಖರೀದಿದಾರರಿಗೂ ಕೊಂಚ ಸಮಾಧಾನ
ನವದೆಹಲಿ: ಕಳೆದ ವರ್ಷ ದೀಪಾವಳಿ ಹಬ್ಬದ ನಂತರದಿಂದ ಶುರುವಾದ ಚಿನ್ನ-ಬೆಳ್ಳಿ ದರದಲ್ಲಿನ ಸತತ ಏರಿಕೆ, ಸಾರ್ವಕಾಲಿಕ ಗರಿಷ್ಠ ದಾಖಲೆಯ ಮಟ್ಟವನ್ನು ಮೀರಿ ಹೊಸ ದಾಖಲೆಯತ್ತ ಸಾಗುತ್ತಿರುವುದು ಸದ್ಯ ಚಿನ್ನದಂತ ಗ್ರಾಹಕರಲ್ಲಿ ಆತಂಕ ಹುಟ್ಟುಹಾಕಿದೆ.
ದಿನ ಕಳೆದಂತೆ ಏರಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಂದು ಕೊಂಚ ಇಳಿಕೆ ಕಂಡಿದೆ. 24 ಕ್ಯಾರೆಟ್ 10 ಗ್ರಾಂ ಸ್ವರ್ಣದ ಬೆಲೆ 220 ರೂ. ಕಡಿಮೆಯಾಗಿ, ಬುಲಿಯನ್ ಮಾರುಕಟ್ಟೆಯಲ್ಲಿ 10 ಗ್ರಾಂಗೆ 1,43,400 ರೂ.ಗೆ ತಲುಪಿದೆ. ಅದೇ 22 ಕ್ಯಾರೆಟ್ ಚಿನ್ನವು 200 ರೂ. ಇಳಿದಿದ್ದು, 1,31,450 ರೂ. ಆಗಿದೆ. ಇನ್ನು 18 ಕ್ಯಾರೆಟ್ ಚಿನ್ನವು 170 ರೂ. ಕಡಿಮೆಯಾಗಿದ್ದು, 10 ಗ್ರಾಂಗೆ 1,07,550 ರೂ.ಗೆ ತಲುಪಿದೆ.
ಬೆಳ್ಳಿ 3000 ರೂ. ಇಳಿಕೆ
ಮಿಂಚಿನ ಓಟದಲ್ಲಿದ್ದ ಬೆಳ್ಳಿ ಬೆಲೆ, ಇಂದು 3,000 ರೂ. ಕಡಿಮೆಯಾಗಿದೆ. ಇದರೊಂದಿಗೆ, ಬುಲಿಯನ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಬೆಳ್ಳಿಯ ಬೆಲೆ 2,92,000 ರೂ.ಗೆ ತಲುಪಿದೆ. ಇದೇ ಹೈದರಾಬಾದ್ ಮತ್ತು ಚೆನ್ನೈನಲ್ಲಿ ಕೆಜಿ ಬೆಳ್ಳಿಯ ಬೆಲೆ 3,06,000 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಇನ್ನು ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ ನಗರಗಳಲ್ಲಿ ಬೆಳ್ಳಿಯ ಬೆಲೆ 2,92,000 ರೂ.ಗೆ ತಲುಪಿದೆ,(ಏಜೆನ್ಸೀಸ್).
ಗಮನಿಸಿ: ಮೇಲೆ ತಿಳಿಸಲಾದ ದರಗಳು ಬೆಳಗಿನ ಮಾರುಕಟ್ಟೆಯ ವಿವರ ಆಧರಿಸಿ. ಈ ದರಗಳು ಮಧ್ಯಾಹ್ನದ ನಂತರ ಸಾಕಷ್ಟು ಬದಲಾವಣೆಗೆ ಒಳಪಟ್ಟಿರುತ್ತವೆ