- ಚುನಾವಣೆಗಳು ಎದುರಾಗುವ ರಾಜ್ಯಗಳಿಗೆ ಬಜೆಟ್ನಲ್ಲಿ ಬಂಪರ್ ಕೊಡಿಗೆಗಳು ಸಿಗುವುದು ಸಹಜ
- ಇಂದು ಮಂಡನೆಯಾದ ಕೇಂದ್ರ ಬಜೆಟ್ನಲ್ಲಿಯೂ ಈ ಮಾತು ನಿಜವಾಗಿದೆ
- ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆ
ನವದೆಹಲಿ: ಯಾವುದೇ ರಾಜ್ಯಗಳಲ್ಲಿ ಚುನಾವಣೆಗಳು ಎದುರಾಗುವ ಸಮಯದಲ್ಲಿ ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಂದ ಬಜೆಟ್ ( Central Budget 2026 ) ಮಂಡನೆಯಾದರೆ, ಆಯಾ ರಾಜ್ಯಗಳಿಗೆ ಭರಪೂರ ಕೊಡುಗೆಗಳು ಸಿಗುತ್ತವೆ. ಇದು ವಾಸ್ತವ ಕೂಡ ಹೌದು. ಇದು ಹೊಸ ಪದ್ಧತಿಯೇನಲ್ಲ, ಇದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಈ ಮಾತು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಇಂದು ಮಂಡನೆಯಾದ ಕೇಂದ್ರ ಬಜೆಟ್ನಲ್ಲಿ ಚುನಾವಣಾ ರಾಜ್ಯಗಳಾದ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಅಸ್ಸಾಂ ರಾಜ್ಯಗಳಿಗೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಲಾಗಿದೆ.
ಕಳೆದ ವರ್ಷ ಅಂದರೆ, 2025ರ ಬಜೆಟ್ ಮಂಡನೆ ವೇಳೆ ಬಿಹಾರ ರಾಜ್ಯದ ಮೇಲೆ ವಿಶೇಷ ಗಮನ ಹರಿಸಲಾಗಿತ್ತು. ಅದೇ ರೀತಿ, ಈ ಬಾರಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಹಾಗೂ ಕೇರಳ ಮೇಲೆ ಕೇಂದ್ರಿಕರಿಸಲಾಗಿದೆ. ಮುಂಬರುವ ಏಪ್ರಿಲ್ ತಿಂಗಳಲ್ಲಿ ಈ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು, ಜವಳಿ, ರಸ್ತೆ ಮತ್ತು ರೈಲು ಸೌಕರ್ಯ ಮತ್ತು ರೇರ್ ಅರ್ಥ್ ಮೈನಿಂಗ್ ಕ್ಷೇತ್ರಗಳಲ್ಲಿ ಈ ರಾಜ್ಯಗಳಿಗೆ ಬಂಪರ್ ಘೋಷಣೆ ಮಾಡಲಾಗಿದೆ. ಇದಿಷ್ಟೇ ಅಲ್ಲದೆ, ಪ್ರವಾಸೋದ್ಯಮ ಮತ್ತು ತೀರ್ಥಯಾತ್ರೆಗಳನ್ನು ಮುಂದಿಟ್ಟುಕೊಂಡು ವಿಶೇಷ ಕೊಡುಗೆಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಘೋಷಣೆ ಮಾಡಿದ್ದಾರೆ. ಹಾಗಾದರೆ, ಯಾವ ರಾಜ್ಯಗಳಿಗೆ ಏನೆಲ್ಲ ಕೊಡುಗೆಗಳು ಸಿಕ್ಕಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಪಶ್ವಿಮ ಬಂಗಾಳ
* ಪರಿಸರ ಸ್ನೇಹಿ ಸರಕು ಸಾಗಣೆಯನ್ನು ಉತ್ತೇಜಿಸಲು ಪೂರ್ವದ ಡಂಕುನಿಯಿಂದ ಪಶ್ಚಿಮದ ಸೂರತ್‌ವರೆಗೆ ಹೊಸ ಮೀಸಲಾದ ಸರಕು ಸಾಗಣೆ ಕಾರಿಡಾರ್ ನಿರ್ಮಾಣ.
