'ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ-2026' ಲೋಕಸಭೆಯಲ್ಲಿ ಅಂಗೀಕಾರ
- ಭಾರತದಲ್ಲಿ ನಡೆಯುವ ಪರೀಕ್ಷೆಗಳಿಗೆ ಶ್ರೀರಕ್ಷೆ ನೀಡಿದ ಕೇಂದ್ರ ಸರ್ಕಾರ
- 'ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ-2026' ಲೋಕಸಭೆಯಲ್ಲಿ ಅಂಗೀಕಾರ
- ಹತ್ತು ವರ್ಷ ಜೈಲು; ಹತ್ತು ಲಕ್ಷ ದಂಡ, ಕಠಿಣ ಕ್ರಮಕ್ಕೆ ಮುಂದಾದ ಕೇಂದ್ರ ಸರ್ಕಾರ
ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ ಕೆಲ ದಿನಗಳ ಹಿಂದೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಈ ಹೋರಾಟದ ಕಾವನ್ನರಿತ ಕೇಂದ್ರ ಸರ್ಕಾರ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮಗಳಿಗೆ ಬ್ರೇಕ್ ಹಾಕಲು ಮಸೂದೆಯೊಂದನ್ನು ಜಾರಿ ತರುವುದಾಗಿ ಭರವಸೆ ನೀಡಿತ್ತು.
ಅದರಂತೆ ಇಂದು (ಬುಧವಾರ, ಜು.29) ನಡೆದ ಮಳೆಗಾಲದ ಅಧಿವೇಶದಲ್ಲಿ ಸಾರ್ವಜನಿಕ ಪರೀಕ್ಷಾ ತಿದ್ದುಪಡಿ ಮಸೂದೆ- 2026 (Anti-Paper Leak Bill Passed) ನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಬಿಲ್ ಅಂಗೀಕಾರವಾಗುತ್ತಿದ್ದಂತೆ ಸದನವನ್ನು ಮುಂದೂಡಲಾಗಿದ್ದು, ನಾಳೆ (ಗುರುವಾರ, ಜು.30) ಬೆಳಿಗ್ಗೆ 11 ಗಂಟೆಗೆ ಅಧಿವೇಶನ ಮುಂದುವರಿಯಲಿದೆ.
ಈ ಮಸೂದೆ ಏನು ಹೇಳುತ್ತದೆ?
ದೇಶದಲ್ಲಿ ನಡೆಯುವ ಹಲವಾರು ಪರೀಕ್ಷೆಗಳಲ್ಲಿ ಅಕ್ರಮ ನಡೆಯುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಈ ಮಸೂದೆಯನ್ನು ಅಧಿವೇಶನದ ಮುಂದೆ ಪ್ರಸ್ತಾಪಿಸಿ, ಅಂಗೀಕಾರವನ್ನು ಪಡೆದುಕೊಂಡಿದೆ. ಈ ಮಸೂದೆಯಲ್ಲಿ ಶಿಕ್ಷೆಯ ಪ್ರಮಾಣವನ್ನು ಕಠಿಣಗೊಳಿಸುವ ಮೂಲಕ ಅಕ್ರಮ ತಡೆಗೆ ಸರ್ಕಾರ ಮುಂದಾಗಿದೆ.
ಈ ಮಸೂದೆಯಲ್ಲಿರುವಂತೆ, ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಹತ್ತು ವರ್ಷಗಳ ಕಾರಾಗ್ರಹ ಶಿಕ್ಷೆ, ಹಾಗೂ 50 ಲಕ್ಷದ ವರೆಗೆ ದಂಡವಿಧಿಸಲು ಅವಕಾಶವನ್ನು ನೀಡಲಾಗಿದೆ. ಪರೀಕ್ಷೆ ನಡೆಸುವ ಏಜನ್ಸಿ ಅಕ್ರಮದಲ್ಲಿ ಭಾಗಿಯಾಗಿದ್ದರೆ ಗರಿಷ್ಠ 5 ಕೋಟಿ ದಂಡವನ್ನು ಪಾವತಿಸಬೇಕು, ಹಾಗೂ 8 ವರ್ಷದ ವರೆಗೆ ಈ ಏಜನ್ಸಿಗೆ ಯಾವುದೇ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬಾರದು.
ಅಂತಯೇ ಹಾಗೂ ಈ ಪರೀಕ್ಷಾ ಅಕ್ರಮ ಪ್ರಕರಣಗಳ ವಿಚಾರಣೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಿ ಮೂರು ತಿಂಗಳ ಒಳಗಾಗಿ ಪ್ರಕರಣ ವಿಲೇವಾರಿಯಾಗಬೇಕು. ಮೂರು ತಿಂಗಳ ಮಿತಿಯಲ್ಲಿ ತನಿಖೆ ನಡೆದು ಚಾರ್ಜ್ಶೀಟ್ ಸಲ್ಲಿಸಿಕೆ ಆಗಬೇಕೆಂದು, ಕೇಂದ್ರ ತನಿಖಾ ಸಂಸ್ಥೆಗಳು ಇದರ ಮೇಲ್ವಿಚಾರಣೆ ಮಾಡಲಿದೆ ಎಂದು ನಮೂದಿಸಲಾಗಿದೆ.
ಈದೀಗ ಈ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ನಂತರದ ದಿನಗಳಲ್ಲಿ ರಾಜ್ಯಸಭೆ ಆಮೇಲೆ ರಾಷ್ಟ್ರಪತಿಗಳ ಅಂಕಿತ ದೊರೆತ ಮೇಲೆ ಕಾಯಿದೆಯಾಗಿ ಮಾರ್ಪಡಲಿದೆ.
ಇತ್ತ ಆಡಳಿತ ಪಕ್ಷದವರು ಮಸೂದೆ ಮಂಡನೆ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಹಾಗೂ I.N.D.I.A ಮೈತ್ರಿಕೂಟದ ಪಕ್ಷಗಳು ಅಧಿವೇಶನದಲ್ಲಿ ಗದ್ದಲದ ವಾತಾವರಣವನ್ನು ಉಂಟುಮಾಡಿದ ಹಿನ್ನಲೆಯಲ್ಲಿ ಧ್ವನಿಮತದ ಆಧಾರದಲ್ಲಿ ಮಸೂದೆ ಅಂಗೀಕಾರವಾಗಿದೆ, (ಏಜನ್ಸೀಸ್).