* ಐದು ಪೂರ್ವೋದಯ ರಾಜ್ಯಗಳಲ್ಲಿ ಐದು ಪ್ರವಾಸೋದ್ಯಮ ತಾಣಗಳ ಸೃಷ್ಟಿ ಮತ್ತು 4,000 ಇ-ಬಸ್‌ಗಳಿಗೆ ಅವಕಾಶ ಕಲ್ಪಿಸಲಾಗುವುದು.
* ದುರ್ಗಾಪುರದಲ್ಲಿ ಉತ್ತಮ ಸಂಪರ್ಕ ಹೊಂದಿರುವ ಸಮಗ್ರ ಪೂರ್ವ ಕರಾವಳಿ ಕೈಗಾರಿಕಾ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುವುದು.
ತಮಿಳುನಾಡು
* ಖನಿಜ ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡುಗಳಿಗೆ ನಿರ್ಣಾಯಕ ಖನಿಜ ಸೌಲಭ್ಯಗಳನ್ನು ಸ್ಥಾಪಿಸಲು ಬೆಂಬಲ ನೀಡುವುದು.
* ನಗರಗಳ ನಡುವೆ ಬೆಳವಣಿಗೆಯ ಸಂಪರ್ಕ ಸೇತುವೆಯಾಗಿ ಏಳು ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಮುಂಬೈನಿಂದ ಪುಣೆ, ಪುಣೆಯಿಂದ ಹೈದರಾಬಾದ್, ಹೈದರಾಬಾದ್ನಿಂದ ಬೆಂಗಳೂರು, ಹೈದರಾಬಾದ್ನಿಂದ ಚೆನ್ನೈ, ಚೆನ್ನೈನಿಂದ ಬೆಂಗಳೂರು, ದೆಹಲಿಯಿಂದ ವಾರಣಾಸಿ ಹಾಗೂ ವಾರಣಾಸಿಯಿಂದ ಸಿಲಿಗುರಿವರೆಗೆ ಹೈಸ್ಪೀಡ್ ರೈಲು ಕಾರಿಡಾರ್.
* ತಮಿಳುನಾಡು ಮತ್ತು ಆಂಧ್ರಪ್ರದೇಶದ ಗಡಿ ಪ್ರದೇಶಗಳಲ್ಲಿ ಪುಲಿಕಾಟ್ ಸರೋವರದಲ್ಲಿ ಪಕ್ಷಿ ವೀಕ್ಷಣೆಗಾಗಿ ಹಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು.
* ದೇವಾಲಯಗಳ ಪಟ್ಟಣವಾದ ತಮಿಳುನಾಡು ಸೇರಿದಂತೆ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಮುಂದಿನ ಐದು ವರ್ಷಗಳಲ್ಲಿ 20,000 ಕೋಟಿ ರೂ.ಗಳ ಅನುದಾನ ಘೋಷಣೆ.
ಕೇರಳ
* ಖನಿಜ ಸಮೃದ್ಧ ರಾಜ್ಯಗಳಾದ ಒಡಿಶಾ, ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಿಗೆ ನಿರ್ಣಾಯಕ ಖನಿಜ ಸೌಲಭ್ಯಗಳನ್ನು ಸ್ಥಾಪಿಸಲು ಬೆಂಬಲ ನೀಡಲು ಹಣಕಾಸು ಸಚಿವರು ಪ್ರಸ್ತಾಪಿಸಿದ್ದಾರೆ.
* ಆಮೆಗಳ ಗೂಡುಕಟ್ಟುವ ಸ್ಥಳಗಳು, ಆಮೆ ಹಾದಿಗಳನ್ನು ಅಭಿವೃದ್ಧಿಪಡಿಸಲಾಗುವುದು.
ಅಸ್ಸಾಂ
ದೇವಾಲಯಗಳ ಪಟ್ಟಣವಾದ ಅಸ್ಸಾಂ ಸೇರಿದಂತೆ ಟೈಯರ್ 2 ಮತ್ತು ಟೈಯರ್ 3 ನಗರಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸಲು ಮುಂದಿನ ಐದು ವರ್ಷಗಳಲ್ಲಿ 20,000 ಕೋಟಿ ರೂ.ಗಳ ವಿನಿಯೋಗ.